ಕೊರೊನಾ ಭಯದ ಮಧ್ಯೆ ಮೈಸೂರು, ಹಾಸನದಲ್ಲಿ ಭೂಕಂಪಿಸಿದ ಅನುಭವ….!

ಕೊರೊನಾ ಆತಂಕದ ಜೊತೆಗೆ ರಾಜ್ಯದ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಂಡ್ಯ, ಮೈಸೂರು, ಹಾಸನದಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಭಯದಲ್ಲಿ ಜನ ಮನೆಯಿಂದ ಓಡಿ ಬಂದಿದ್ದಾರೆ.

ಹೌದು…  ಮೈಸೂರು, ಹಾಸನದಲ್ಲಿ ಪಾತ್ರೆಗಳೆಲ್ಲವೂ ಕೆಳಕ್ಕೆ ಉರುಳಿವೆ. ಕೆಲವು ಮನೆಯ ಹೆಂಚು ಹಾರಿ ಹೋಗಿವೆ. ಇದರಿಂದ ಜನ ಭಯದಿಂದ ಮನೆ ಬಿಟ್ಟು ಹೊರ ಓಡಿ ಬಂದಿದ್ದಾರೆ. ಕೆ, ಆರ್ ನಗರ, ಪಿರಿಯಾಪಟ್ಟಣ, ಕಿತ್ತೂರು ನಲ್ಲಿ ಭೂಕಂಪನದ ಅನುಭವ ಆಗಿದೆ. ಹಾಸನದಲ್ಲಿ ಅರಕಲಗೂಡಿನಲ್ಲಿ ಭೂಕಂಪನದ ಅನುಭವ ಆಗಿದ್ದು ಪ್ರಕೃತಿ ಕೋಪಕ್ಕೆ ಜನ ಭಯಗೊಂಡಿದ್ದಾರೆ.

ಸಾಲಿಗ್ರಾಮ, ಅಂಕನಹಳ್ಳಿ, ಚುಂವನಕಟ್ಟೆ, ಹೊಸೂರು, ತಂದ್ರೆ, ಕರ್ಪೂರವಳ್ಳಿ. ಕಾಟ್ನಾಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಅನುಭವವಾಗಿದೆ.

ಕೊರೊನಾ ಹರಡುವ ಹಿನ್ನೆಲೆಯಲ್ಲಿ ರಾಜ್ಯದಲ್ಲೆಡೆ ಲಾಕ್ ಡೌನ್ ಮಾಡಲಾಗಿದ್ದು ಜನ ಮನೆ ಬಿಟ್ಟು ಹೊರಬರುವಂತಿಲ್ಲ. ಆದರೆ ಭುಕಂಪನಕ್ಕೆ ಹೆದರಿ ಜನ ಮನೆಯಿಂದ ಹೊರಬಂದಿರುವ ಘಟನೆ ನಡೆದಿದೆ. ಇದರ ಬಗ್ಗೆ ಭೂ ವಿಜ್ಞಾನಿಗಳು ಪರೀಕ್ಷೆ ನಡೆಸಲಿದ್ದು, ನಿಜವಾಗಿಯೂ ಭೂಕಂಪನ ಆಗಿದಿಯಾ ಅನ್ನೋದರ ಬಗ್ಗೆ ಪರೀಕ್ಷೆ ನಡೆಸಲಿದ್ದಾರೆ.

ಒಟ್ಟಿನಲ್ಲಿ ಜನ ಮಾತ್ರ ಕೊರೊನಾ ಭೀತಿ ನಡುವೆಯೂ ಭೂಕಂಪನದ ಅನುಭವಕ್ಕೆ ಆತಂಕದಲ್ಲಿದ್ದು, ಇದೆಲ್ಲದಕ್ಕೂ ಅಂತ್ಯ ಯಾವಾಗ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights