ಬ್ಲಾಕ್ ಫಂಗಸ್ ಗಿಂತಲೂ ಡೇಂಜರ್ ವೈಟ್ ಫಂಗಸ್ : ಏನಿದು ವೈಟ್ ಫಂಗಸ್..?

ಕೊರೊನಾ ಸೋಂಕಿನಿಂದ ಜನ ಚೇತರಿಸಿಕಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಬ್ಲಾಕ್ ಫಂಗಸ್ ಜೊತೆಗೆ ವೈಟ್ ಫಂಗಸ್ ಕೂಡ ಕಾಣಿಸಿಕೊಂಡಿದೆ. ಆತಂಕಕಾರಿ ವಿಚಾರ ಅಂದರೆ ಈ ವೈಟ್ ಫಂಗಸ್ ಬ್ಲಾಕ್ ಫಂಗಸ್ ಗಿಂತಲೂ ಅಪಾಯಕಾರಿ ಎನ್ನಲಾಗುತ್ತಿದೆ.

ವೈಟ್ ಫಂಗಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಅಥವಾ ಇತರ ವಯೋಸಹಜ ಕಾಯಿಲೆಗಳಿರುವ ಜನರಲ್ಲಿ ಹೆಚ್ಚು ದಾಳಿ ಮಾಡುತ್ತದೆ. ವಾತಾವರಣದಲ್ಲಿರುವ ಈ ವೈಟ್ ಫಂಗಸ್ ಉಗುರು, ಚರ್ಮ, ಲಂಗ್ಸ್, ಮೂಗಿನ ಮೂಲಕ ದೇಹವನ್ನು ಸೇರಿಕೊಳ್ಳುತ್ತದೆ. ನಂತರ ಕಣ್ಣು, ಮೂಗು, ಮೆದುಳು, ಖಾಸಗಿ ಅಂಗಾಂಗಳಿಗೆ ಅಪಾಯವನ್ನುಂಟು ಮಾಡುತ್ತದೆ.

ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಲ್ಲದವರು, ಈಗ ತಾನೇ ಕೊರೊನಾದಿಂದ ಚೇತರಿಸಿಕೊಂಡವರು,  ಕೊರೊನಾ ಸೋಂಕು ಗಂಭೀರತೆ ನಿಗ್ರಹಕ್ಕೆ ಸ್ಟಿರಾಯ್ಡ್‌ಸ್ ಚಿಕಿತ್ಸೆ ಪಡೆದವರು, ಸೋಂಕಿನಿಂದ ಅನಾರೋಗ್ಯ ಪೀಡಿತರಾಗಿ ಆಮ್ಲಜನಕದ ಪೂರೈಕೆಯಲ್ಲಿರುವವರು, ರೋಗನಿರೋಧಕತೆ ಕಡಿಮೆ ಇರುವವರು, ಗರ್ಭಿಣಿಯರು, ಸಣ್ಣ ಮಕ್ಕಳಿಗೆ ವೇಗವಾಗಿ ಹರಡುತ್ತದೆ.

ಮಾತ್ರವಲ್ಲದೇ ಇದು ವೇಗವಾಗಿ ಹರಡುತ್ತದೆ. ವೈಟ್ ಪಂಗಸ್ ಇದ್ದರೆ ಕೊರೊನಾ ಲಕ್ಷಣಗಳಿದ್ದರೂ ವರದಿ ಮಾತ್ರ ಪಾಸಿಟಿವ್ ಬರೋದಿಲ್ಲ. ಸಿಟಿ ಸ್ಕ್ಯಾನ್ ಮಾಡಿದಾಗ ಮಾತ್ರ ವೈಟ್ ಫಂಗಸ್ ಇರುವುದು ಗೊತ್ತಾಗುತ್ತದೆ.

ಬ್ಲ್ಯಾಕ್‌ ಫಂಗಸ್‌ಗಿಂತಲೂ ಹೆಚ್ಚು ಮಾರಣಾಂತಿಕ ಎನ್ನಲಾಗುತ್ತಿರುವ ಈ ವೈಟ್ ಫಂಗಸ್ ಸೋಂಕು ಸದ್ಯ ಮಹಾರಾಷ್ಟ್ರ, ಗುಜರಾತ್‌ ಮತ್ತು ಬಿಹಾರದಲ್ಲಿ ಕಾಣಿಸಿಕೊಂಡಿದೆ. ಪಟನಾದಲ್ಲಿ ಒಬ್ಬ ವೈದ್ಯ ಸೇರಿದಂತೆ ನಾಲ್ವರಲ್ಲಿ ವೈಟ್‌ ಫಂಗಸ್‌ ಸೋಂಕು ಕಾಣಿಸಿಕೊಂಡು ಅವರು ಗಂಭೀರ ಸ್ಥಿತಿಗೆ ತಲುಪಿದ್ದಾರೆ.

”ವೈಟ್‌ ಫಂಗಸ್‌’ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ,” ಎಂದು ಪಟನಾದ ಪಟನಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್‌.ಎನ್‌. ಸಿಂಗ್‌ ಹೇಳಿದ್ದಾರೆ. ”ಸದ್ಯ ಫಂಗಸ್‌ ಬೆಳವಣಿಗೆ ನಿರೋಧಕ ಔಷಧಗಳನ್ನು ಮಾತ್ರ ನೀಡಿ ಚಿಕಿತ್ಸೆ ನಡೆಸಲಾಗುತ್ತಿದೆ. ನಿಖರವಾಗಿ ಚಿಕಿತ್ಸಾ ಕ್ರಮಗಳು ಮುಂದಿನ ದಿನಗಳಲ್ಲಿ ಹಿರಿಯ ಆರೋಗ್ಯ ತಜ್ಞರು, ವಿಜ್ಞಾನಿಗಳಿಂದ ತಿಳಿದುಬರಬೇಕಿದೆ,” ಎಂದು ಸಿಂಗ್‌ ಹೇಳಿದ್ದಾರೆ.

ಸದ್ಯ ಇದಕ್ಕೆ ಯಾವುದೇ ಔಷಧಿಯಿಲ್ಲ. ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights