ವಿಶ್ವದಾದ್ಯಂತ ಹೆಚ್ಚಿದ ಕೊರೊನಾ ಅಟ್ಟಹಾಸ : ಸೋಂಕಿತರಲ್ಲಿ ಮುಂಚೂಣಿಯಲ್ಲಿವೆ ಅಮೆರಿಕಾ-ಇಟಲಿ!
ಕೊರೊನಾ ಮಹಾಮಾರಿಗೆ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಇರುವ ರಾಷ್ಟ್ರಗಳು ತಲ್ಲಣಗೊಂಡಿವೆ. ವಿಶ್ವದ ಜನತೆಯನ್ನು ಬೆಚ್ಚಿ ಬೀಳಿಸಿದ ಕೊರೊನಾಗೆ ಜತ್ತಿನಾದ್ಯಂತ 1,40,902 ಮಂದಿ ಬಲಿಯಾಗಿದ್ದಾರೆ. ಕೊರೊನಾ ಪೀಡಿತರ ಸಂಖ್ಯೆ 21,82,197ಕ್ಕೆರಿಕೆಯಾಗಿದೆ.
ಬೆಚ್ಚಿಬೀಳಿಸುವ ವಿಷಯ ಅಂದರೆ ವಿಶ್ವದ ದೊಡ್ಡಣ್ಣನಿಗೆ ಕೊರೊನಾದ ದೊಡ್ಡ ಪೆಟ್ಟು ಬಿದ್ದಿದೆ. ಅಮೆರಿಕಾದಲ್ಲೇ 34,617 ಸಾವನ್ನಪ್ಪಿದ್ದಾರೆ. 6,77,570 ಮಂದಿಗೆ ಸೋಂಕು ತಗುಲಿದೆ. ಕೊರೊನಾಗೆ ಇಟಲಿಯಲ್ಲಿ 22,170 ಜನ ಬಲಿಯಾಗಿದ್ದು, 1,68,941 ಮಂದಿ ಸೋಂಕು ಪೀಡಿತರಿದ್ದಾರೆ. ಇನ್ನೂ ಸ್ಪೇನ್ನಲ್ಲಿ 1,84,948 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈಗಾಗಲೇ 19,315 ಜನ ಬಲಿಯಾಗಿದ್ದಾರೆ.
ಇಂಗ್ಲೆಂಡ್ನಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವುದರಿಂದ ಮತ್ತೆ 3 ವಾರಗಳ ಕಾಲ ಲಾಕ್ಡೌನ್ ಮುಂದುವರಿಸಲಾಗಿದೆ. ಫ್ರಾನ್ಸ್ನಲ್ಲಿ ಗುರುವಾರ ಒಂದೇ ದಿನ 753 ಜನರು ಕೊರೋನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಬುಧವಾರ ಒಂದೇ ದಿನ 2,400ಕ್ಕೂ ಹೆಚ್ಚು ಜನರು ಕೊರೋನಾ ವೈರಸ್ನಿಂದ ಸಾವನ್ನಪ್ಪಿದ್ದರು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಅಧಿಕವಾಗಿದೆ. ಈ ಸಂಖ್ಯೆಗೆ ಹೋಲಿಸಿದರೆ ಇಂದು ಅಮೆರಿಕದಲ್ಲಿ ಪತ್ತೆಯಾಗಿರುವ ಸೋಂಕಿತರ ಪ್ರಮಾಣ ಕಡಿಮೆಯಿದೆ. ಫ್ರಾನ್ಸ್ನಲ್ಲಿ ಕೂಡ ಬುಧವಾರ 2,438 ಜನರು ಸಾವನ್ನಪ್ಪಿದ್ದರು. ಆದರೆ, ಗುರುವಾರ ಆ ಸಂಖ್ಯೆ ಇಳಿಮುಖವಾಗಿದೆ.
ಭಾರತದಲ್ಲಿ 13387ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಸಂಖ್ಯೆ 13387 ಕ್ಕೆ ಏರಿದರೆ, ಸಾವಿನ ಸಂಖ್ಯೆ 437 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಕಳೆದ 24 ಗಂಟೆಗಳಲ್ಲಿ 1007 ತಾಜಾ ಕೋವಿಡ್ -19 ಸೋಂಕುಗಳು ಮತ್ತು 23 ಸಾವುಗಳು ವರದಿಯಾಗಿವೆ. ಮತ್ತೊಂದೆಡೆ, 1748 ರೋಗಿಗಳನ್ನು ವೈರಸ್ನಿಂದ ಗುಣಪಡಿಸಲಾಗಿದೆ ಅಥವಾ ಬಿಡುಗಡೆ ಮಾಡಲಾಗಿದೆ. 3205 ಪ್ರಕರಣಗಳು ಮತ್ತು 194 ಸಾವುನೋವುಗಳೊಂದಿಗೆ ಮಹಾರಾಷ್ಟ್ರವು ಹೆಚ್ಚು ಪೀಡಿತ ರಾಜ್ಯವಾಗಿದೆ.
ಕರೋನವೈರಸ್ಗಾಗಿ ಇದುವರೆಗೆ 2.86 ಲಕ್ಷ ವ್ಯಕ್ತಿಗಳಿಂದ ಒಟ್ಟು 3.02 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ತಿಳಿಸಿದೆ. ಅಲ್ಲದೆ, ಭಾರತವು ಚೀನಾದಿಂದ 5 ಲಕ್ಷ ಕ್ಷಿಪ್ರ COVID-19 ಪರೀಕ್ಷಾ ಕಿಟ್ಗಳನ್ನು ಪಡೆದಿದೆ. ಪ್ರಪಂಚದಾದ್ಯಂತ, ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ 21.57 ಲಕ್ಷಕ್ಕಿಂತ ಹೆಚ್ಚಾಗಿದೆ ಮತ್ತು ಸಾವುಗಳು 1.44 ಲಕ್ಷಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳು ತಿಳಿಸಿವೆ.

