ಬೆಂಗಳೂರಿನಿಂದ ಏರ್ಪೋರ್ಟ್ಗೆ ಇಂದಿನಿಂದ 10 ರೈಲು ಸೇವೆ ಆರಂಭ!
ಸಿಲಿಕಾನ್ ಸಿಟಿ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಹೊಂದಲು ಬೆಂಗಳೂರಿನಿಂದ ಏರ್ಪೋರ್ಟ್ಗೆ ಇಂದಿನಿಂದ 10 ರೈಲು ಸೇವೆ ಆರಂಭಗೊಂಡಿವೆ.
ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ರೈಲು ಸೇವೆ ಆರಂಭಗೊಂಡಿದೆ. ಕೇಂದ್ರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ಉಪನಗರ ರೈಲು ಹೊರಟಿದೆ. ಈ ಮೂಲಕ 10 ರೂಪಾಯಿಗೆ ಟಿಕೆಟ್ ಪಡೆದು ರೈಲಿನಲ್ಲಿ ಕೆಂಪೇಗೌಡ ಏರ್ಪೋರ್ಟ್ಗೆ ಪಯಣ ಮಾಡಬಹುದಾಗಿದೆ.
ಇಂದು ಮುಂಜಾನೆ ಡೆಮೋ ರೈಲು ಸೇವೆ ಆರಂಭಗೊಂಡಿದ್ದು ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಿಗಿನ ಜಾವ 4.45ಕ್ಕೆ ಏರ್ಪೋರ್ಟ್ಗೆ ರೈಲು ಆರಂಭಿಸಲಾಯಿತು. ಈ ಡೆಮೋ ರೈಲಿನಲ್ಲಿ ಸಂಸದ ಪಿ.ಸಿ ಮೋಹನ್ ಅವರು ರೈಲ್ವೆ ಅಧಿಕಾರಿಗಳ ಜೊತೆ ರೈಲಿನಲ್ಲಿ ಪ್ರಯಾಣ ಬೆಳಿಸಿದರು. ವಿಮಾನ ನಿಲ್ದಾಣಕ್ಕೆ 2 ಕಿ.ಮೀ ದೂರದಲ್ಲಿ ಹಾಲ್ಟ್ ಸ್ಟೇಷನ್ ಇದೆ. ಇನ್ನು ದೇವನಹಳ್ಳಿ ರೈಲು ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆ ಇದ್ದು, ರೈಲಿನಲ್ಲಿ ಪ್ರಯಾಣ ಮಾಡಿ ದೇವನಹಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣಿಕರು ತೆರಳಿದ್ದಾರೆ.
ದೇವನಹಳ್ಳಿ ರೈಲ್ವೆ ನಿಲ್ಆಣದಿಂದ ಎರಡು ಕಿಲೋಮೀಟರ್ ದೂರದಲ್ಲಿ ಏರ್ಪೋರ್ಟ್ ಇದೆ. ರೈಲ್ವೆ ನಿಲ್ದಾಣದಿಂದ ನೇರವಾಗಿ ವಿಮಾನ ಟರ್ಮಿನಲ್ ಕಡೆ ಬಸ್ ಸಂಚಾರ ವ್ಯವಸ್ಥೆ ಕೂಡ ಇದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

