ಬೆಳಗಾವಿ ಪ್ರಚಾರದ ವೇಳೆ ಜ್ವರದಿಂದಾಗಿ ಸುಸ್ತಾದ ಸಿಎಂ : ವಿಶ್ರಾಂತಿಗೆ ವೈದ್ಯರ ಸೂಚನೆ..!
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪಗೆ ಜ್ವರ ಕಾಣಿಸಿಕೊಂಡಿದ್ದು ವಿಶ್ರಾಂತಿಗೆ ವೈದ್ಯರ ಸೂಚನೆ ನೀಡಿದ್ದಾರೆ.
ಹೌದು… ನಿನ್ನೆಯಷ್ಟೇ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಪರ ಮತಯಾಚನೆಗೆ ಬೆಳಗಾವಿಗೆ ತೆರಳಿದ್ದ ಬಿಎಸ್ ಯಡಿಯೂರಪ್ಪ ಅವರಿಗೆ ಸಂಜೆ ಸುಸ್ತು ಮತ್ತು ಜ್ವರ ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಕೆಎಲ್ ಇ ಆಸ್ಪತ್ರೆಯ ವೈದ್ಯರು ಬಂದು ಆರೋಗ್ಯ ತಪಾಸಣೆ ಮಾಡಿದ್ದಾರೆ. ಜೊತೆಗೆ ಅವರಿಗೆ ವಿಶ್ರಾಂತಿಗೆ ಸೂಚಿಸಿದ್ದಾರೆ. ಇಂದು ಬೆಳಗ್ಗೆ ಮತ್ತೆ ಬಿಮ್ಸ್ ಆಸ್ಪತ್ರೆಯ ವೈದ್ಯರು ತಪಾಸಣೆಗೆ ಬಂದಿದ್ದಾರೆ.
ಹೀಗಾಗಿ ಸಿಎಂ ತಾವು ಉಳಿದುಕೊಂಡಿರುವ ಹೊಟೇಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈಗಾಗಲೇ ಕೊರೊನಾ ದಿಂದ ಚೇತರಿಸಿಕೊಂಡ ಸಿಎಂ ಅವರಿಗೆ ನಿನ್ನೆ ಹಗಲೇ ಜ್ವರ ಕಂಡುಬಂದಿತ್ತು. ಆದರೂ ಮೂಡಲಗಿ, ಗೋಕಾಕ್ ನಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಗೋಕಾಕ್ ನಲ್ಲಿ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಇಂದು ಕೂಡ ಸಿಎಂ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿರುವ ಆಸ್ಪತ್ರೆ ಸುತ್ತ ಸ್ಯಾನಿಟೈಸ್ ಮಾಡಲಾಗಿತ್ತು ಮುಂಜಾಗ್ರತೆ ವಹಿಸಲಾಗುತ್ತಿದೆ.

