ಮಂಡ್ಯ: ಅಂಗಾಂಗ ಕತ್ತರಿಸಿ ಯುವತಿಯ ಹತ್ಯೆ; ಅತ್ಯಾಚಾರ-ಕೊಲೆ ಶಂಕೆ!

ದುಷ್ಕರ್ಮಿಗಳು ಯುವತಿಯೊಬ್ಬಳನ್ನು ಹತ್ಯಗೈದು, ಆಕೆಯ ತಲೆ, ಕೈ, ಕಾಲುಗಳನ್ನು ತುಂಡರಿಸಿ ನಾಲೆಗೆ ಎಸೆದಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಬಂಡಿಹೊಳೆ ಸಮೀಪ ನಡೆದಿದೆ.

ಕಳೆದ ಎರಡು-ಮೂರು ದಿನಗಳ ಹಿಂದೆಯೇ ಘಟನೆ ನಡೆದಿದ್ದು, ನಾಲೆಯ ಗೇಟ್‌ಗಳಲ್ಲಿ ಸಿಕ್ಕಿಕೊಂಡಿದ್ದ ಯುವತಿಯ ತುಂಡರಿಸಿದ ದೇಹದ ಭಾಗಗಳು ದೊರೆತಿವೆ. ಯುವತಿಯ ಮೃತ ದೇಹವನ್ನು ನೋಡಿದ ಸ್ಥಳೀಯರು ಕೆ.ಆರ್‌.ಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು ಶವವನ್ನು ಮೇಲೆತ್ತಿದಾಗ ತಲೆ ಮತ್ತು ಕೈ-ಕಾಲುಗಳನ್ನು ತುಂಡರಿಸಲಾಗಿದ್ದ, ಯುವತಿಯ ಮೃತದೇಹ ಸಿಕ್ಕಿದೆ. ಅತ್ಯಾಚಾರ ಎಸಗಿ, ಕೊಲೆ ಮಾಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಮೃತಳ ಕೈ ಮೇಲೆ ಮೀನಿನ ಚಿತ್ರದ ಹಚ್ಚೆ ಇದ್ದುದ್ದರಿಂದಾಗಿ, ಮೀನುಗಾಗರ ಕುಟುಂಬಕ್ಕೆ ಸೇರಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಮೀನುಗಾರರ ಟೆಂಟ್‌ನಲ್ಲಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯಲ್ಲಿ ಆಕೆ ಮೀನುಗಾರರ ಕುಟುಂಬಕ್ಕೆ ಸೇರಿದ ಯುವತಿಯಲ್ಲ ಎಂದು ತಿಳಿದುಬಂದಿದ್ದು, ಕೆಆರ್‌ ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಯುವತಿಯ ಶವವನ್ನು ಇರಿಸಲಾಗಿದ್ದು, ಸಂಬಂಧಿತರು ಮೃತ ದೇಹವನ್ನು ಪಡೆದುಕೊಳ್ಳಲು ಪೊಲೀಸರು ತಿಳಿಸಿದ್ದಾರೆ.

ಆದರೆ, ಇದೂವರೆಗೂ ಆ ಯುವತಿ ಯಾರು ಎಂಬುದು ತಿಳಿದು ಬಂದಿಲ್ಲ. ಕೆ.ಆರ್.ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಬಾಲಕಿಯ ಹೃದಯ ಮತ್ತು ಶ್ವಾಸಕೋಶ ಕಿತ್ತೊಯ್ದ ಕಾಮುಕರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights