FACT CHECK | ಭಾರತೀಯ ಕರೆನ್ಸಿ ನೋಟುಗಳಲ್ಲಿರುವ ಗಾಂಧಿ ಚಿತ್ರವನ್ನು ತೆಗೆಯಲು RBI ನಿರ್ಧರಿಸಿದೆಯೇ?
ಭಾರತೀಯ ಕರೆನ್ಸಿ ರೂಪಾಯಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ಪ್ರಸಾರವಾಗುತ್ತಿದ್ದು, ಭಾರತೀಯ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರವಿದ್ದು, ಕೇಂದ್ರ ಸರಕಾರ ಇದನ್ನು ತೆಗೆಯಲು ಹೊರಟಿದೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
अच्छा फिर सावरकर की लगा देना ताकि जब रुपया गिरेगा उससे पहले ही माफ़ी मांग लेंगा रुपया
— दिव्या कुमारी (@divyakumaari) February 17, 2025
@divyakumaari ಎಂಬ ಎಕ್ಸ್ ಬಳಕೆದಾರರು RBI ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಮೇಲೆ ‘ಮಹಾತ್ಮ ಗಾಂಧಿಯವರ ಚಿತ್ರವನ್ನು ಭಾರತೀಯ ನೋಟುಗಳಿಂದ ತೆಗೆದುಹಾಕಲಾಗುವುದು’ ‘ಹಾಗಾದರೆ ಸಾವರ್ಕರ್ ಹೆಸರನ್ನು ಹಾಕಿ. ಇದರಿಂದ ರೂಪಾಯಿ ಕೆಳಗೆ ಬಿದ್ದಾಗಲೆಲ್ಲ ಅವರು ಕ್ಷಮೆ ಕೇಳಬಹುದು’ ಎಂದು ಬರೆದುಕೊಂಡಿದ್ದಾರೆ.
क्या ऐसा हो सकता है..?? pic.twitter.com/6Tkix0ezKp
— ❤️ INDIAN ❤️ (@_Sweet_Parul_) February 17, 2025
ಇದೇ ರೀತಿಯ ಪೋಸ್ಟ್ ಅನ್ನು ಇನ್ನೋರ್ವ ಎಕ್ಸ್ ಬಳಕೆದಾರ @_Sweet_Parul_ ಸಹ ಹಂಚಿಕೊಂಡಿದ್ದಾರೆ. ‘ಇದು ನಡೆಯಬಹುದಾ’ ಎಂದು ಪ್ರಶ್ನಿಸಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ RBI ಈ ರೀತಿ ಏನಾದರೂ ಘೋಷಿಸಿದೆಯೇ ಎಂದು ಕಂಡುಕೊಳ್ಳಲು ಈ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಈ ರೀತಿಯ ಯಾವ ಮಾಹಿತಿಯೂ ಲಭ್ಯವಾಗಿಲ್ಲ.
ಅಲ್ಲದೆ ಈ ಹಿಂದೆ ಕೂಡ ನೋಟುಗಳಿಂದ ಮಹಾತ್ಮಾ ಗಾಂಧಿ ಚಿತ್ರವನ್ನು ತೆಗೆದು ಹಾಕಲಾಗುತ್ತದೆ. ಈ ಜಾಗಕ್ಕೆ ಬೇರೆ ಬೇರೆ ಸಾಧಕರ ಚಿತ್ರವನ್ನು ಹಾಕಲಾಗುತ್ತದೆ ಎಂದೆಲ್ಲ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ 2022ರಲ್ಲಿ ಸ್ವತಃ ಆರ್ಬಿಐ ಈ ಬಗ್ಗೆ ಪ್ರಕಟಣೆ ನೀಡಿತ್ತು.
![]()
‘ದಿ ಹಿಂದೂ’ನಲ್ಲಿ ಇದರ ವರದಿ ಇದ್ದು, ‘ಪ್ರಸ್ತುತ ಇರುವ ಕರೆನ್ಸಿ ನೋಟುಗಳು ಮತ್ತು ಬ್ಯಾಂಕ್ ನೋಟುಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿತ್ರ ತೆಗೆಯುವ ಯಾವುದೇ ಉದ್ದೇಶ ಇಲ್ಲ,’ ಎಂದು ಆರ್ಬಿಐ ಸ್ಪಷ್ಟಪಡಿಸಿತ್ತು.
ಇದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು RBI ವೆಬ್ಸೈಟ್ನಲ್ಲಿ ಇರುವ ಅಧಿಸೂಚನೆಗಳನ್ನು ಪರಿಶೀಲಿಸಿದಾಗ, ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಯಾವ ಅಧಿಸೂಚನೆಗಳೂ ಲಭ್ಯವಾಗಿಲ್ಲ.ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಕರೆನ್ಸಿಯಿಂದ ಮಹಾತ್ಮ ಗಾಂಧಿಯವರ ಚಿತ್ರವನ್ನು RBI ತೆಗೆದುಹಾಕಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದೆಹಲಿ ರೈಲು ನಿಲ್ದಾಣದ ಕಾಲ್ತುಳಿತ ಸಂತ್ರಸ್ತರನ್ನು ರಾಹುಲ್, ಪ್ರಿಯಾಂಕಾ ಭೇಟಿ ಮಾಡಿದ್ರಾ?

