ಟೋಸ್ಟ್ ಕ್ರಂಚ್ ನಲ್ಲಿ ಸೀಗಡಿ ಬಾಲ ಕಂಡು ವ್ಯಕ್ತಿ ಶಾಕ್ : ವೀಡಿಯೋ ವೈರಲ್!

ಟೋಸ್ಟ್ ಕ್ರಂಚ್ ತಿನ್ನಲು ಬಯಸಿದ ವ್ಯಕ್ತಿಗೆ ಆ ಪ್ಯಾಕೇಟ್ ನಲ್ಲಿ ಸೀಗಡಿ ಬಾಲಗಳು ಸಿಕ್ಕು ಶಾಕ್ ಆಗಿದ್ದಾನೆ.

ಹೌದು… ಬೆಳಗಿನ ಉಪಾಹಾರಕ್ಕಾಗಿ ಟೋಸ್ಟ್ ಕ್ರಂಚ್ ಪ್ಯಾಕೇಟ್ ಕಟ್ ಮಾಡಿದ ವ್ಯಕ್ತಿಗೆ ಸೀಗಡಿ ಬಾಲಗಳು ಕಂಡುಬಂದಿವೆ. ಈ ಚಿತ್ರಗಳನ್ನು ವ್ಯಕ್ತಿ ಟ್ವೀಟರ್ ಮೂಲಕ ಶೇರ್ ಮಾಡಿದ್ದು ವೈರಲ್ ಆಗಿದೆ.

ಏನಾಯಿತು ಎಂಬುದು ಇಲ್ಲಿದೆ :-
ಲಾಸ್ ಏಂಜಲೀಸ್‌ನ 41 ವರ್ಷದ ಹಾಸ್ಯನಟ ಮತ್ತು ಬರಹಗಾರ ಜೆನ್ಸನ್ ಕಾರ್ಪ್ ಸೋಮವಾರ ಬೆಳಿಗ್ಗೆ ತನ್ನ ನೆಚ್ಚಿನ ದಾಲ್ಚಿನ್ನಿ ಟೋಸ್ಟ್ ಕ್ರಂಚ್ ನ್ನು ಬಟ್ಟಲಿನಲ್ಲಿ ಹಾಕಿಕೊಂಡು ತಿನ್ನುತ್ತಿದ್ದರು. ಈ ವೇಳೆ ಸೀಗಡಿ ಬಾಲ ಕಂಡುಬಂದಿದೆ. ಅವರು ಮತ್ತಷ್ಟು ತನಿಖೆ ಮಾಡಿದಾಗ ಪ್ಯಾಕೇಟ್ ನಲ್ಲಿ ಮತ್ತೊಂದು ಸೀಗಡಿ ಬಾಲಗಳು ಕಾಣಿಸಿವೆ. ಈ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ದಾಲ್ಚಿನ್ನಿ ಟೋಸ್ಟ್ ಕ್ರಂಚ್ ಈ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನು ಜೀರ್ಣಿಸಿಕೊಳ್ಳಲಾಗದ ಕೆಲವು ನೆಟ್ಟಿಗರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights