ಗ್ರಾಮ ಪಂಚಾಯತಿ ಚುನಾವಣೆ: ಭರ್ಜರಿ ಮುನ್ನಡೆ ಸಾಧಿಸಿಸುತ್ತಿದೆ ಬಿಜೆಪಿ!
ಕರ್ನಾಟಕ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಇಂದು ತಡರಾತ್ರಿಯಲ್ಲಿ ಪೂರ್ಣ ಫಲಿತಾಂಶ ಗೊತ್ತಾಗಲಿದೆ. ಎಣಿಕೆ ನಡೆಯುತ್ತಿರುವ ಇತ್ತೀಚಿಗಿನ ಮಾಹಿತಿಯಂತೆ ಬಿಜೆಪಿ ಮುನ್ನಡೆ ಸಾಧಿಸಿದೆ.
ಇತ್ತೀಚೆಗಿನ ಮಾಹಿತಿಯಂತೆ ಬಿಜೆಪಿ 12,795 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 9,545 ಸ್ಥಾನಗಳಲ್ಲಿ, ಜೆಡಿಎಸ್ 4,301 ಸ್ಥಾನಗಳಲ್ಲಿ ಹಾಗೂ ಇತರರು 3,777 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಲಕ್ ಫಲಿತಾಂಶದಲ್ಲಿ ಗೊತ್ತಾಗಲಿದೆ.
ಮುಂದಿನ ರಾಜಕೀಯ ದಿಗ್ಸೂಚಿ ಎಂದು ಪರಿಗಣಿಸಲಾದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿರುವ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ. ಬ್ಯಾಲಟ್ ಪೇಪರ್‌ನಿಂದ ಮತದಾನ ಆಗಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ತುಸು ಮಂದಗತಿಯಲ್ಲಿ ಸಾಗುತ್ತಿದೆ.
ಇದನ್ನೂ ಓದಿ: ಧರ್ಮೇಗೌಡರನ್ನು ಕೊಂದವರು ಯಾರು? ಆತ್ಮಹತ್ಯೆಗೆ ಕಾರಣಗಳೇನು?

