ಸಿಡಿದೆದ್ದ ಸಾರಿಗೆ ಸಿಬ್ಬಂದಿಗಳಿಗೆ ಸರ್ಕಾರದಿಂದ ಬಿಗ್ ಶಾಕ್ : ಪ್ರತಿಭಟನಾಕಾರರಿಗೆ ಪೊಲೀಸ್ ಆಯುಕ್ತರ ಎಚ್ಚರಿಕೆ!

ಸಿಡಿದೆದ್ದ ಸಾರಿಗೆ ಸಿಬ್ಬಂದಿಗಳಿಗೆ ಸರ್ಕಾರದಿಂದ ಬಿಗ್ ಶಾಕ್ ಕೊಟ್ಟಿದ್ದು, ಪ್ರತಿಭಟನಾಕಾರರಿಗೆ ಪೊಲೀಸ್ ಆಯುಕ್ತರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಹೌದು… ಹಿರಿಯ ಅಧಿಕಾರಿಗಳ ಸಭೆ ಬಳಿಕ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಾಳೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಂತ್, ” ಕೊರೊನಾ ಪ್ರೋಟೋಕಾಲ್ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಮುಂದಾಗುವಂತಿಲ್ಲ. ಬಲವಂತವಾಗಿ ಬಸ್ ನಿಲ್ಲಿಸುವುದು, ಬಲವಂತವಾಗಿ ಬಂದ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸೆಕ್ಷನ್ 144 ಅಡಿಯಲ್ಲಿ ಆದೇಶ ಹೊರಡಿಸಿದ್ದೇವೆ ” ಎಂದು ಹೇಳಿದ್ಧಾರೆ.

” ನಮಗೆ ಯಾರು ಅನುಮತಿ ಕೇಳಿಲ್ಲ. ಇದೇ ತಿಂಗಳು 21 ರವರೆಗೂ ಕೊರೊನಾ ಪ್ರೋಟೋಕಾಲ್ ಜಾರಿಯಲ್ಲಿದೆ. ಹೀಗಾಗಿ ಈ ವೇಳೆ ನಾಳೆ ಪ್ರತಿಭಟನೆಗೆ ಮುಂದಾದರೆ ಅಂಥವರನ್ನು ಅರೆಸ್ಟ್ ಮಾಡಿ ಠಾಣೆಯಲ್ಲಿ ಕೂಡಸುವುದಿಲ್ಲ. ನಂತರ ಅವರನ್ನು ಬಿಡುಗಡೆ ಮಾಡುವುದಿಲ್ಲ. ಬದಲಿಗೆ ಅರೆಸ್ಟ್ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ” ಎಂದು ಕಮಲ್ ಪಂತ್ ಎಚ್ಚರಿಕೆ ಕೊಟ್ಟಿದ್ದಾರೆ.

ಹೀಗಾಗಿ ನಾಳೆ ಅಹಿತಕರ ಘಟನೆ ನಡೆಯದಂತೆ ಭದ್ರತೆ ಹಾಕಿದ್ದೇವೆ. ಸರ್ಕಾರ ಕೂಡ ಎಚ್ಚರಿಕೆ ಕೊಟ್ಟಿದೆ. ಹಠಕ್ಕೆ ಬಿದ್ದು ಪ್ರತಿಭಟನೆಯಿಂದ ಹಿಂಸೆ ಮಾಡಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಶಿವಮೊಗ್ಗ, ಹಾಸನ ಹಾಗೂ ಬೆಂಗಳೂರಿನಲ್ಲಿ ಮುಷ್ಕರಕ್ಕೆ ಪ್ರತಿಭಟನೆಗೆ ನೌಕರರು ಮುಂದಾಗಿದ್ದಾರೆ. ಜೊತೆಗೆ 2ನೇ ಪಾಳಿಯಕ್ಕೆ ಹೋಗಬೇಕಾದ ನೌಕರರು ಡಿಪೋಗಳಿಂದ ಬಸ್ ತೆಗೆಯುತ್ತಿಲ್ಲ. ಮೆಜೆಸ್ಟಿಕ್ಗೆ ಯಶವಂತಪುರ ಬಸ್ ಡಿಪೋಗಳಿಂದ ಬಸ್ಸೇ ಬರುತ್ತಿಲ್ಲ. ಮುಷ್ಕರದ ಬಿಸಿ ಇಂದಿನಿಂದಲೇ ಜಾರಿಯಾಗಿದೆ. ಡಿಪೋ ದಿಂದ ಮೆಜೆಸ್ಟಿಕ್ ಗಳಿಗೆ ಹಲವು ಬಸ್ ಗಳು ಬರುತ್ತಿಲ್ಲ.

ಹೀಗಾಗಿ ನಾಳೆ ಮುಷ್ಕರ ಯಾವ ಸ್ವರೂಪ ಪಡೆದುಕೊಳ್ಳುತ್ತದೆ? ಸರ್ಕಾರ ನೌಕರರ ಬೇಡಿಕೆಗೆ ಸ್ಪಂದಿಸುತ್ತಾ? ಅಥವಾ ನೌಕರರ ವಿರುದ್ಧವೇ ತೊಡೆತಟ್ಟಿ ನಿಲ್ಲುತ್ತಾ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights