2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?

ಮುಂದಿನ ವರ್ಷದ ನಿರ್ಣಾಯಕ ಚುನಾವಣೆಗಳಲ್ಲಿ ಒಂದಾಗಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯದ ಬಗ್ಗೆ ಆರ್‌ಎಸ್‌ಎಸ್‌ ಕಾಳಜಿವಹಿಸುತ್ತಿದೆ. ಇತ್ತೀಚೆಗೆ ನೇಮಕಗೊಂಡ ಎರಡನೇ ದಂಡನಾಯಕ ದತ್ತಾತ್ರೇಯ ಹೊಸಬಲೆ ಅವರು ನಾಗ್ಬುರದಿಂದ ಲಕ್ನೋಗೆ ಸಂದೇಶವನ್ನು ರವಾನೆ ಮಾಡಿದ್ದಾರೆ. ಅವರ ಸಂದೇಶವು: ಯುಪಿಯಿಂದ ದಿನನಿತ್ಯದ ಕೆಟ್ಟ ಸುದ್ದಿಗಳು ಬರುತ್ತಿವೆ. ಇವುಗಳ ಮಧ್ಯೆ ಯೋಗಿ ಆದಿತ್ಯನಾಥ್ ಸರ್ಕಾರವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದನ್ನು ನಿರ್ಣಯಿಸುವುದು ಮತ್ತು ಮುಖ್ಯಮಂತ್ರಿಯ ಉನ್ನತ ಮಟ್ಟದ ಕಾರ್ಯಚಟುವಟಿಕೆಯ ವಿರುದ್ಧ ತಮ್ಮದೇ ಪಕ್ಷದಲ್ಲಿನ ಭಿನ್ನಾಭಿಪ್ರಾಯವನ್ನು ತಗ್ಗಿವುದಾಗಿದೆ.

ಇದಲ್ಲದೆ, ರಹಸ್ಯ ಕಾರ್ಯಸೂಚಿಯೂ ಇತ್ತು. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ನಡುವಿನ ಒಪ್ಪಂದಕ್ಕೆ ಕಾರಣವಾಯಿತು. ಯೋಗಿ ಅವರು ಮಾಜಿ ಆಡಳಿತಗಾರ ಮತ್ತು ಹೊಸದಾಗಿ ಚುನಾಯಿತರಾದ ಎಂಎಲ್ಸಿ ಅರವಿಂದ್ ಶರ್ಮಾ ಅವರನ್ನು ಯಾವುದೇ ಆಡಳಿತಾತ್ಮಕ ಅಥವಾ ಮಂತ್ರಿಮಂಡಲದ ಸ್ಥಾನಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು (ಮೋದಿ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಲು ಬಯಸಿದ್ದರು.)

ಮೋದಿ-ಯೋಗಿ ಶೋಡೌನ್: ಆರ್‌ಎಸ್‌ಎಸ್‌ ಜನರಲ್ ಹೊಸಬಲೆ ಅವರ ಕಾರ್ಯ ಮುಂದಿದೆ:

ಹೊಸಬಲೆ ಅವರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದು ತೋರುತ್ತದೆ. ಯೋಗಿ ನವದೆಹಲಿಗೆ ಬಂದು ತಮ್ಮ ಇಬ್ಬರು ದೊಡ್ಡ ನಾಯಕರಾದ ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಒಪ್ಪಿದರು. ಅವರು ನಿಜವಾಗಿಯೂ ಶಾಂತಿಯುತ ರಾಜಿ ಮಾಡಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನಗಳ ನಡುವೆ ಶರ್ಮಾ ಅವರ ವಿಚಾರದಲ್ಲಿ ರಾಜಿ ಮಾಡಿಕೊಂಡರು. ಅಲ್ಲದೆ, ಎಲ್ಲರೂ ಆರಾಮದಾಯವಾಗಿ ಬಗೆಹರಿಯುತ್ತವೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸೂಚನೆ ನೀಡಿದರು.

ಟ್ರಯಾಂಗಲ್‌ (ಮೋದಿ-ಷಾ-ಯೋಗಿ) ಆಟ ರೂಪದಲ್ಲಿರುವ ಉತ್ತರ ಪ್ರದೇಶ ರಾಜಕೀಯ ಸ್ವರೂಪವನ್ನು ಗಮನಿಸಿದರೆ, ಉತ್ತರಪ್ರದೇಶದ ಚುನಾವಣೆಗೂ ಮುನ್ನ ಹೊಸಬಲೆ ಅವರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಲಕ್ನೋದಲ್ಲಿ ಬೀಡುಬಿಡಬೇಕಾಗಿದೆ. ಏಕೆಂದರೆ, ರಾಜಕೀಯವಾಗಿ ಮಹತ್ವದ ರಾಜ್ಯವನ್ನು ಬಿಜೆಪಿ ಗೆಲ್ಲಬೇಕು. ಅದಕ್ಕಾಗಿ ಸಂಘವು ಈ ನಿಲುಗಡೆಯನ್ನು ಮಾಡಬೇಕಾಗಿದೆ.

ಇದನ್ನೂ ಓದಿ: ಮೋದಿ-ಯೋಗಿ ನಡುವೆ ಭಿನ್ನಮತ; ಯುಪಿ ಸಿಎಂ ಬದಲಾವಣೆ?; ಬಿಜೆಪಿ ಹೇಳಿದ್ದೇನು?

ಒಂದು ವೇಳೆ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋತರೆ, ಅದು 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಭಾರೀ ಧಕ್ಕೆಯನ್ನು ತರುತ್ತದೆ.

ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಹೊಸಬಲೆ ಯುಪಿಯಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯಲು ಉದ್ದೇಶಿಸಿದ್ದಾರೆ ಎಂದು ಲಕ್ನೋ ವರದಿಗಳು ಸೂಚಿಸುತ್ತವೆ. ಸಂಘದ ಉನ್ನತ ನಾಯಕರೊಬ್ಬರ ದೈಹಿಕ ಉಪಸ್ಥಿತಿಯು ರಾಜ್ಯದಲ್ಲಿ ಭಿನ್ನಮತೀಯ ಚಟುವಟಿಕೆಯನ್ನು ತಡೆಗಟ್ಟುವಲ್ಲಿ ಮಾತ್ರವಲ್ಲ. ಅದಕ್ಕಿಂತ ಮುಖ್ಯವಾಗಿ, ಅಹಿತಕರವಾದ ಮೋದಿ-ಷಾ-ಯೋಗಿ ಸಮೀಕರಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸಾರ್ವಜನಿಕವಾಗಿ ಉದ್ವಿಗ್ನತೆ ಸ್ಫೋಟಗೊಳ್ಳದಂತೆ ತಡೆಯುತ್ತದೆ ಎಂದು ಸಂಘ ಭಾವಿಸಿದೆ.

ಯೋಗಿ ಹೇಗೆ ‘ದೈತ್ಯ ವ್ಯಕ್ತಿಯಾದರು’:

ಮೋದಿಯ ಆಶಯಗಳಿಗೆ ವಿರುದ್ಧವಾಗಿ ಯುಪಿ ಮುಖ್ಯಮಂತ್ರಿಯಾದ ನಾಲ್ಕು ವರ್ಷಗಳಲ್ಲಿ ಯೋಗಿ ಫ್ರಾಂಕೆನ್‌ಸ್ಟೈನ್‌ನ ದೈತ್ಯಾಕಾರದ ವ್ಯಕ್ತಿಯಾಗಿದ್ದಾರೆ. 2017 ರವರೆಗೆ, ಅವರು ಸಂಸತ್ತಿನಲ್ಲಿ ಮೌಸಿ ಕೇಸರಿ ಹೊದಿಕೆಯ ವ್ಯಕ್ತಿಯಾಗಿದ್ದರು. ಅಲ್ಲದೆ, ಗೋರಖ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಸಿದ್ಧ ಗೋರಖನಾಥ ಮಠದ ಕೆಟ್ಟ ಕೋಮುವಾದಿ ಮುಖ್ಯಸ್ಥರೆಂದು ಕುಖ್ಯಾತರಾಗಿದ್ದರು.

ಇಂದು, ಅವರು ಬಿಜೆಪಿಯ ಹೆಚ್ಚು ಬೇಡಿಕೆಯಿರುವ ಸ್ಟಾರ್ ಚುನಾವಣಾ ಪ್ರಚಾರಕರಷ್ಟೇ ಅಲ್ಲ, ಅವರು ರಾಷ್ಟ್ರೀಯ ಹಿಂದೂತ್ವ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಅವರು ‘ಹಿಂದೂ ಹೃದಯ ಸಾಮ್ರಾಟ್’ ಕಿರೀಟಕ್ಕಾಗಿ ಮೋದಿಗೆ ಸವಾಲು ಹಾಕಲು ಒಂದು ದಿನ ಧೈರ್ಯ ಮಾಡಲೂಬಹುದು.

7 encounters in western UP: 3 criminals killed, 6 arrested

ಅವರಿಗೆ ದೇಶಾದ್ಯಂತ ಬೇಡಿಕೆ ಹೆಚ್ಚಾದಂತೆ ಅವರ ಮಹತ್ವಾಕಾಂಕ್ಷೆಗಳು ಗಗನಕ್ಕೇರಿವೆ. ಯೋಗಿ ಒಬ್ಬ ಹೇಯ ಆಡಳಿತಗಾರ ಎಂದು ಆಡಳಿತದ ಪಠ್ಯಪುಸ್ತಕದಲ್ಲಿ ಪ್ರಕರಣವಾಗಿರಬಹುದು. ಆದರೆ ಅವರು ದೇಶದ ಬೃಹತ್ ಶಾಲೆ (ಆರ್‌ಎಸ್‌ಎಸ್‌)ಯಲ್ಲಿ ರಾಜಕೀಯದ ವಂಚಕ ಕಲೆಯನ್ನು ಕಲಿತಿದ್ದಾರೆ. ಅರವಿಂದ್ ಶರ್ಮಾ ಅವರ ಹುದ್ದೆಯ ವಿಷಯದಲ್ಲಿ ಅವರು ಅತ್ಯಂತ ಕುತಂತ್ರದ ನಡೆಯನ್ನು ಅನುಸರಿಸಿದರು. ಇದು ಎರಡು ರಾಜಕೀಯ ತಂತ್ರಗಾರರ (ಮೋದಿ-ಷಾ)ನ್ನು ಮೀರಿಸಿದ ಪಾಂಡಿತ್ಯವಾಗಿದೆ.

ಯೋಗಿಗೆ  ಹೆಚ್ಚು ‘ಅವಕಾಶ’ ಇದೆ; ಆದರೆ ಅವರು ಹೊಸಬಲೆಯ ಕಣ್ಗಾವಲಿನಲ್ಲಿ ಕೆಲಸ ಮಾಡಬೇಕು:

ಹೊಸಬಲೆ ಅವರ ಸಲಹೆಯ ಮೇರೆಗೆ, ಆರ್‌ಎಸ್‌ಎಸ್ ಮತ್ತು ಮೋದಿ-ಷಾ ಅವರು ಯೋಗಿಯೊಂದಿಗೆ ಉಳಿಯಲು ನಿರ್ಧರಿಸಿದ್ದಾರೆ. ಚುನಾವಣೆಗೆ ಎಂಟು ತಿಂಗಳ ಮೊದಲು ಸಿಎಂ ಅವರನ್ನು ಬದಲಾಯಿಸಬಾರದು ಎಂಬುದು ಕುತೂಹಲಕಾರಿಯಾಗಿದೆ. ಈ ಹಿಂದೆ ಇತರ ರಾಜ್ಯಗಳಲ್ಲಿ ಚುನಾವಣಾ ಮುನ್ನಾದಿನಗಳಲ್ಲಿ ನಾಯಕತ್ವದ ಬದಲಾವಣೆ ಮಾಡಿದ್ದ ಬಿಜೆಪಿ ಕೆಟ್ಟ ಅನುಭವವನ್ನು ಅನುಭವಿಸಿದೆ. ಇದು ಈ ನಿರ್ಧಾರಕ್ಕೆ ಕಾರಣವಾಗಿದೆ.

ಎರಡನೆಯದು ಹಿಂದುತ್ವ ಐಕಾನ್ ಆಗಿ ಯೋಗಿಯ ಜನಪ್ರಿಯತೆ. ಅವರನ್ನು ತೆಗೆದುಹಾಕುವುದರಿಂದ ಬಿಜೆಪಿಯ ಹಾರ್ಡ್‌ಕೋರ್ ಹಿಂದೂ ಮತಗಳ ಸಂಖ್ಯೆಯೂ ಇಳಿಯುತ್ತಿರಲಿಲ್ಲ. ಆದರೆ, ಅದನ್ನು ಯೋಗಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬಳಸಿಕೊಂಡರು. ಆದರೆ ಹೊಸಬಲೆ ಅವರ ಕಣ್ಗಾವಲು ಅಡಿಯಲ್ಲಿ, ಯೋಗಿ ಕೆಲವು ರಿಯಾಯಿತಿಗಳನ್ನು ನೀಡಬೇಕಾಗುತ್ತದೆ. ಅದರಲ್ಲಿ ಶರ್ಮಾ ಅವರನ್ನು ತಮ್ಮ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳುವುದೂ ಸೇರಿರಬಹುದು.

ಮುಂದಿನ ಅಪಾಯಗಳು:

ಉತ್ತರ ಪ್ರದೇಶ ಬಿಜೆಪಿಯಲ್ಲಿನ ಬಿಕ್ಕಟ್ಟು ಶರ್ಮಾ ಅವರೊಂದಿಗೆ ಕೊನೆಗೊಳ್ಳುವುದಿಲ್ಲ; ಮುಂದೆ ಅನೇಕ ಮೋಸಗಳಿವೆ ಎಂದು ಆರ್‌ಎಸ್‌ಎಸ್‌ಗೆ ಚೆನ್ನಾಗಿ ತಿಳಿದಿದೆ. ಯೋಗಿ ತನ್ನ ಜನರಿಗಾಗಿ ಮತ್ತು ಮೋದಿ-ಷಾ ತಮ್ಮ ನಿಷ್ಠಾವಂತರ ಪರ ವಕಾಲತ್ತು ವಹಿಸುತ್ತಿರುವುದರಿಂದ ಟಿಕೆಟ್‌ಗಳ ಕುರಿತು ವಾದಗಳು ನಡೆಯಲಿವೆ.

ಜಾತಿ ಉದ್ವಿಗ್ನತೆಯೂ ಇರುತ್ತದೆ. ಜತಿನ್ ಪ್ರಸಾದ ಅವರನ್ನು ಬಿಜೆಪಿಗೆ ಹಠಾತ್ತನೆ ಸೇರಿಸುವುದು ಪಕ್ಷವು ಬ್ರಾಹ್ಮಣ ಮತಗಳನ್ನು ಸೆಳೆಯಲು ನಾಟಕ ಮಾಡಲು ಪ್ರಯತ್ನಿಸುತ್ತಿದೆ ಎಂಬುದರ ಸಂಕೇತವಾಗಿದೆ. ಈ ಪ್ರಭಾವಶಾಲಿ ಸಮುದಾಯವನ್ನು ಸಂತೋಷವಾಗಿರಿಸುವುದು ಉತ್ತಮ ರಾಜಕಾರಣವಾಗಿದ್ದರೂ, ಇದು ಯೋಗಿ ಮತ್ತು ಅವರ ಠಾಕೂರ್ ಲಾಬಿಯು ಸಂಭಾವ್ಯ ಫ್ಲ್ಯಾಪ್‌ಪಾಯಿಂಟ್ ಆಗಿದೆ. ಇದು ಕಳೆದ ನಾಲ್ಕು ವರ್ಷಗಳಿಂದ ಯುಪಿ ಬಿಜೆಪಿಯಲ್ಲಿ ಬಿರುಕನ್ನು ಮೂಡಿಸುತ್ತಿದೆ. ಹೊಸಬಲೆ ಅವರು ಬ್ರಾಹ್ಮಣ ಮತ್ತು ಠಾಕೂರ್ ಸಮುದಾಯಗಳ ನಡುವಿನ ಪೈಪೋಟಿಯನ್ನು ಬಿಜೆಪಿಯ ಚುನಾವಣಾ ಲೆಕ್ಕಾಚಾರಗಳಿಗೆ ಹಾನಿಯಾಗದಂತೆ ನಿರ್ವಹಿಸಬೇಕಾಗುತ್ತದೆ.

ಇದನ್ನೂ ಓದಿ: ನಿರಂತರ ಮನವಿಗೆ ಸ್ಪಂದಿಸದ ಮೋದಿ – ಯೋಗಿ; ಕೊರೊನಾದಿಂದ RSS ಕಾರ್ಯಕರ್ತ ಸಾವು!

ತದನಂತರ ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಮುಖ ಪ್ರಶ್ನೆ ಇದೆ. ಯೋಗಿ ಅವರನ್ನು ಪ್ರಮುಖ ಮುಖವಾಗಿಟ್ಟು ಚುನಾವಣೆಯಲ್ಲಿ ಹೋರಾಡುವುದಾಗಿ ಬಿಜೆಪಿ ಘೋಷಿಸಿದೆ. ವಾರಣಾಸಿಯಿಂದ ಸಂಸದರಾಗಿರುವ ಮತ್ತು ಯುಪಿಯಲ್ಲಿ ನಡೆಯುವ ಪ್ರತಿಯೊಂದು ಚುನಾವಣಾ ಪ್ರಚಾರದ ಪ್ರಮುಖ ಕೇಂದ್ರವಾಗಿರುವ ಮೋದಿ, ಅವರನ್ನು ಎಲ್ಲಿ ಬಿಡುತ್ತಾರೆ?

ಹಿಂದೂತ್ವದ ಹೆಸರಿನಲ್ಲಿ ಬಿಜೆಪಿ ಯುಪಿ ಚುನಾವಣೆಯಲ್ಲಿ ಹೋರಾಡಬೇಕು: 

ಪಶ್ಚಿಮ ಬಂಗಾಳದಲ್ಲಿ ನಡೆದ ರೀತಿಯಲ್ಲಿ ಮೋದಿ ಯುಪಿಯಲ್ಲಿ ತಮ್ಮ ಎಲ್ಲೆಯನ್ನು ಮೀರಿ ಹೋಗಬಾರದು ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಒಂದು ವಿಭಾಗ ಅಭಿಪ್ರಾಯಪಟ್ಟಿದೆ. ಬಂಗಾಳದಲ್ಲಿನ ನಷ್ಟವು ಮೋದಿಯವರ ಚಿತ್ರಣವನ್ನು ಕುಂದಿಸಿದೆ. ಅಧಿಕಾರ ವಿರೋಧಿ ಅಲೆ ಮತ್ತು ಯುಪಿಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡರೆ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಹಾನಿಯನ್ನುಂಟು ಮಾಡುತ್ತದೆ.

ಮೋದಿಯವರ ಶೈಲಿಯನ್ನು ತಿಳಿದಿರುವವರು, ಅವರು ಎಂದಿಗೂ ಸವಾಲಿಗಳಿಂದ ದೂರ ಸರಿಯುವುದಿಲ್ಲ. ಅಲ್ಲದೆ, ಉತ್ತರ ಪ್ರದೇಶದಂತಹ ಮಹತ್ವದ ಚುನಾವಣೆಯಲ್ಲಿ ಕೀಳರಿಮೆ ವಹಿಸಲು ನಿರಾಕರಿಸುತ್ತಾರೆ ಎಂದು ಹೇಳುತ್ತಾರೆ. ಆದರೆ, ಈ ಬಗ್ಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಲಯಗಳಲ್ಲಿ ಚರ್ಚೆ ಉಲ್ಬಣಗೊಳ್ಳುತ್ತಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದೂತ್ವದ ಹೆಸರಿನಲ್ಲಿ ಹೋರಾಡುವುದು ಸ್ಪಷ್ಟವಾಗಿದೆ. ಅದರೆ, ಈಗ ಎದುರಾಗಿರುವ ಸಂದಿಗ್ಧತೆ – 2022 ರ ಹಿಂದೂ ಐಕಾನ್ ಯಾರು: ಮೋದಿ ಅಥವಾ ಯೋಗಿ?

ಮೂಲ: ದಿ ಕ್ವಿಂಟ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: ಬಯಲಾಯ್ತು ಸಿಎಂ ಯೋಗಿ ಬಗ್ಗೆ ಪೋಸ್ಟ್‌ಕಾರ್ಡ್‌ ಹರಿಬಿಟ್ಟ ಸುಳ್ಳು; ಆಕ್ಸಿಜನ್‌ಗೂ ಯೋಗಿಗೂ ಎಲ್ಲಿದೆ ನಂಟು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights