ಬಿಜೆಪಿ-ಕಾಂಗ್ರೆಸ್‌ ಸಮರ: ಯುವ ಕಾಂಗ್ರೆಸ್‌ ಅಧ್ಯಕ್ಷನ ವಿರುದ್ದ ದೂರು ದಾಖಲು!

ಕೊರೊನಾ ನಿರ್ವಹಣೆಯ ವಿಚಾರದ ಬಗ್ಗೆ ಕಾಂಗ್ರೆಸ್‌, ಬಿಜೆಪಿ ವಾಕ್ಸಮಕ್ಕಿಳಿದಿದ್ದು, ಇರಡೂ ಪಕ್ಷಗಳ ನಡುವಿನ ಸಮರ ಇದೀಗ ದೂರು ನೀಡುವ ಹಂತಕ್ಕೆ ಬಂದು ನಿಂತಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಅವರು ಔಷಧ ನಿಯಂತ್ರಣಾಲಯಕ್ಕೆ ದೂರು ನೀಡಿದ್ದಾರೆ.

ರಕ್ಷಾ ರಾಮಯ್ಯ ಮತ್ತು ಜೊತೆಗಾರರು ಕೊರೊನಾ ಪೀಡಿತರಿಗೆ ಮೆಡಿಕಲ್ ಕಿಟ್ ಜತೆಗೆ ಸ್ಟಿರಾಯ್ಡ್ ಔಷಧಗಳನ್ನು ಹಂಚಿಕೆ ಮಾಡಿದ್ದಾರೆ. ಸ್ಟಿರಾಯ್ಡ್ ಔಷಧಗಳನ್ನು ವೈದ್ಯರು ಸಲಹೆ ನೀಡಿದರೆ ಮಾತ್ರ ಸೋಂಕಿತರಿಗೆ ಕೊಡಬೇಕು. ಆದರೆ, ಯುವ ಕಾಂಗ್ರೆಸ್‌ನ ತಂಡ ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಔಷಧಗಳನ್ನು ಹಂಚಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಜೇಂದ್ರ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಅಲ್ಲದೆ, ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಬಿಜೆಪಿ ಸರ್ಕಾರವು ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಹಾಗೂ ಯುವ ಕಾಂಗ್ರೆಸ್‌ ಮುಖಂಡರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು. ಈ ನಡುವೆ ಬಿಜೆಪಿ ಯುವ ಮೋರ್ಚಾ ರಕ್ಷಾ ರಾಮಯ್ಯ ವಿರುದ್ದ ದೂರು ನೀಡಿದೆ.

Read Also: ನಾರದ ಪ್ರಕರಣ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಧನ ಏಕಿಲ್ಲ: ಪತ್ರಕರ್ತ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights