ನಾಳೆ ತರಬೇತಿ ನೌಕರರಿಂದ ಬಸ್ ಓಡಿಸಲು ಚಿಂತನೆ : ಜನರ ಜೀವದ ಜೊತೆ ಚೆಲ್ಲಾಟವಾಡುತ್ತಾ ಬಿಎಂಟಿಸಿ?

ಮುಷ್ಕರಕ್ಕೆ ಸಜ್ಜಾಗಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರವೂ ತೊಡೆತಟ್ಟಿ ನಿಂತಿದೆ. ನಾಳೆ ಮುಷ್ಕರ ನಡೆಸಲು ನೌಕರರು ಹಠ ತೊಟ್ಟರೆ ನಾಳೆ ತರಬೇತಿ ನೌಕರರಿಂದ ಬಸ್ ಓಡಿಸಲು ಬಿಎಂಟಿಸಿ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.

ಸಾರಿಗೆ ನೌಕರರ ಮುಷ್ಕರದಿಂದ ಜನರ ಮೇಲಾಗುವ ಹೊರೆಯನ್ನು ಕಡಿಮೆ ಮಾಡಲು ಬಿಎಂಟಿಸಿ 2000 ತರಬೇತಿ ನೌಕರರಿಗೆ ಬಸ್ ಓಡಿಸಲು ಅವಕಾಶ ನೀಡಲು ಚಿಂತಿಸುತ್ತಿದೆ. ಕಳೆದ ಬಾರಿ ಸಾರಿಗೆ ನೌಕರರ ಪ್ರತಿಭಟನೆ ವೇಳೆ ಈ ಚಿಂತನೆ ಮಾಡಲಾಗಿತ್ತು. ಆದರೆ ಅದು ಸಂಪೂರ್ಣವಾಗಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಇದರ ಬಗ್ಗೆ ಚಿಂತಿಸಲಾಗುತ್ತಿದೆ.

ಆದರೆ ಆ ನೌಕರರು ಅದೆಷ್ಟು ಬಸ್ ಚಾಲನೆಗೆ ಅರ್ಹರಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ತರಬೇತಿ ನೌಕರರಿಂದ ಬಸ್ ಚಾಲನೆ ಮಾಡುವ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕಳೆದ ಬಾರಿ ಯಶವಂತಪುರದಲ್ಲಿ ತರಬೇತಿ ನೌಕರ ಬಸ್ ಚಲಾಯಿಸುತ್ತಿದ್ದ ವೇಳೆ ಕಂಬಕ್ಕೆ ಬಸ್ ಗುದ್ದಿತ್ತು. ಹೀಗಾಗಿ ಜನರ ಜೀವದ ಜೊತೆ ಬಿಎಂಟಿಸಿ ಚೆಲ್ಲಾಟ ಆಡುತ್ತಿದೆ ಎಂದು ಜನ ಆರೋಪಿಸುತ್ತಿದ್ದಾರೆ.

ಇದರ ಜೊತೆಗೆ ಮಾತ್ರವಲ್ಲದೇ ಬಿಎಂಟಿಸಿ ಮತ್ತೊಂದು ಎಡವಟ್ಟು ಮಾಡಲು ಮುಂದಾಗಿದೆ. ಮುಷ್ಕರ ಹತ್ತಿಕ್ಕಲು 3000 ಖಾಸಗಿ ಬಸ್ ಬಳಕೆ ಮಾಡಲು ಯೋಚಿಸುತ್ತಿದೆ. ಈ ಘಟನೆ ಸಾಕಷ್ಟು ಚರ್ಚೆಗೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ಸಾರಿಗೆ ಇಲಾಖೆಯಿಂದ ಟಿಕೆಟ್ ದರ ನಿಗಧಿ ಮಾಡಿ ಖಾಸಗೀ ಬಸ್ ಗಳಿಗೆ ಓಡಾಟಕ್ಕೆ ಅವಕಾಶ ನೀಡಲು ಪ್ಲ್ಯಾನ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನೂ ಸಾರಿಗೆ ಬಸ್ ನೌಕರರ ಮುಷ್ಕರವನ್ನು ಬಂಡವಾಳವನ್ನಾಗಿಸಿಕೊಂಡ ಖಾಸಗೀ ಬಸ್ ಗಳು ದುಬಾರಿ ಟಿಕೇಟ್ ನಿಗಧಿ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights