ಈಜಿಪ್ಟ್ನಲ್ಲಿದೆ ಹಾವುಗಳಿಂದ ಮಸಾಜ್ ಮಾಡಿಸಿಕೊಳ್ಳುವ ಆಯ್ಕೆ..! ನೋಡಿದ್ರೆ ಶಾಕ್ ಆಗ್ತೀರಾ..
ಒತ್ತಡದ ಜೀವನ ಬದಲಾಗುತ್ತಿರುವ ಜೀವನ ಶೈಲಿಯಿಂದ ಮನುಷ್ಯನ ಆರೋಗ್ಯ ಹಾಳಾಗುತ್ತಿದೆ. ಕೊಂಚ ಮಟ್ಟಿಗೆ ವಿಶ್ರಾಂತಿ ಪಡೆಯಲು ಸಮಯವಿಲ್ಲದಷ್ಟು ಜನ ಬ್ಯೂಸಿಯಾಗಿದ್ದಾರೆ. ಕೆಲವೊಂದಿಷ್ಟು ಜನ ರಿಲೀಫ್ ಗಾಗಿ ಮಸಾಜ್ ಮಾಡಿಸಿಕೊಳ್ಳುತ್ತಾರೆ. ಇಂತಹ ಮಸಾಜ್ ಆಯ್ಕೆ ಮಾಡಿಕೊಳ್ಳುವವರಿಗೆ ಇಲ್ಲೊಂದು ವಿನೂತನ ಮಸಾಜ್ ಲಭ್ಯವಿದೆ. ಅದುವೇ ಹಾವಿನ ಮಸಾಜ್.
ಹೌದು… ಕೇಳುವುದಕ್ಕೆ ಭಯ ಆದರೂ ಇದು ಸತ್ಯ. ಈಜಿಪ್ಟ್ನ ಕೈರೋ ಸ್ಪಾಗೆ ಭೇಟಿ ನೀಡುವ ಜನರು ವಿಷಪೂರಿತ ಹಾವುಗಳು ಸೇರಿದಂತೆ ಹಲವಾರು ರೀತಿಯ ಮಸಾಜ್ಗಳನ್ನು ಆಯ್ಕೆ ಮಾಡಬಹುದು. ಸ್ಪಾದಲ್ಲಿ ಜೀವಂತ ಹಾವುಗಳು ನೋವು ನಿವಾರಣೆಗೆ ಕೆಲಸ ಮಾಡುತ್ತವೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ರಾಯಿಟರ್ಸ್ ವಿಡಿಯೋವೊಂದಲ್ಲಿ ಮೊದಲು ಬೆನ್ನಿಗೆ ಎಣ್ಣೆ ಹಾಕಲಾಗುತ್ತದೆ. ನಂತರ 30 ನಿಮಿಷಗಳ ಮಸಾಜ್ ಮಾಡಲಾಗುತ್ತದೆ. ಬಳಿಕ ಸುಮಾರು 28 ವಿವಿಧ ರೀತಿಯ ವಿಷರಹಿತ ಹಾವುಗಳನ್ನು ಬಳಸಲಾಗುತ್ತದೆ.
ಹಾವು ಸ್ನಾಯು ಮತ್ತು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ಮಾಸ್ಯೂಸ್ ಮತ್ತು ಸ್ಪಾ ಮಾಲೀಕ ಸಫ್ವತ್ ಸೆಡ್ಕಿ ಸುದ್ದಿ ವೆಬ್ಸೈಟ್ಗೆ ತಿಳಿಸಿದ್ದಾರೆ.
This massage at a Cairo spa is not for the faint-hearted pic.twitter.com/YWAsHrHn1e
— Reuters (@Reuters) December 29, 2020
“ನಾನು ಮೊದಲಿಗೆ ಹೆದರುತ್ತಿದ್ದೆ. ಹಾವುಗಳು ನನ್ನ ದೇಹದ ಮೇಲೆ ಇರುತ್ತವೆ ಎಂಬ ಭಯವಿದೆ, ”ಎಂದು ಅವರು ಹೇಳಿದರು. “ಆದರೆ ಭಯ, ಆತಂಕ ಮತ್ತು ಉದ್ವೇಗವು ಕಡಿಮೆಯಾಯಿತು ಮತ್ತು ಹಾವುಗಳು ನನ್ನ ಬೆನ್ನಿನ ಮೇಲೆ ಹೋಗಿದ್ದರಿಂದ ವಿಶ್ರಾಂತಿ ಪಡೆದಂತಾಯಿತು ಮತ್ತು ಅವುಗಳನ್ನು ಇಟ್ಟುಕೊಂಡಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು” ಎಂದು ಅವರು ಕ್ಲಿಪ್ನಲ್ಲಿ ಹೇಳುತ್ತಾರೆ.
ಆನ್ಲೈನ್ನಲ್ಲಿ ಹಂಚಿಕೊಂಡಾಗಿನಿಂದ ವೀಡಿಯೊ ಸಾಕಷ್ಟು ವೈರಲ್ ಆಗಿದೆ.

