ಕೊರೊನಾದ ಅತೀ ದೊಡ್ಡ ರಹಸ್ಯ ಬಿಚ್ಚಿಟ್ಟ ಸೀಗಡಿ ಅಜ್ಜಿ : ಸೀಕ್ರೆಟ್ ಕೇಳಿ ಚೀನಿಗರು ಶಾಕ್…!
ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆ ಇಡೀ ವಿಶ್ವವೇ ಲಾಕ್ ಡೌನ್ ಆಗಿದೆ. ಕೊರೊನಾ ಯಾರಿಂದ..? ಯಾರಿಗೆ..? ಹೇಗೆ..? ಹರಡಿದೆ ಅನ್ನೋ ಹುಡುಕಾಟ ನಡೆಸಲು ಸಾಧ್ಯವಾವಾಗದಷ್ಟು ವೇಗವಾಗಿ ಸೋಂಕು ಎಲ್ಲೆಡೆ ಹರಡುತ್ತಿದೆ.
ನಮಗೆಲ್ಲಾ ಚೀನಾದ ವುಹಾನ್ ಪ್ರಾಂತ್ಯದಿಂದ ಕೊವಿಡ್-19 ಹರಡಿದೆ ಅನ್ನೋ ಮಾಹಿತಿ ಬಿಟ್ರೆ ಮತ್ಯಾವ ವಿಚಾರವೂ ಅರಿವಿಗೆ ಬಂದಿಲ್ಲ.ಆದರೆ ಚೀನಾದ ವಿಶ್ವವಿದ್ಯಾಲಯವೊಂದು ಮಹತ್ವದ ಮಾಹಿತಿ ವಿಶ್ವಕ್ಕೆ ಪರಿಚಯಿಸಿದೆ. ಅದೇನು ಅಂತ ಗೊತ್ತಾದ್ರೆ ನೀವು ಕೂಡ ಬೆಚ್ಚಿ ಬೀಳ್ತೀರಾ. ಹೌದು… ಕೊರೊನಾ ವೈರಸ್ ಮೊದಲು ಹರಡಿದ್ದು ಚೀನಾದ ವುಹಾನ್ ಪ್ರಾಂತ್ಯದ ಸೀ ಫುಡ್ ಮಾರುಕಟ್ಟೆಯ ಮೂಲಕ ಎನ್ನಲಾಗುತ್ತಿದೆ. ಇಲ್ಲಿನವರಲ್ಲಿ ಮೊದಲು ಯಾರಿಗೆ ಕಾಣಿಸಿಕೊಂಡಿದೆ ಅನ್ನೋ ಯಕ್ಷ ಪ್ರಶ್ನೆಗೆ ಉತ್ತರಿಸಿದ್ದಾಳೆ ಸೀಗಡಿ ಮೀನು ಮಾರಾಟ ಮಾಡುತ್ತಿದ್ದ ಅಜ್ಜಿ.

ಚೀನಾದ ಆಸ್ಪತ್ರೆಯಲ್ಲಿ ಮೊದಲು ಕೊರೊನಾ ವೈರಸ್ ಕಂಡು ಬಂದಿದ್ದು 27 ಜನರಿಂದ. ಒಂದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಇಂದೊಂದು ಹೊಸ ತೆರೆನಾದ ಖಾಯಿಲೆ ಎಂದುಗುರುತಿಸಲಾಯಿತು. ತಕ್ಷಣಕ್ಕೆ ಅರಿತುಕೊಂಡ ಚೀನಾದ ಆಸ್ಪತ್ರೆಗಳು ಈ ಲಕ್ಷಣಗಳು ಕಂಡು ಬರುತ್ತಿದ್ದ ಜನರನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಆರಂಭಿಸಿದವು. ಆದರೆ ಅದಾಗಲೇ 27 ಜನ ಸಾವಿರಾರು ಜನರನ್ನು ಸಂಪರ್ಕ ಮಾಡಿಬಿಟ್ಇದ್ರು. ಸೋಂಕು ವೇಗವಾಗಿ ಚೀನಿಗರ ದೇಹವನ್ನು ಹೊಕ್ಕಿ ಬಿಟ್ಟಿತ್ತು.
ಹಾಗಾದ್ರೆ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾದ 27 ಜನರಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದ್ದು ಯಾರಿಗೆ..? ಸೋಂಕು ಹರಡಿದ 27 ಜನರ ಪೈಕಿ 24 ಜನ ಸೀ ಫುಡ್ ಮಾರುಕಟ್ಟೆಯವರು.ಇವರಲ್ಲಿ ಪೇಷಂಟ್ ನಂಬರ್ 0 ಯಾರು ಅನ್ನೋ ಪ್ರಶ್ನೆ ಎದುರಾದಾಗಲೇ ಸೀಗಡಿ ಮೀನು ಮಾರಾಟದ ಅಜ್ಜಿ ರೋಚಕ ಸತ್ಯವೊಂದನ್ನ ಹೇಳಿದ್ದಾಳೆ.
ಹೌದು…ಸೀಗಡಿ ಮಾರಿದ 57 ವರ್ಷದ ವಿ ವಿಕ್ಸೆನ್ ಎನ್ನುವ ಹೆಸರಿನ ಅಜ್ಜಿಯಿಂದ ಖರೀದಿ ಮಾಡಿದ ಜನರಿಂದಲಿಂದಲೇ ಕೊರೊನಾ ಇಡೀ ವಿಶ್ವಕ್ಕೆ ಹರಡಿಕೊಂಡಿದೆ. ಸೀಗಡಿ ಮೀನು ಮಾರುತ್ತಿದ್ದ ಅಜ್ಜಿಯಿಂದಲೇ ಕೊರೊನಾ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಆಕೆಯಿಂದಲೇ ಇಡೀ ವಿಶ್ವದ 190 ದೇಶಗಳಿಗೆ ಸೋಂಕು ಹರಡಿ ಹಿಂಡಿ ಹಿಪ್ಪೆ ಮಾಡುತ್ತಿದೆ.

ಆರಂಭದಲ್ಲಿ ಅಜ್ಜಿಗೆ ಸಣ್ಣ ಜ್ವರ ಕಾಣಿಸಿಕೊಂಡಿತ್ತು, ಸಣ್ಣ ಪುಟ್ಟ ಆಸ್ಪತ್ರೆಗಳಲ್ಲಿ ಆಕೆಯ ಆರೋಗ್ಯ ಸರಿ ಹೋಗಲಿಲ್ಲ. ವಿ ವಿಕ್ಸೇನ್ ಸೀ ಫುಡ್ ಮಾರುಕಟ್ಟೆಯಲ್ಲಿ ಇದ್ದವರೇ ಆಗಿದ್ದರು. ಆಕೆಯ ಸಂಪರ್ಕದಲ್ಲಿದ್ದವರು ಆಕೆಯಂತೇ ಲಕ್ಷಣವಿರುವವರು ಆಸ್ಪತ್ರೆಗೆ ಆಗಮಿಸಿದ್ರು. ಆಗಲೇ ಇದೊಂದು ವ್ಯಾಪಕವಾಗಿ ಹರಡುವ ವೈರಸ್ ಆನ್ನೋದು ಖಚಿತವಾಯ್ತು. 27 ಜನರಲ್ಲಿ 24 ಜನರು ಸೀ ಫುಡ್ ಮಾರುಕಟ್ಟೆಯಲ್ಲಿರುವವರು. ಇವರು ಅದೆಷ್ಟೋ ಸಾವಿರ ಜನರ ಸಂಪರ್ಕ ಮಾಡಿಬಿಟ್ಟಿದ್ರು. ಸಂಪರ್ಕ ಮಾಡಿದವರಲ್ಲಿ ಕೆಲವರು ಬೇರೆ ಬಬೇರೆ ದೇಶಗಳಿಗೆ ಪ್ರಯಾಣ ಮಾಡಲು ಆರಂಭಿಸಿದ್ದರು. ಅಷ್ಟೊತ್ತಿಗಾಗಲೇ ಕೊರೊನಾ ದೊಡ್ಡ ಪ್ರಮಾಣದಲ್ಲಿ ಹರಡಿ ಹೋಗಿತ್ತು.

ವಿ ವಿಕ್ಸೆನ್ ಹೇಳುವ ಪ್ರಕಾರ, ಆಕೆಗೆ ಮಾಂಸದಂಗಡಿಯ ಶೌಚಾಲಯಕ್ಕೆ ಹೋಗಿದ್ದಳಂತೆ ಆ ಬಳಿಕವಷ್ಟೇ ಆಕೆಗೆ ಜ್ವರ ಕಾಣಿಸಿಕೊಂಡಿದೆ ಎಂದು ಹೇಳಿದ್ದಾಳೆ. ಆದರೆ ಆ ಮಾಂಸದಂಗಡಿಯಿಂದಲೇ ಅಜ್ಜಿಗೆ ಸೋಂಕು ತಗುಲಿದೆಯೋ ಇಲ್ವೋ..? ಅನ್ನೋದು ಮಾತ್ರ ದೃಢಪಟ್ಟಿಲ್ಲ. ಆದರೆ ಕೆಲವರು ಹೇಳುವ ಪ್ರಕಾರ ಚೀನಾದ ಲ್ಯಾಬ್ ಯಿಂದ ಕೊರೊನಾ ವೈರಸ್ ಹರಡಿದೆ ಎನ್ನಲಾಗುತ್ತದೆ. ಇದು ಕೂಡ ದೃಢಪಟ್ಟಿಲ್ಲ. ಮತ್ತೊಂದು ವಿಚಾರ ಮಾತ್ರ ಸತ್ಯ. ಯಾಕೆ ಕೊರೊನಾ ವೃದ್ಧಗೆ ಹೆಚ್ಚು ಹರಡುತ್ತದೆ..? ಅವರಿಂದಲೇ ಯಾಕೆ ಮತ್ತೊಬ್ಬರಿಗೆ ಹರಡಲು ಸಹಕಾರಿಯಾಗುತ್ತದೆ…? ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳು ಇವೆ.

ಇಲ್ಲಿಯತನಕ ವಿಶ್ವದ್ಯಾಂತ ಕೊರೊನಾ ಸೋಂಕಿಗೆ ಬಲಿಯಾದವರಲ್ಲಿ ವೃದ್ಧರೇ ಹೆಚ್ಚು. ಅಂದರೆ 70 ರಿಂದ 80 ವರ್ಷ ಮೇಲ್ಪಟ್ಟವರು. ವೃದ್ಧರಲ್ಲೇ ಯಾಕೆ ಸೋಂಕು ವೇಗವಾಗಿ ಹರಡುತ್ತದೆ ಅನ್ನೋದಕ್ಕೆ ಕೆಲ ವೈದ್ಯರ ಹೇಳಿಕೆಗಳು ಉತ್ತರ ನೀಡುತ್ತವೆ. ವೃದ್ಧರಲ್ಲಿ ವಯೋಸಹಜ ಕಾಯಿಲೆಗಳು ಬರುತ್ತವೆ. ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ಸೋಂಕು ಬಹುಬೇಗ ವಯಸ್ಕರಿಗೆ ಹರಡುತ್ತದೆ. ಜೊತೆಗೆ ಅಂಥವರನ್ನು ಉಳಿಸಿಕೊಳ್ಳುವುದು ಕೂಡ ಕಷ್ಟದ ಕೆಲಸವೇ. ಒಂದು ವೇಳೆ ಸೋಂಕು ಯಾವ ವಯಸ್ಕರಿಗೂ ಹರಡಲಿ ಅಂಥವರಿಗೆ ಸರಿಯಾದ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗದೇ ಇದ್ದಲ್ಲಿ ಸಾವು ಕಟ್ಟಿಟ್ಟ ಬುತ್ತಿ. ಹಿಗಾಗಿನೇ ಹೇಳೋದು ಮನೆಯಲ್ಲೇ ಇರಿ. ಮನೆ ಬಿಟ್ಟರೆ ಬೇರೆ ಯಾವುದೇ ಮದ್ದು ಕೊರೊನಾಗಿಲ್ಲ ಎನ್ನುವ ಎಚ್ಚರಿಕೆಯ ಗಂಟೆಯನ್ನ ಆಗಾಗಾ ಕೇಂದ್ರದಿಂ ರಾಜ್ಯ ಸರ್ಕಾರ ಬಾರಿಸುತ್ತಲೇ ಇದೆ. ಇದಕ್ಕೆ ಎಲ್ಲರೂ ಕೂಡ ಸ್ಪಂದಿಸಬೇಕಾಗಿದೆ. ಕೊರೊನಾ ತಡೆಗೆ ಎಲ್ಲರೂ ಕೂಡ ಕೈ ಜೋಡಿಸಬೇಕಿದೆ. ಸರ್ಕಾರದ ಆದೇಶಗಳನ್ನು ಪಾಳಿಸಿದರೆ ಮಾತ್ರ ಮಹಾಮಾರಿ ಕೊರೊನಾ ತಡೆಯಲು ಸಾಧ್ಯ. ಇಲ್ಲವಾದರೆ ಚೀನಾದಂತೆ ನಮ್ಮ ದೇಶವೂ ಕೂಡ ಒಂದಾಗೋದ್ರಲ್ಲಿ ಯಾವುದೇ ಅನುಮಾನವೇ ಇಲ್ಲ.

