ನಿಮ್ಮ ಕ್ರಮಗಳನ್ನು ಬೆಂಬಲಿಸುವ ಯಾವುದೇ ಕಾನೂನು ಇಲ್ಲ: ಯುಪಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

ಲಖನೌದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಪೋಸ್ಟರ್‌ಗಳಿಗೆ ಸಂಬಂಧಿಸಿದ ವಿಷಯವನ್ನು ಆಲಿಸಿದ ಸುಪ್ರೀಂ ಕೋರ್ಟ್ ಯುಪಿ ಸರ್ಕಾರದ ಕ್ರಮವನ್ನು ಬೆಂಬಲಿಸುವ ಯಾವುದೇ ಕಾನೂನು ಇಲ್ಲ ಎಂದು ಹೇಳಿದರು.

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದ ಆರೋಪಿಗಳ ಹೆಸರುಗಳು, ವಿಳಾಸಗಳು ಮತ್ತು ಫೋಟೋಗಳ ಹೋರ್ಡಿಂಗ್‌ಗಳನ್ನು ಉ.ಪ್ರ ಸರ್ಕಾರ ಲಖನೌನಲ್ಲಿ ಹಾಕಿತ್ತು. ಕಳೆದ ವಾರ ಹೈಕೋರ್ಟ್ ಈ ಕ್ರಮವು ಜನರ ಗೌಪ್ಯತೆಗೆ ಅನಗತ್ಯ ಹಸ್ತಕ್ಷೇಪವಾಗಿದೆ, ಅವರಲ್ಲಿ ಯಾರೊಬ್ಬರೂ ಅಪರಾಧಿಗಳೆಂದು ಸಾಬೀತಾಗಿಲ್ಲ. ಅವರ ವೈಯಕ್ತಿಕ ವಿವರಗಳನ್ನು ಸಾರ್ವಜನಿಕಗೊಳಿಸಿರುವು ತಪ್ಪು. ಆರೋಪಿಗಳ ಪೋಸ್ಟರ್‌ಗಳನ್ನು ತೆಗೆದುಹಾಕುವಂತೆ ಲಖನೌ ಆಡಳಿತಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು.  ಹೈ ಕೋರ್ಟ್ ಆದೇಶದ ವಿರುದ್ಧ ಉತ್ತರ ಪ್ರದೇಶ ಸರ್ಕಾರ  ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇಂದು   ಸುಪ್ರೀಂ ಕೋರ್ಟ್ ಉ.ಪ್ರ ಸರ್ಕಾರದ ಮೇಲ್ಮನವಿಯನ್ನು ವಿಚಾರಣೆ ನಡೆಸಿದೆ.

ಯುಪಿ ಸರ್ಕಾರದ ‘ನೇಮ್ ಅಂಡ್‌ ಶೇಮ್’ (ಹೆಸರು ಮತ್ತು ನಾಚಿಕೆ) ಬ್ಯಾನರ್‌ಗಳ ಪ್ರಕರಣವನ್ನು ಆಲಿಸಿದ  ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅನಿರುದ್ಧ ಬೋಸ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು ಅರ್ಜಿಯನ್ನು ಆಲಿಸಿದರು. ಮತ್ತು ವಕೀಲ ತುಷಾರ್ ಮೆಹ್ತಾ ಅವರು ಉತ್ತರ ಪ್ರದೇಶದ ಸರ್ಕಾರದ ಪರವಾಗಿ ವಾದಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ “ಗೌಪ್ಯತೆಯ ಹಕ್ಕಿಗೆ ಹಲವಾರು ಆಯಾಮಗಳಿವೆ.” “ಸಾರ್ವಜನಿಕವಾಗಿ ಬಂದೂಕುಗಳನ್ನು ಚಲಾಯಿಸುವ ಇಬ್ಬರು ವ್ಯಕ್ತಿಗಳನ್ನು ಮಾಧ್ಯಮ ತೋರಿಸುತ್ತದೆ ಎಂದು ಭಾವಿಸೋಣ, ಅವರ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿಕೊಳ್ಳುವುದಿಲ್ಲ. ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಲಲಿತ್ ‘ಖಾಸಗಿ ವ್ಯಕ್ತಿಯು ಇಂತಹ ಕೆಲಸವನ್ನು ಮಾಡಿದಾಗ ಅದು ವಿಭಿನ್ನವಾಗಿರುತ್ತದೆ. ಆದರೆ ಇಲ್ಲಿ ಎಲ್ಲವನ್ನು ನಿರ್ಧರಿಸುವ ಹಕ್ಕು ರಾಜ್ಯಕ್ಕೆ ಇದೆಯೇ ಎಂಬುದು ಪ್ರಶ್ನೆ.’ ಎಂದರು. ನ್ಯಾಯಮೂರ್ತಿ ಬೋಸ್ ಅವರು ‘ಸರ್ಕಾರವು ಕಾನೂನಿನ ಮಿತಿಯೊಳಗೆ  ಅಧಿಕಾರ ನಡೆಸಬೇಕು, ಕ್ರಮಗಳನ್ನು ರೂಪಿಸಬೇಕು” ಎಂದು ಹೇಳಿದರು.

“ವಿಷಯವು ಮತ್ತಷ್ಟು ವಿವರಣೆ ಮತ್ತು ಪರಿಗಣನೆಯ ಅಗತ್ಯವಿರುವ ಸಮಸ್ಯೆಗಳನ್ನು ಒಳಗೊಂಡಿದ್ದು,” ಸಿಜೆಐನ ದೊಡ್ಡ ನ್ಯಾಯಪೀಠಕ್ಕೆ ಉಲ್ಲೇಖಿಸಿದೆ. ಪ್ರಕರಣದ ಪೇಪರ್‌ಗಳನ್ನು ತಕ್ಷಣ ಸಿಜೆಐ ಮುಂದೆ ಇಡಲು ಆದೇಶಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights