ಪ್ರಿ ವೆಡ್ಡಿಂಗ್ ಫೋಟೋಶೂಟ್ನಲ್ಲಿ ದಂಪತಿ ಸಾವು ಪ್ರಕರಣ : ಸಾವಿಗೆ ಕಾರಣ ಕೇಳಿ ಶಾಕ್ ಆದ ಪೊಲೀಸರು!

ಸತಿ-ಪತಿಗಳಾಗಿ ಬಾಳಿ ಬದುಕಬೇಕಿದ್ದ ನವ ಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋಗಿ ದುರಂತ ಅಂತ್ಯ ಕಂಡಿದ್ದ ಘಟನೆಗೆ ಕಾರಣ ತಿಳಿದ ಪೊಲೀಸರು ಶಾಕ್ ಆಗಿದ್ದಾರೆ. 

ಹೌದು… ನವ ಜೋಡಿ ಮೈಸೂರಿನ ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ಮುಂದಾಗಿದ್ದು ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ಫೋಟೋಶೂಟ್ ಮಾಡಿಸಲು ಮುಂದಾಗಿತ್ತು. ಆದರೆ ತೆಪ್ಪ ಮುಳುಗಿ ನವ ಜೋಡಿ ದುರಂತ ಸಾವು ಕಂಡಿತ್ತು. 

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು ಮತ್ತು ಶಶಿಕಲಾ ಮೃತ ದುರ್ದೈವಿಗಳು. ಇವರ ಮದುವೆ ನವೆಂಬರ್ 22ಕ್ಕೆ ನಿಶ್ಚಯವಾಗಿತ್ತು. ಆದರೆ ಮದುವೆಗೂ ಮುನ್ನವೇ ನವ ಜೋಡಿ ಜಲಸಮಾಧಿಯಾಗಿದ್ದರು. 

ಅಷ್ಟಕ್ಕೂ ತೆಪ್ಪ ಮುಳುಗಲು ಕಾರಣವನ್ನು ಕೇಳಿದರೇ ನೀವು ಕೂಡ ಬೆಚ್ಚಿಬೀಳ್ತೀರಾ. ನವ ಜೋಡಿ ತೆಪ್ಪ ಮುಳುಗಿ ಸಾವನ್ನಪ್ಪಲು ಕಾರಣ ಅವರು ಧರಿಸಿದ ಭಾರವಾದ ಬಟ್ಟೆ ಮತ್ತು ಚಪ್ಪಲಿ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

ಫೋಟೋ ಶೂಟ್ ಮಾಡಲು ಬಯಸಿ ತೆಪ್ಪದೊಳಗೆ ಕಾಲಿಟ್ಟಿದೆ. ಆಗ ಹಲ್ಡ್ ಚಪ್ಪಲ್ ಹಾಗೂ ಭಾರವಾದ ಬಟ್ಟೆಧರಿಸಿದ್ದರು. ಆಗ ತೆಪ್ಪದಲ್ಲಿ ಶಶಿಕಲ ತುಂಬಾ ಹೊತ್ತುನಿಂತುಕೊಂಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ತೆಪ್ಪ ಮುಗುಚಿ ಬಿದ್ದಿದೆ. ದಂಪತಿಗಳಿಬ್ಬರೂ ಈಜುಬಾರದೇ ಸಾವನ್ನಪ್ಪಿದ್ದಾರೆನ್ನಲಾಗುತ್ತಿದೆ

ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಗೆ ಪ್ರತ್ಯಕ್ಷದರ್ಶಿಗಳು ದಂಪತಿಗಳ ಸಾವಿನ ಬಗ್ಗೆ ವಿವರಣೆ ಕೊಟ್ಟಿದ್ದಾರೆ. 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights