ಮೋದಿಗೆ ಚುನಾವಣಾ ರ್‍ಯಾಲಿ ನಡೆಸಲು ಸಮಯವಿದೆ; ರೈತರ ಭೇಟಿಗೆ ಸಮಯವಿಲ್ಲ: ಶರದ್ ಪವಾರ್

ಪ್ರಧಾನಿ ಮೋದಿಯವರು ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಪ್ರಚಾರ ರ್ಯಾಲಿ ನಡೆಸುತ್ತಿದ್ದಾರೆ. ಅವರಿಗೆ ರ್ಯಾಲಿ ನಡೆಸಲು ಸಮಯವಿದೆ. ಆದರೆ, ಮೂರು ತಿಂಗಳುಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ ಎಂದು ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಆಕ್ರೋಶ ವ್ಯಕ್ತಡಿಸಿದ್ದಾರೆ.

ಇದೇ ತಿಂಗಳ 27ರಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಅರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಕೊಲ್ಕತ್ತಾದಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಅಲ್ಲದೆ, ಬಂಗಾಳದಲ್ಲಿ ಮೋದಿ-ಅಮಿತ್‌ ಶಾ ಅವರು 40ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಲು ಬಂಗಾಳ ಬಿಜೆಪಿ ಯೋಜಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪವಾರ್, ಸುದೀರ್ಘ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸಲು ಮೋದಿ ಅವರಿಗೆ ಸಮಯವಿದೆ. ಆದರೆ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಭೇಟಿಯಾಗಲು ಸಮಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಭಾತೃತ್ವ ಬೆಳೆಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ, ಆದರೆ ಬಿಜೆಪಿಯು ದೇಶದಲ್ಲಿ ಕೋಮು ವಿಷ ಪಸರಿಸುವ ಕೆಲಸ ಮಾಡುತ್ತಿದೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.

ಇದನ್ನೂ ಓದಿ: BJP ಸವಾಲಿಗೆ ತಕ್ಕ ಉತ್ತರ: ಒಂದೇ ಕ್ಷೇತ್ರದಲ್ಲಿ ಮಮತಾ ಸ್ಪರ್ಧೆ; ಬಂಗಾಳ ಹುಲಿಯನ್ನು ಎದುರಿಸ್ತಾರ ಸುವೇಂದು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights