ತೆನೆಯಾಗಿದ್ದ ಭತ್ತಕ್ಕೆ ಗೊಬ್ಬರ ಹಾಕಿದ ಕೃಷಿ ಸಚಿವ ಬಿ.ಸಿ.ಪಾಟೀಲ್; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ರಾಜ್ಯದ ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ರೈತರೊಂದಿಗೊಂದು ದಿನ ಎಂಬ ಕಾರ್ಯಕ್ರಮ ಆರಂಭಿಸಿದ್ದಾರೆ. ಇದಕ್ಕಾಗಿ ಮಂಡ್ಯ ಜಿಲ್ಲೆಯ ಮಡವಿನಕೋಡಿ ಹಳ್ಳಿಯಲ್ಲಿ ನಿನ್ನೆ ಒಂದು ದಿನವನ್ನು ಕಳೆದಿದ್ದಾರೆ. ಈ ವೇಳೆ ಬಿ ಸಿ ಪಾಟೀಲ್ ಮತ್ತು ತೋಟಗಾರಿಕೆ ಸಚಿವ ನಾರಾಯಣಗೌಡ ಇಬ್ಬರೂ ಸೇರಿ, ರೈತರಂತೆ ಜಮೀನಿಗಿಳಿದು ಕೃಷಿ ಕೆಲಸದಲ್ಲಿ ಭಾಗಿಯಾಗಿದ್ದರು. ಆ ಸಚಿವರಿಬ್ಬರು ನೆನ್ನೆ ರೈತರಂತೆ ಜಮೀನಲ್ಲಿ ಟ್ರ್ಯಾಕ್ಟ ರ್ ಚಾಲನೆ ಮಾಡಿದ್ದರು. ಇದೆಲ್ಲವನ್ನೂ ಮೀರಿಸುವಂತೆ ಸಚಿವ ಬಿಸಿ ಪಾಟೀಲ್ ಅವರು ತೆನೆಯೊಡೆದು ವಡೆಯಾಗಿದ್ದ ಭತ್ತದ ಗದ್ದೆಗೆ ಗೊಬ್ಬರ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ಮಡುವಿನಕೋಡಿದ ರೈತೆರೊಬ್ಬರ ಗದ್ದೆಗಿಳಿದು ರೈತರಂತೆ ತಲೆಗೆ ಹಸಿರು ಪೇಟ ಸುತ್ತಿಕೊಂಡು ನಾವು ಕೂಡ ಮಣ್ಣಿನ ಮಕ್ಕಳು. ತಮಗೂ ಕೃಷಿ ಕೆಲಸದ ಅನುಭವವವಿದೆ ಎಂಬುದನ್ನು ತೋರಿಸಿಕೊಳ್ಳಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಭತ್ತದ ಗದ್ದೆಯಲ್ಲಿ ಭತ್ತ ಕಚ್ಚುತ್ತಿರುವ ಬೆಳೆಗೆ ಗೊಬ್ಬರ ಹಾಕಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
ಭತ್ತದ ಬೆಳೆ ಹೊಡೆ ಕಡೆದು ಭತ್ತ ಕಟ್ಟುವ ಸಮಯದಲ್ಲಿ ಬೆಳೆಗೆ ಯಾವುದೇ ಗೊಬ್ಬರ ಹಾಕುವಂತಿಲ್ಲ. ಈ ಬಗ್ಗೆ ಜ್ಞಾನವಿರದ ಇಬ್ಬರು ಸಚಿವರು ಮಾತ್ರ ತಾವು ರೈತರ ಮಕ್ಕಳು. ತಮಗೂ ಕೃಷಿ ಬಗ್ಗೆ ಜ್ಞಾನವಿದೆ. ನಾವು ಕೃಷಿ ಕೆಲಸ ಮಾಡುತ್ತೇವೆ ಎಂಬುದನ್ನು ನಿರೂಪಿಸಿಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಇವರ ಮೂರ್ಖತನದ ಫೋಟೋವನ್ನು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಾಕಿ ವ್ಯಂಗ್ಯ ಮಾಡಿದ್ದಾರೆ.

ಹೊಡೆ ಕಡೆಯುತ್ತಿರುವ ಭತ್ತಕ್ಕೆ ಗೊಬ್ಬರ ಹಾಕ್ತಿರೋ ಇಬ್ಬರು ಸಚಿವರಿಗೆ ಉತ್ತಮ ರೈತ ಪ್ರಶಸ್ತಿ ಕೊಡಬೇಕು. ಹೊಡೆ ಕಡೆಯುತ್ತಿರುವ ಭತ್ತದ ಗದ್ದೆಗೆ ಗೊಬ್ಬರ ಹಾಕಿ ಫೋಟೋಗೆ ಫೋಸು ನೀಡಿ ಕೃಷಿ ಬಗ್ಗೆ ಇಬ್ಬರೂ ಸಚಿವರಿಬ್ಬರಿಗೂ ಸಾಮಾನ್ಯ ಜ್ಞಾನ ಇಲ್ಲವೆಂಬದನ್ನು ತಾವೇ ನಿರೂಪಿಸಿಕೊಂಡು ನಗೆಪಾಟಲಿಗೀಡಾಗಿದ್ದಾರೆ.
ಇದನ್ನೂ ಓದಿ: 2020ಕ್ಕಿಂತಲೂ 2021ರ ವರ್ಷ ಭೀಕರವಾಗಿರಲಿದೆ: WFP ಮುಖ್ಯಸ್ಥ ಡೇವಿಡ್ ಬೀಸ್ಲೆ

