ಒಂದು ವರ್ಷದಿಂದ ಬಿಜೆಪಿಯಲ್ಲಿದ್ದು ಕಡಿದು ಗುಡ್ಡೆ ಹಾಕಿದ್ದೇನು? ಆಪರೇಷನ್‌ಗೆ ಒಳಗಾದವರಿಗೆ ಕಾಂಗ್ರೆಸ್‌ ಪ್ರಶ್ನೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಬಿಜೆಪಿ ಆಪರೇಷನ್‌ಗೆ ಒಳಗಾಗಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಬಿಎಸ್‌ವೈ ಸರ್ಕಾರದಲ್ಲಿ ಮಂತ್ರಿಯಾಗಿರುವವರು ಒಂದು ವರ್ಷದಲ್ಲಿ ಕಡಿದು ಗುಡ್ಡೆ ಹಾಕಿದ್ದು ಏನು ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಆಪರೇಷನ್ ಕಮಲಕ್ಕೆ ಒಳಗಾದ ಕಾಂಗ್ರೆಸ್‌/ಜೆಡಿಎಸ್‌ ತೊರೆದು, ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇವೆ ಎಂದು ಹೇಳಿಕೊಂಡಿರುವವರು, ನಿದ್ರಾವಸ್ಥೆಯಲ್ಲಿರುವ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಒಂದು ವರ್ಷದಿಂದ ಕಡಿದು ಗುಡ್ಡೆ ಹಾಕಿದ್ದೇನು? ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 

ಕೊರೊನಾ ಸಂದರ್ಭ ಹಾಗೂ ಲಾಕ್‌ಡೌನ್‌ ನಿರ್ವಹಣೆ, ಪ್ರವಾಹ ಮತ್ತು ಲಾಕ್‌ಡೌನ್‌ ಸಂದರ್ಭವನ್ನು ಬಳಸಿಕೊಂಡು ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ವಿಚಾರವಾಗಿ ಬಿಜೆಪಿ ಸರ್ಕಾರವನ್ನು ಟೀಕೆ, ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್‌, ಪಕ್ಷದ ತೊರೆದು ಬಿಜೆಪಿ ಸೇರಿರುವವರನ್ನು ಮಂತ್ರಿಗಾಳಾಗಿ ಕಡಿದು ಗುಡ್ಡೆ ಹಾಕಿರುವುದೇನು ಎಂದು ಪ್ರಶ್ನಿಸಿದೆ.

ಬಿಜೆಪಿ ಸರ್ಕಾರದ ವಿರುದ್ಧ ಲೆಕ್ಕಕೊಡಿ, ಉತ್ತರಕೊಡಿಬಿಜೆಪಿ ಎಂಬ ಹ್ಯಾಶ್‌ ಟ್ಯಾಗ್‌ಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದ ಕಾಂಗ್ರೆಸ್‌, ರೈತರ ಪಾಲಿಗೆ ಮುಳ್ಳಾಗಿರುವ ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಯ ವಿರುದ್ಧ ಹೋರಾಟ ಕಟ್ಟಲು ಮುಂದಾಗಿದ್ದು, ಮುಂದಿನ ಅಧಿವೇಶನದಲ್ಲಿ ಪ್ರಶ್ನಿಸಲು ಮುಂದಾಗಿದೆ.

ಮಾನ್ಸೂನ್‌ ಅಧಿವೇಶನವನ್ನು ಅಕ್ಟೋಬರ್ 15ರ ವರೆಗೆ ನಡೆಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ರಾಜಕಾರಣಿಗಳ ವಿರುದ್ಧ 4,442 ಕ್ರಿಮಿನಲ್‌ ಕೇಸ್‌; ಹಾಲಿ MP, MLAಗಳೇ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights