FACT CHECK | ಡೀಪ್ ಫೇಕ್ ಬಳಸಿ ನಟಿ ರಶ್ಮಿಕಾ ಮಂದಣ್ಣ ನಕಲಿ ವಿಡಿಯೋ ವೈರಲ್
ನಟಿ ರಶ್ಮಿಕಾ ಮಂದಣ್ಣ ಕೆಂಪು ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಫ್ಯಾನ್ಸ್ಗಳನ್ನ ಹೊಂದಿರೋ ನಟಿ ರಶ್ಮಿಕಾ ಮಂದಣ್ಣ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ರಶ್ಮಿಕಾ ಈ ಥರ ಡ್ರೆಸ್ ಹಾಕಿದ್ದಾರಾ? ಬಿಕಿನಿಯಲ್ಲಿ ಫಾಲ್ಸ್ನಲ್ಲಿ ನಿಂತು ವಿಡಿಯೋ ಮಾಡಿದ್ದಾರಾ? ಇದು ನಿಜವಾಗಿಯೂ ಅವರೇನಾ ? ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಹಾಗಿದ್ದರೆ ನಿಜವಾಗಿಯೂ ರಶ್ಮಿಕಾ ಮಂದಣ್ಣ ಇಂತಹ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮದಲ್ಲಿ ನಟಿ ರಶ್ಮಿಕಾ ಮಂದಣ್ಣಳದ್ದು ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದು, ಅದರ ಸತ್ಯಾಸತ್ಯತೆಯನ್ನು ತಿಳಿಯಲು ಗೂಗಲ್ ಸರ್ಚ್ ಮಾಡಿದಾಗ, 19 ಏಪ್ರಿಲ್ 2024ರಂದು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ.
View this post on Instagram
ಕೊಲಂಬಿಯಾದ ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಡೇನಿಯೆಲಾ ವಿಲ್ಲಾರ್ರಿಯಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಇದರಲ್ಲಿ ಅವರು ಸ್ಟ್ರಾಪ್‌ಲೆಸ್ ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡುತ್ತಿದ್ದಾರೆ. ಇದರಲ್ಲಿ AI ಬಳಸಿ ಮಾರ್ಫಿಂಗ್ ಮಾಡಲಾಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಮುಖವನ್ನು ಮಾಡೆಲ್‌ನ ಮುಖದೊಂದಿಗೆ ಎಐ ಸಹಾಯದಿಂದ ಸಂಯೋಜಿಸಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ರಶ್ಮಿಕಾ ಅವರ ಇದೇ ರೀತಿಯ ವೀಡಿಯೊ ವೈರಲ್ ಆಗಿತ್ತು. ಆ ವಿಡಿಯೋ ಕೂಡ ಎಐ ಸಹಾಯದಿಂದ ಮಾರ್ಫಿಂಗ್ ಮಾಡಿ ಮಾಡಲಾಗಿತ್ತು. ಹಳೆಯ ವೈರಲ್ ವಿಡಿಯೋದಲ್ಲಿ ಬ್ರಿಟನ್ ಮೂಲದ ಜಾರಾ ಪಟೇಲ್ ಅವರ ದೇಹದ ಮೇಲೆ ರಶ್ಮಿಕಾ ಅವರ ಮುಖವನ್ನು ಅಳವಡಿಸಲಾಗಿತ್ತು. ಆದರೆ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ರಶ್ಮಿಕಾಗೆ ಡೀಪ್ ಫೇಕ್ ಕಾಟ ಇದೇ ಮೊದಲಲ್ಲ. ಕಳೆದ ಬಾರಿಯೂ ರಶ್ಮಿಕಾ ಮಂದಣ್ಣ ‘ಡೀಪ್’ ದುನಿಯಾದ ಕಳ್ಳಾಟಕ್ಕೆ ತುತ್ತಾಗಿದ್ರು.ಆಗ 23 ವರ್ಷದ ನವೀನ್ ಎಂಬಾತನನ್ನ ಪೊಲೀಸ್ರು ಬಂಧಿಸಿದ್ದರು. ಇದೀಗ ಮತ್ತೆ ಅಂಥಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೊಲಂಬಿಯಾದ ಸ್ಯಾಂಟ್ಯಾಂಡರ್ ಮೂಲದ ಮಾಡೆಲ್ ಡೇನಿಯಲಾ ವಿಲ್ಲಾರ್ರಿಯಲ್ ವಿಡಿಯೋಗೆ ರಶ್ಮಿಕಾ ಮುಖ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚುನಾವಣೆಯ ವೇಳೆ ಪ್ರಧಾನಿ ನೀಡುವ ಭರವಸೆಗಳಿಗೆ ಅರ್ಥವಿಲ್ಲ ಎಂದು ಹೇಳಿದ್ರಾ ಶಾ