ಮುಂದಿನ ವರ್ಷದವರೆಗೂ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಇಲ್ಲ: ರೈಲ್ವೇ ಸಚಿವಾಲಯ

ಕೊರೊನಾ ಸೋಂಕುನ ಹಾವಳಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮುಂದಿನ ವರ್ಷದವರೆಗೂ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಆರಂಭವಾಗುವುದಿಲ್ಲ. ಮುಂದಿನ ವರ್ಷ ಪರಿಸ್ಥಿತಿ ನೋಡಿಕೊಂಡು ರೈಲು ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಸುತ್ತವೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.

ಪ್ರಸ್ತುತ 736 ವಿಶೇಷ ರೈಲುಗಳು, ಕೋಲ್ಕತ್ತದಲ್ಲಿ ಮೆಟ್ರೊ ರೈಲುಗಳು, ಮುಂಬೈನಲ್ಲಿ ಲೋಕಲ್‌ ರೈಲುಗಳು ಸಂಚರಿಸುತ್ತಿವೆ ಮತ್ತು 20 ವಿಶೇಷ ಕ್ಲೋನ್‌ ರೈಲುಗಳು (ಒಂದೇ ಮಾದರಿಯ) ಕಾರ್ಯ ನಿರ್ವಹಿಸುತ್ತಿವೆ. ಹಬ್ಬಗಳ ಸಂದರ್ಭದಲ್ಲಿ (ಅಕ್ಟೋಬರ್‌ 20ರಿಂದ ನವೆಂಬರ್‌ 30 ರವರೆಗೆ) 436 ವಿಶೇಷ ರೈಲುಗಳು ಸಂಚರಿಸಿವೆ.

ಕೋವಿಡ್‌-19 ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತಿಂಗಳು, ಸರ್ಕಾರ ಮತ್ತು ರೈಲ್ವೆ ಸಚಿವಾಲಯ ರೈಲು ಸಂಖ್ಯೆಯನ್ನು ಹೆಚ್ಚಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಿದೆ. ಹಬ್ಬದ ಸಂದರ್ಭದಲ್ಲಿ ಒದಗಿಸುವ ವಿಶೇಷ ರೈಲು ಸೇವೆಯನ್ನು ಮುಂದುವರಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಣೆಯಾದ ನಂತರ ಎಲ್ಲ ಪ್ರಯಾಣಿಕ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ವಿಶೇಷ ರೈಲು ಸಂಚಾರದಿಂದ ರೈಲ್ವೆ ಈವರೆಗೆ ₹3,322 ಕೋಟಿ ಆದಾಯ ಗಳಿಸಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕಿಂತ ಶೇ 90ರಷ್ಟು ಕಡಿಮೆಯಾಗಿದೆ.


Read Also: ಹತ್ರಾಸ್ ಸಂತ್ರಸ್ತೆಯ‌ ಕುಟುಂಬಕ್ಕೆ ರಕ್ಷಣೆ ಇಲ್ಲ; ಜೀವಭಯದಲ್ಲಿ ಬದುಕುತ್ತಿದೆ: PUCL ಸಂಶೋಧನಾ ವರದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights