FACT CHECK | ಮಣ್ಣಿನ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ ನಾಯಿಯನ್ನು ರಕ್ಷಿಸುವ ವಿಡಿಯೋ 2021ರ ಭೂಕುಸಿತದ್ದು!
ದೇವರ ನಾಡು ಕೇರಳದಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವು ನೋವುಗಳ ನರಳಾಟ,ಆರ್ತನಾದ ಕೇಳಿ ಬರುತ್ತಿದೆ. ಇದ್ದಕ್ಕಿದ್ದಂತೆ ಸಂಭವಿಸಿದ ಘಟನೆಯಿಂದ ಹೆಣದ ರಾಶಿ ಕಣ್ಣಿಗೆ ರಾಚುತ್ತಿದೆ. ಕೇರಳದಲ್ಲಿ ಕಂಡು ಬರುತ್ತಿರುವ ಕಣ್ಣೀರ ಕಥೆಗಳು ಒಂದೆರಡಲ್ಲ.
*ಬೆಟ್ಟದ ಜೀವಗಳ ಆಕ್ರಂದನ : ಮಣ್ಣಿನ ಅವಶೇಷದಲ್ಲಿ ಬೊಗಳುತ್ತಿದ್ದ ನಾಯಿ ರಕ್ಷಣೆ*https://t.co/HAwz9LJQAw
*Download the App and know your city news* – https://t.co/HTbKZOoDTa pic.twitter.com/5fa3tbwuIi— PublicNext (@ElectReps) August 1, 2024
ವಯನಾಡಿನ ಭೂಕುಸಿತದ ಮಣ್ಣಿನ ಅವಶೇಷಗಳಡಿ ಕೇವಲ ಮನುಷ್ಯರು ಮಾತ್ರ ಸಿಲುಕಿಲ್ಲ. ಜನರ ಪ್ರೀತಿ ಪಾತ್ರವಾಗಿದ್ದ ಮನೆಯ ನಿಯತ್ತಿನ ಪ್ರಾಣಿ, ನಾಯಿಗಳು ಅಪಾಯದಲ್ಲಿ ಸಿಲುಕಿವೆ. ಪ್ರವಾಹದ ನೀರಿನಲ್ಲಿ ಮನುಷ್ಯರು, ಮನೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಬೆಟ್ಟ-ಗುಡ್ಡದಲ್ಲಿ ವಾಸಿಸುತ್ತಿದ್ದ ಸಾಕು ಪ್ರಾಣಿಗಳು ಮಣ್ಣಿನಲ್ಲಿ ಸಿಲುಕಿವೆ ಎಂದು ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ನಾಯಿ ಮತ್ತು ನಾಯಿ ಮರಿಗಳನ್ನು ರಕ್ಷಿಸುತ್ತಿರುವ ವಿಡಿಯೋವನ್ನು ಪಬ್ಲಿಕ್ ನೆಕ್ಸ್ಟ್ ಶಾರ್ಟ್ ನ್ಯೂಸ್ ಆಪ್‌ನ ಎಕ್ಸ್ ಪೋಸ್ಟ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಯಿ ಕುತ್ತಿಗೆಯನ್ನು ಹೊರ ಚಾಚಿ ಬೊಗಳುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುವಾಗ ರಕ್ಷಣಾ ತಂಡ ನಾಯಿ ಮತ್ತು ಮರಿಗಳನ್ನು ರಕ್ಷಿಸಿದೆ ಪ್ರತಿಪಾದಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜಿತೇಂದ್ರ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Big salute to rescue team….A dog and her two puppies rescued from Landslide…#WayanadDisaster #WaynadLandslide #Disaster
pic.twitter.com/DKH66jHG8v— Jitendra Meena (@JitendraMeenaI) August 1, 2024
ನಾಯಿಯ ಶಬ್ಧ ಕೇಳಿ ಸ್ಥಳಕ್ಕೆ ಹೋಗಿರುವ ರಕ್ಷಣಾ ಸಿಬ್ಬಂದಿ ಬೊಗಳುತ್ತಿದ್ದ ನಾಯಿಯ ರಕ್ಷಣೆ ಮಾಡಿದ್ದಾರೆ. ನಾಯಿ, ನಾಯಿ ಮರಿಗಳು ಬದುಕಿ ಬಂದ ವಿಡಿಯೋಗಳು ಕರುಣಾಜನಕವಾಗಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
Big salute to rescue team….A dog and her two puppies rescued from Landslide…#WayanadDisaster #WaynadLandslide #Disaster pic.twitter.com/LYNtAFEvCZ
— Raajeev Chopra (@Raajeev_Chopra) July 31, 2024
ಈ ದೃಶ್ಯವು ಜುಲೈ 30 ರಂದು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ವಿಡಿಯೋ ಎಂದು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನಾಯಿ ಮತ್ತು ಮರಿಗಳನ್ನು ರಕ್ಷಣೆ ಮಾಡುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ 2021 ರಲ್ಲಿ ಸಂಭವಿಸಿದ ಭೂಕುಸಿತದ ವಿಡಿಯೋ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಇದೇ ವಿಡಿಯೋವನ್ನು ಫೇಸ್‌ಬುಕ್ ಪುಟದಲ್ಲಿ 17 ಅಕ್ಟೋಬರ್, 2021 ರಂದು ಅಪ್‌ಲೋಡ್ ಮಾಡಿರುವುದನ್ನು ಕಂಡುಕೊಂಡಿದ್ದೇವೆ, ಕೇರಳದಲ್ಲಿ ಭೂಕುಸಿತದಿಂದ ನಾಯಿ ಮತ್ತು ಆರು ಮರಿಗಳನ್ನು ರಕ್ಷಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಭೂಕುಸಿತದಿಂದಾಗಿ ಮಣ್ಣಿನ ಅವಶೇಷಗಳಡಿ ಸಿಲುಕಿದ ನಾಯಿಯ ಕುತ್ತಿಗೆಯ ಭಾಗ ಮಾತ್ರ ಹೊರ ಉಳಿದಿತ್ತು. ನಾಯಿಯ ಆಕ್ರಂದನ ಕೇಳಿದ ಸ್ಥಳೀಯರು ಮಣ್ಣಿನಲ್ಲಿ ಹೂತುಕೊಂಡಿದ್ದ ನಾಯಿ ಮತ್ತು ಅದರ ಆರು ಮರಿಗಳನ್ನು ಹೊರೆತೆಗೆದಿದ್ದಾರೆ. ಆದರೆ ಕೇವಲ ಎರಡು ಮರಿಗಳ ಜೀವಗಳನ್ನು ಮಾತ್ರ ಉಳಿಸಲು ಸಾಧ್ಯವಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯನ್ನು ಅಕ್ಟೋಬರ್ 14, 2021 ರಂದು ನ್ಯೂಸ್ ಮಿನಿಟ್ ಮಾಡಿದ ವರದಿ ಲಭ್ಯವಾಗಿದೆ. ಕೇರಳದ ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಗಳ ಗಡಿಯ ಭಾಗದಲ್ಲಿರುವ ದಂಪತಿಗಳಾದ ಸಬಿತಾ ಮತ್ತು ಅಶ್ರಫ್ ಅವರು ನಾಯಿಯ ಆಕ್ರಂದನ ಕೇಳಿದ್ದಾರೆ ಎಂದು ವರದಿ ಸೂಚಿಸಿದೆ. ಎರಡು ದಿನಗಳ ನಂತರ, ದಂಪತಿಗಳು ನಾಯಿಯ ಅಳುವನ್ನು ಸೂಕ್ಷ್ಮವಾಗಿ ಗಮನಿಸಿ ಮಣ್ಣಿನೊಳಗೆ ಹೂತುಹೋದ ನಾಯಿಯನ್ನು ಅದರ ಮರಿಗಳನ್ನು ಪತ್ತೆ ಮಾಡಿದ್ದಾರೆ. ನಂತರ ನಾಯಿ ಮತ್ತು ಅದರ ಮರಿಗಳನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಕೂಡ ಘಟನೆಯ ಬಗ್ಗೆ ವರದಿ ಮಾಡಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಪಾಲಕಾಡ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ಮಣ್ಣಿನಲ್ಲಿ ಹೂತುಹೋಗಿದ್ದ ನಾಯಿ ಮತ್ತು ಮರಿಗಳನ್ನು ರಕ್ಷಿಸಿದ ಹಳೆಯ ವಿಡಿಯೋವನ್ನು 2024ರ ವಯನಾಡಿನ ಭೂಕುಸಿತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನೋಡ ನೋಡುತ್ತಿದ್ದಂತೆ ಮನೆಯೊಂದು ನೀರಿನಲ್ಲಿ ಮುಳುಗುವ ದೃಶ್ಯ ಕೇರಳದಲ್ಲ! ಮತ್ತೆಲ್ಲಿಯದ್ದು?