India vs Australia: 2ನೇ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲವು ಸಾಧಿಸಿದ ಭಾರತ!

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್‌ ಸರಣಿ ನಡೆಯುತ್ತಿದ್ದು, ಇಂದು ನಡೆದ ಎರಡನೇ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಕೆನಡಾದ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಪಂಡ್ಯದಲ್ಲಿ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 194 ರನ್ ಬಾರಿಸಿತ್ತು. ಆಸ್ಟ್ರೇಲಿಯಾ ರನ್‌ಗಳ ಬೆನ್ನತ್ತಿದ ಇಂಡಿಯಾ 06 ವಿಕೆಟ್‌ಗಳನ್ನು ಉಳಿಸಿಕೊಳ್ಳು ಮೂಲಕ ಗೆಲವು ಸಾಧಿಸಿದೆ.  ಈ ಮೂಲಕ ಏಕದಿನ ಸರಣಿ ಸೋಲಿನಿಂದ ಬೇಸರಗೊಂಡಿದ್ದ ಇಂಡಿಯಾ ಗೆಲುವಿನ ನಗೆ ಬೀರಿದೆ.

ಭಾರತ ತಂಡದ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಹಾಗೂ ಕೆ. ಎಲ್ ರಾಹುಲ್  5 ಓವರ್‌ಗಳನ್ನು ದಾಟುವ ವೇಳೆಗೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದ್ದರು. ಧವನ್ 52 ರನ್‌ಗಳು, ಕೊಹ್ಲಿ 40 ರನ್‌ಗಳನ್ನು ಸಿಡಿಸಿದ್ದರು.  ಭಾರತ ಪರ ಟಿ. ನಟರಾಜನ್ 2 ಹಾಗೂ ಶಾರ್ದೂಲ್ ಠಾಕೂರ್ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಕಿತ್ತರು.

ಕೊನೆಯ ಕ್ಷಣದ ವರೆಗೂ ಭಾರೀ ಕುತೂಹಲ ಹುಟ್ಟಿದ್ದ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.


ಇದನ್ನೂ ಓದಿ: ಅಧಿವೇಶನದಲ್ಲಿ ಸರ್ಕಾರದ ಬೆವರಿಳಿಸಲು ಕಾಂಗ್ರೆಸ್‌ ತಂತ್ರ! ವಿಚಾರಗಳೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights