ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ತಾರತಮ್ಯ? ಎಡಿಜಿಪಿ ರವೀಂದ್ರನಾಥ್‌ ರಾಜೀನಾಮೆ!

ಇತ್ತೀಚೆಗಿನ ದಿನಗಳಲ್ಲಿ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿಯೂ ಅಸಮಾಧಾನ ವ್ಯಕ್ತವಾಗುತ್ತಿದೆ. ಅಂತಹದ್ದೇ ಅಸಮಾಧಾನದಿಂದಾಗಿ ಎಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದ ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇತ್ತೀಚೆಗೆ ಕರ್ನಾಟಕ ಗೃಹ ಇಲಾಖೆ ಪೊಲೀಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿತ್ತು. ಆದರೆ, ತಮಗೂ ಬಡ್ತಿ ಸಿಗುತ್ತದೆ ಎಂದು ಭರವಸೆ ಇಟ್ಟಿದ್ದ ಕೆಲವು ಪೊಲೀಸ್‌ ಅಧಿಕಾರಿಗಳಿಗೆ ನಿರಾಶೆಯಾಗಿದೆ. ಹಾಗಾಗಿ ತಮ್ಮ ಸೀನಿಯಾರಿಟಿ ತಕ್ಕ ಸ್ಥಾನಮಾನ ನೀಡಿಲ್ಲ ಎಂದು ಹಿರಿಯ ಪೊಲೀಸ್​ ಅಧಿಕಾರಿ ಎಡಿಜಿಪಿ ರವೀಂದ್ರನಾಥ್​ ರಾಜೀನಾಮೆ ನೀಡಿದ್ದಾರೆ.

“ನನ್ನ ಜೂನಿಯರ್ ಆಗಿರೋ ಸುನೀಲ್ ಕುಮಾರ್ ಅವರಿಗೆ ಡಿಜಿಪಿ ಆಗಿ ಪ್ರಮೋಷನ್‌ ನೀಡಲಾಗಿದೆ. ನಾನು ಸೀನಿಯರ್ ಆಗಿದ್ರೂ ನನ್ನ ಹೆಸರನ್ನು ಬಡ್ತಿಗೆ ಪರಿಗಣಿಸಿಲ್ಲ. ನನಗೆ ಆಗ್ತಾ ಇರೋ ಅನ್ಯಾಯ ಬೇರೆಯಾರಿಗೂ ಆಗೋದು ಬೇಡ. ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೂ ಈ ವಿಚಾರವನ್ನು ತಿಳಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

“ನಿನ್ನೆ ರಾತ್ರಿ 10:45 ರ ಸುಮಾರಿಗೆ ಡಿಜಿ ಕಚೇರಿಗೆ ತೆರಳಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ನೀಡಿದ ಬಳಿಕ ಡಿಜಿ ಪ್ರವೀಣ್ ಸೂದ್ ಅವರು ನನ್ನ ಸಂಪರ್ಕಕ್ಕೆ ಯತ್ನಿಸಿದ್ದರು. ಮೊದಲು ಮೆಸೇಜ್ ಮೂಲಕ ಕಾಲ್ ಮಾಡುವಂತೆ ತಿಳಿಸಿದ್ದರು. ಇದಾದ ಬಳಿಕ ನೇರ ಬಂದು‌ ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ರಾಜೀನಾಮೆ‌ ನೀಡಿದ ಬಳಿಕ ನಾನು ಹೋಗಿ ಭೇಟಿ ಆಗೋದು ಅವಶ್ಯಕತೆ ಇಲ್ಲ ಎಂಬ ಕಾರಣಕ್ಕೆ ಅವರನ್ನು ಭೇಟಿಯಾಗಿರಲಿಲ್ಲ” ಎಂದು  ರವೀಂದ್ರನಾಥ್​ ತಿಳಿಸಿದ್ದಾರೆ.

ಎಡಿಜಿಪಿ ರವೀಂದ್ರನಾಥ್​ ಮತ್ತು ಸುನೀಲ್ ಕುಮಾರ್ ಇಬ್ಬರೂ 1989 ಬ್ಯಾಚ್ ಐಪಿಎಸ್ ಅಧಿಕಾರಿಗಳಾಗಿದ್ದು, ಯುಪಿಎಸ್‌ಸಿ ಶ್ರೇಯಾಂಕದಲ್ಲಿ ರವೀಂದ್ರನಾಥ್ ಅವರು ಸುನೀಲ್ ಕುಮಾರ್ ಗಿಂತ ಉತ್ತಮ ಶ್ರೇಣಿಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಸುನೀಲ್ ಅವರಿಗೆ ಬಡ್ತಿ ನೀಡಿರುವುದು ರವೀಂದ್ರನಾಥ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಎರಡು ದಿನಗಳಲ್ಲಿ ನಿವೃತ್ತಿ ಹೊಂದಲಿರುವ ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights