ಚುನಾವಣಾ ಸಮೀಕ್ಷೆ: ಅಸ್ಸಾಂನಲ್ಲಿ BJPಗೆ ಅಲ್ಪ ಬಹುಮತ; ಕಡೆಗಣಿಸಿದ್ರೆ ಅಧಿಕಾರವಿಲ್ಲ!

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ. ಚುನಾವಣೆಯು ಕೇಂದ್ರ ಸರ್ಕಾರದ 2019ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿಯ ಮೇಲೆ ನಡೆಯಲಿದ್ದರೂ, ಎನ್‌ಡಿಎ ಕಡಿಮೆ ಅಂತರದಿಂದ ಗೆಲ್ಲುತ್ತದೆ ಮತ್ತು ಯುಪಿಎಗೆ ಮತ ಹಂಚಿಕೆಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಧು ಟೌಮ್ಸ್‌ ನೌ ನಡೆಸಿದ ಸಿ-ವೋಟರ್‌ ಸಮೀಕ್ಷೆ ತಿಳಿಸಿದೆ.

126 ಸದಸ್ಯರ ಅಸ್ಸಾಂ ಅಸೆಂಬ್ಲಿಯಲ್ಲಿ ಎನ್‌ಡಿಎ 67 ಕ್ಷೇತ್ರಗಳು, ಯುಪಿಎ 57 ಮತ್ತು ಇತರರು 2 ಗೆಲ್ಲುತ್ತದೆ ಎಂದು ಸಮೀಕ್ಷೆಯು ಅಂದಾಜಿಸಿದೆ. 2016 ರ ಅಸ್ಸಾಂ ಚುನಾವಣೆಯಲ್ಲಿ ಎನ್‌ಡಿಎ 74 ಅಸೆಂಬ್ಲಿ ವಿಭಾಗಗಳನ್ನು ಗೆದ್ದಿತ್ತು ಮತ್ತು ಯುಪಿಎ 39 ಸ್ಥಾನಗಳನ್ನು ಗಳಿಸಿತ್ತು. ಇದರಿಂದಾಗಿ ಈ ಚುನಾವಣೆಯಲ್ಲಿ ಬಿಜೆಪಿ ಮತದಾರರನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

‘ಇಂದು ವಿಧಾನಸಭಾ ಚುನಾವಣೆ ನಡೆದರೆ ನೀವು ಯಾರಿಗೆ ಮತ ಹಾಕುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರಿಸಿರುವ ಜನರಯಲ್ಲಿ, 42.29 ರಷ್ಟು ಜನರು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆ. 40.7 ರಷ್ಟು ಜನರು ಯುಪಿಎ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ.

ಇದನ್ನೂ ಓದಿ: ಭಾರತದ ಹೆಸರು ಬದಲಿಸಿ; ದೇಶಕ್ಕೆ ಮೋದಿ ಹೆಸರಿಡುವ ದಿನ ದೂರವಿಲ್ಲ: ಮಮತಾ ಬ್ಯಾನರ್ಜಿ

ಅಸ್ಸಾಂ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಮತ್ತು ಅಸೋಮ್ ಗಣ ಪರಿಷತ್ (ಎಜಿಪಿ) ಮೈತ್ರಿ ಮಾಡಿಕೊಂಡಿವೆ. ಯುಪಿಎಯಲ್ಲಿ ಕಾಂಗ್ರೆಸ್, ಬದ್ರುದ್ದೀನ್ ಅಜ್ಮಲ್ ಅವರ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಬೋಡೋ ಪೀಪಲ್ಸ್ ಫ್ರಂಟ್ ಮತ್ತು ಮೂರು ಎಡ ಪಕ್ಷಗಳನ್ನು ಒಳಗೊಂಡಿದೆ.

ಮತದಾನ ಪೂರ್ವ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್, “ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಮತ್ತು ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ತಮ್ಮ ಪಕ್ಷಕ್ಕೆ ಮತಗಳಾಗಿ ಪರಿವರ್ತನೆಯಾಗುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಎಎಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ವಾಸ್ತವವಾಗಿ, ಅವರು ಮತಗಳನ್ನು ಮಾತ್ರ ವಿಭಜಿಸುತ್ತಾರೆ. ಆದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಹೆಚ್ಚಿದ್ಯಾ BJP ಪ್ರಾಬಲ್ಯ; ಲಾಭ ಗಳಿಸುತ್ತಾ ‘ನೌ ಆರ್ ನೆವರ್’ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights