FACT CHECK | 1954ರ ಮಹಾ ಕುಂಭಮೇಳದಲ್ಲಿ ನೆಹರು ಪವಿತ್ರ ಸ್ನಾನ ಮಾಡಿದ್ದರು ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ಕೊನೆಗೊಳ್ಳುತ್ತದೆಯೇ ಅಥವಾ ಆಹಾರ ದೊರೆಯುತ್ತದೆಯೇ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯ ನಂತರ ಹಲವು ಬಿಎಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರು 1954 ರ ಕುಂಭಮೇಳದ ಸಮಯದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿರುವ ಚಿತ್ರ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
@kharge @RahulGandhi @PChidambaram_IN @Pawankhera @SupriyaShrinate
Pl take clue from your big leader
Sri Jawaharlal Nehru eradicating poverty from the country by takinge a dip in the Ganga at Prayagraj Kumbh in 1954!
More than 800 poor people got instant salvation by going… pic.twitter.com/LIUuuKuRRr
— Damodar Hegde (@DamodarHegde4) January 29, 2025
ಎಕ್ಸ್ ಖಾತೆಯ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು “ದಯವಿಟ್ಟು ನಿಮ್ಮ ದೊಡ್ಡ ನಾಯಕರನ್ನು ನೋಡಿ, ಶ್ರೀ ಜವಾಹರಲಾಲ್ ನೆಹರು 1954 ರಲ್ಲಿ ಪ್ರಯಾಗರಾಜ್ ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡುವ ಮೂಲಕ ದೇಶದಿಂದ ಬಡತನವನ್ನು ನಿರ್ಮೂಲನೆ ಮಾಡಿದರ, ಮತ್ತು 800 ಕ್ಕೂ ಹೆಚ್ಚು ಬಡವರು ಅಲ್ಲಿಗೆ ಹೋಗಿ ಮೋಕ್ಷ ಪಡೆದರು. (ಸುಮಾರು 800 ಜನರನ್ನು ಬಲಿತೆಗೆದುಕೊಂಡ ದುರಂತ ಕಾಲ್ತುಳಿತಕ್ಕೆ ಸಾಕ್ಷಿಯಾಯಿತು) ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
Jawaharlal Nehru eradicating poverty from the country by taking a dip in the Ganga at Prayagraj Kumbh in 1954! More than 800 poor people got instant salvation by going there because of his presence. pic.twitter.com/jcN3Y0dAeV
— Dr. Kim Bahuna (@_agamya_) January 30, 2025
ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜವಾಹರಲಾಲ್ ನೆಹರು ಅವರ ತಾಯಿ ಸ್ವರೂಪರಾಣಿ ನೆಹರುರವರು ಜನವರಿ 1938 ರಲ್ಲಿ ನಿಧನರಾದ ಸಂದರ್ಭದಲ್ಲಿ ತನ್ನ ತಾಯಿಯ ಚಿತಾಭಸ್ಮವನ್ನು ವಿಸರ್ಜಿಸಿದ ನೆಹರು”ಎಂಬ ಶೀರ್ಷಿಕೆಯೊಂದಿಗೆ ಇಂಡಿಯಾ ಟುಡೇ ಫೋಟೋವನ್ನು ಹಂಚಿಕೊಂಡಿದೆ.

ಮುಶಿರುಲ್ ಹಸನ್ ಮತ್ತು ಪ್ರಿಯಾ ಕಪೂರ್ ಅವರ ‘ದಿ ನೆಹರೂಸ್: ಪರ್ಸನಲ್ ಹಿಸ್ಟರೀಸ್’ ಪುಸ್ತಕದ ಕುರಿತು ಇಂಡಿಯಾ ಟುಡೇ ಲೇಖನವನ್ನು ಪ್ರಕಟಿಸಿದ್ದು ಲಭ್ಯವಾಗಿದೆ. “ಭಾರತದ ಮೊದಲ ಕುಟುಂಬದ ಆತ್ಮೀಯ ಇತಿಹಾಸಗಳನ್ನು ಹೊರತರುವ ಅಪರೂಪದ ಚಿತ್ರಗಳ ಉತ್ತಮ ಸಂಶೋಧನೆಯ ಪುಸ್ತಕ…” ಎಂಬ ಶೀರ್ಷಿಕೆ ನೀಡಿದೆ. “ನೋವನ್ನು ಸಹಿಸಿಕೊಂಡು: ಜವಾಹರಲಾಲ್ ನೆಹರು ಅಲಹಾಬಾದ್‌ನಲ್ಲಿ ತಮ್ಮ ತಾಯಿಯ ಚಿತಾಭಸ್ಮವನ್ನು ವಿಸರ್ಜಿಸುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ನೆಹರು ಅವರ ವೈರಲ್ ಫೋಟೋವನ್ನು ಹಂಚಿಕೊಂಡಿದೆ.

1954 ರ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದ ಕುರಿತು ದಿ ಕ್ವಿಂಟ್ ವರದಿ ಲಭ್ಯವಾಗಿದೆ. “ಫೆಬ್ರವರಿ 4, 1954 ರಂದು ಪ್ರಕಟವಾದ ಅಮೃತ ಬಜಾರ್ ಪತ್ರಿಕಾ ವರದಿಯ ಪ್ರಕಾರ, ಸಂಗಮದಲ್ಲಿ ಸ್ನಾನ ಮಾಡುವ ಬಗ್ಗೆ ನೆಹರು ಅವರನ್ನು ಕೇಳಿದಾಗ, ಅವರು, “ನಾನು ಪವಿತ್ರ ಸ್ನಾನ ಮಾಡಲಿಲ್ಲ ಆದರೆ ಇತರ ಸ್ನಾನಗಳನ್ನು ಮಾಡಿದ್ದೇನೆ (sic)” ಎಂದು ಹೇಳಿದರು. ಆಗಿನ ಪ್ರಧಾನಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡದಿದ್ದರೂ, ದುರಂತ ಸಂಭವಿಸಿದಾಗ ಅವರು ಕುಂಭದಲ್ಲಿ ಹಾಜರಿದ್ದರು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
1954 ರ ಕುಂಭಮೇಳದ ಸಮಯದಲ್ಲಿ ನೆಹರು ನಿಜವಾಗಿಯೂ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೋ ಇಲ್ಲವೋ ಎಂಬುದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ವೈರಲ್ ಛಾಯಾಚಿತ್ರವನ್ನು ಸುಳ್ಳು ಸಂದರ್ಭದಲ್ಲಿ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 1954 ರ ಕುಂಭಮೇಳದ ಸಮಯದಲ್ಲಿ ಜವಾಹರಲಾಲ್ ನೆಹರು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಚಿತ್ರವು, ತಮ್ಮ ತಾಯಿಯ ಚಿತಾ ಭಸ್ಮವನ್ನು ವಿಸರ್ಜಿಸುವಾಗ ಸೆರೆಹಿಡಿದ ಚಿತ್ರವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
FACT CHECK | ನಿಧನರಾಗಿರುವ ಸಂತನನ್ನು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳು ಪೋಸ್ಟ್ ಹಂಚಿಕೆ

