FACT CHECK | ಬೆಂಗಳೂರಿಗೆ ಕ್ಷುದ್ರಗ್ರಹ ಅಪ್ಪಳಿಸಿದ್ದು ನಿಜವೇ?

2 ಫುಟ್‍ಬಾಲ್ ಮೈದಾನಗಳ ಗಾತ್ರವನ್ನು ಹೊಂದಿರುವ ಬೃಹತ್ ಕ್ಷುದ್ರಗ್ರಹವೊಂದು ಸೆಪ್ಟೆಂಬರ್ 15ರಂದು ಭೂಮಿಗೆ ಅಪ್ಪಳಿಸಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ತಿಳಿಸಿತ್ತು. 2024 ಒಎನ್ ಎಂಬ ಹೆಸರಿನ ಕ್ಷುದ್ರಗ್ರಹ ಗಂಟೆಗೆ 40,235 ಕಿ.ಮೀ ವೇಗದಲ್ಲಿ ಭೂಗ್ರಹದತ್ತ ಧಾವಿಸುತ್ತಿದ್ದ ಈ ಕ್ಷುದ್ರಗ್ರಹವನ್ನು ಕಂಡು ವಿಜ್ಞಾನಿಗಳು ಆತಂಕಗೊಂಡಿದ್ದರು. ಈ ಕ್ಷುದ್ರಗ್ರಹ ಭೂಮಿಯ ಮೇಲೆ ಬಿದ್ದರೆ ಸಂಪೂರ್ಣ ವಿನಾಶವಾಗುತ್ತದೆ ಎಂಬ ದೊಡ್ಡ ಚರ್ಚೆ ಕೂಡ ನಡೆದಿತ್ತು.

ಈ ಮಧ್ಯೆ,  ಸೆಪ್ಟೆಂಬರ್ 15, 2024 ರಂದು ಬೆಂಗಳೂರು ನಗರಕ್ಕೆ ಕ್ಷುದ್ರಗ್ರಹ ಅಪ್ಪಳಿಸಿದೆ ಎಂದು, ಹಸಿರು ಉಲ್ಕೆಯೊಂದು ಭೂಮಿಯ ಕಡೆಗೆ ಬರುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಟ್ರೆಂಡಿಂಗ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸೆ. 16 ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು,  “ಬೆಂಗಳೂರಿನಲ್ಲಿ ಎರಡು ಕ್ಷುದ್ರಗ್ರಹ ನೋಡಿ’’ ಎಂಬ ಶೀರ್ಷಿಕೆಯೊಂದಿಗೆ, ಈ ಘಟನೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ ಎಂದು ಪ್ರತಿಪಾದಿಸಲಾಗಿದೆ.

 

View this post on Instagram

 

A post shared by yamayu officialedit (@rexosqk_edit)

ಹಾಗೆಯೇ ಇನ್‌ಸ್ಟಾಗ್ರಾಮ್‌ನಲ್ಲಿಯೂ ಇದೇ ವಿಡಿಯೋವನ್ನು ಹಂಚಿಕೊಂಡು 15 ಸೆಪ್ಟಂಬರ್ 2024ರಂದು ಕ್ಷುದ್ರಗ್ರಹವೊಂದು ಬೆಂಗಳೂರಿಗೆ ಅಪ್ಪಳಿಸಿದೆ ಎಂದು ಬರೆಯಲಾಗಿದೆ. ಹಾಗಿದ್ದರೆ ನಿಜಾಗಿಯೂ ಈ ಘಟನೆ ಬೆಂಗಳೂರಿನಲ್ಲಿ ಅಥವಾ ಭೂಮಿಯ ಯಾವುದೇ ಭಾಗಗಳಲ್ಲಿ ನಡೆದಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಮೊದಲಿಗೆ ಸೆಪ್ಟಂಬರ್ 15ರಂದು ವೈರಲ್ ವಿಡಿಯೋದಲ್ಲಿ ಹೇಳಿರುವಂತಹ ಕ್ಷುದ್ರಗ್ರಹವೊಂದು ಬೆಂಗಳೂರಿಗೆ ಅಪ್ಪಳಿಸಿದೆಯೇ ಎಂದು ಸರ್ಚ್ ಮಾಡಿದಾಗ, ಅಂತಹ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಮತ್ತಷ್ಟು ಸರ್ಚ್ ಮಾಡಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ ನಲ್ಲಿ ಸರ್ಚ್ ಮಾಡಿದಾಗ, ಜುಲೈ 06, 2024 ರಂದು, ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ಉಲ್ಕಾಪಾತ ಕಂಡುಬಂದಿದೆ ಎಂಬ ಶೀರ್ಷಿಕೆಯೊಂದಿಗೆ “ಗ್ಲೋಬಲ್ ಡಿಸಾಸ್ಟರ್ಸ್ ನ್ಯೂಸ್” ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಇದರ ಸುದೀರ್ಘ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ

ಈ ಘಟನೆಯು ಇಸ್ತಾಂಬುಲ್‌ನಲ್ಲಿ ಕಂಡುಬಂದಿದ್ದು, ಅಂಕಾರಾ, ಸಕಾರ್ಯ ಮತ್ತು ಬುರ್ಸಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಉಲ್ಕೆಯು ಆಕಾಶದಲ್ಲಿ ಕಾಣಿಸಿಕೊಂಡಿದೆ ಎಂದು  ಡೈಲಿಮೋಷನ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುವ Haberler.com ನ ವಿಡಿಯೋದಲ್ಲಿ ವಿವರಣೆಯಲ್ಲಿ ತಿಳಿಸಲಾಗಿದೆ.

ಈ ವೀಡಿಯೊವನ್ನು ಜುಲೈ 6, 2024 ರಂದು Torquenews ಯೂಟ್ಯೂಬ್​ ಚಾನೆಲ್​ನಲ್ಲಿ ‘ಇಸ್ತಾಂಬುಲ್ ಮತ್ತು ಟರ್ಕಿಯ ಇತರ ನಗರಗಳಲ್ಲಿ ಬೃಹತ್ ಉಲ್ಕೆಯು ಕಾಣಿಸಿಕೊಂಡಿದೆ’ ಎಂದು ಪೋಸ್ಟ್ ಮಾಡಲಾಗಿದೆ.

ಹಲವಾರು ಟರ್ಕಿಶ್ ಬಳಕೆದಾರರು ಆಕಾಶದಲ್ಲಿ ಈ ಬೆಂಕಿಯ ಚೆಂಡುಗಳನ್ನು ನೋಡಿದ್ದಾರೆಂದು ಫೋಸ್ಟ್ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಜುಲೈನಲ್ಲಿ ವೈರಲ್ ಆಗಿತ್ತು.

ಆ ಬಗ್ಗೆ ದಿ ಸನ್​​ನಲ್ಲಿ ಜುಲೈ 6, 2024 ರಂದು ಲೇಖನವೂ ಪ್ರಕಟವಾಗಿತ್ತು. ‘ಸ್ಕೈ ಫೈರ್‌ಬಾಲ್: ಬೃಹತ್ ಆಕಾರದ ನಿಗೂಢ ಹಸಿರು ಉಲ್ಕೆಯು ರಾತ್ರಿಯ ಆಕಾಶವನ್ನು ಬೆಳಗಿಸಿತು: ಜನರು ಆಘಾತಕ್ಕೊಳಗಾದರು’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.

ದಿ ಗಾರ್ಡಿಯನ್ ವರದಿಯಲ್ಲಿ ಹೀಗಿದೆ: ಉಲ್ಕಾಪಾತವು ಸಫ್ರಾನ್ಬೋಲು ನಗರದಲ್ಲಿ ಕಂಡುಬಂದಿದೆ. ಸಫ್ರಾನ್ಬೋಲುವಿನಿಂದ 100 ಕಿಲೋಮೀಟರ್ ದೂರದಲ್ಲಿರುವ ಕಸ್ತಮೋನುದಲ್ಲಿಯೂ ಇದು ಕಾಣಿಸಿಕೊಂಡಿದೆ. ಈ ಉಲ್ಕಾಪಾತವು ಟರ್ಕಿಯ ಮೇಲೆ ಆಕಾಶವನ್ನು ಬೆಳಗಿಸಿತು, ಮೋಡಗಳ ಮೂಲಕ ಹಸಿರು ಬೆಳಕನ್ನು ಹಾರಿಸಿದೆ ಎಂದು ಬರೆಯಲಾಗಿದೆ.

ಹಾಗೆಯೆ ಟರ್ಕಿಶ್ ಬಾಹ್ಯಾಕಾಶ ಸಂಸ್ಥೆ ಕೂಡ ಉಲ್ಕಾಪಾತ ಸಂಭವಿಸಿದೆ ಎಂದು ದೃಢಪಡಿಸಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜುಲೈ 2024 ರಂದು ಟರ್ಕಿಯಲ್ಲಿ ನಡೆದಿರುವ ಘಟನೆಯನ್ನು, ಸೆಪ್ಟೆಂಬರ್ 15, 2024 ರಂದು ಬೆಂಗಳೂರು ನಗರಕ್ಕೆ ಕ್ಷುದ್ರಗ್ರಹ ಅಪ್ಪಳಿಸಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅದಾನಿ ಸಂಸ್ಥೆ ಕೀನ್ಯಾದ ಅಧಿಕಾರಿಗಳಿಗೆ ಲಂಚ ನೀಡಿದೆ ಎಂದು ಸಂಸ್ಥೆಯೇ ಒಪ್ಪಿಕೊಂಡಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights