ಎಸ್‌ಪಿಬಿ ಅಭಿನಯದ ಮಿಥುನಂ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್‌! ಡಿಸೆಂಬರ್‌ನಲ್ಲಿ ಬಿಡುಗಡೆ

ದಕ್ಷಿಣ ಭಾರತದ ಖ್ಯಾತ ಸಂಗೀತ ದಿಗ್ಗಜ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಪಂಚ ಭಾಷಾ ನಟಿ ಲಕ್ಷ್ಮೀ ಅಭಿನಯದ ತೆಲುಗಿನ ಸೂಪರ್ ಹಿಟ್ ಚಿತ್ರ ‘ಮಿಥುನಂ’ ಕನ್ನಡಕ್ಕೆ ಡಬ್ ಆಗುತ್ತಿದೆ.

ಆನಂದ್ ಮುಯಿದ ರಾವು ನಿರ್ಮಿಸಿ, ತನಿಕೆಳ್ಳ ಭರಣಿ ನಿರ್ದೇಶಿಸಿದ್ದ ಈ ಚಿತ್ರಕ್ಕೆ ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡಲಾಗುತ್ತಿದೆ.

ಲೇಖಲ ಶ್ರೀಚರಣ ಅವರ ಕಾದಂಬರಿ ಮಿಥುನಂನ ಕತೆಯನ್ನು ಆಧರಿಸಿ, ಅದೇ ಹೆಸಿರಿನಲ್ಲಿ ಸಿನಿಮಾ ಮಾಡಲಾಗಿತ್ತು. ಈ ಸಿನಿಮಾ ತೆಲುಗಿನಲ್ಲಿ 2012ರಲ್ಲಿ ಬಿಡುಗಡೆಯಾಗಿತ್ತು.

08 ವರ್ಷಗಳ ನಂತರ ಕನ್ನಡಕ್ಕೆ ಡಬ್ಬಿಂಗ್‌ ಆಗುತ್ತಿರುವ ಮಿಥುನಂ ಚಿತ್ರ ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಇದನ್ನೂ ಓದಿ: RRR ಸಿನಿಮಾ ಬಿಡುಗಡೆ ಮಾಡಿದರೆ, ಥಿಯೇಟರ್‌ಗಳಿಗೆ ಬೆಂಕಿ: ರಾಜಮೌಳಿಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬೆದರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights