ಸಿಎಂ ಬಿಎಸ್ವೈ ಖುರ್ಚಿ ಸೇಫ್? ಸಧ್ಯಕ್ಕಿಲ್ಲ ರಾಜೀನಾಮೆ..!; ಕಾರಣವೇನು ಗೊತ್ತೇ?
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಇಂದು (ಭಾನುವಾರ) ಸಂಜೆ ತಮ್ಮ ನಿರ್ಧಾರವೇನು ಎಂದು ತಿಳಿಸಲಿದೆ. ಹೈಕಮಾಂಡ್ ಸಂದೇಶದಂತೆ ತಮ್ಮ ಮುಂದಿನ ನಿರ್ಧಾರವನ್ನು ತೀರ್ಮಾನಿಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹೀಗಾಗಿ, ಸಿಎಂ ಬಿಎಸ್ವೈ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಆದರೂ, ಬಿಎಸ್ವೈ ಅವರ ಸಿಎಂ ಖುರ್ಚಿ ಗಟ್ಟಿಯಾಗಿದೆ. ಸಧ್ಯಕ್ಕೆ ಅವರು ರಾಜೀನಾಮೆ ನೀಡುವುದಿಲ್ಲ ಎಂಬ ಚರ್ಚೆಯೂ ಈಗ ಶುರುವಾಗಿದೆ.
ರಾಜ್ಯದಲ್ಲಿ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿ ಭಾಗಗಳಲ್ಲಿ ಗುಡ್ಡ ಕುಸಿತಗಳು ಆಗುತ್ತಿವೆ. ಬೆಳಗಾವಿ ಸೇರಿದಂತೆ ನಾನಾ ಭಾಗಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿಯೇ, ಸಿಎಂ ಬಿಎಸ್ವೈ ಇಂದು ಬೆಳಗಾವಿಗೆ ತೆರಳಿ, ಪರಿಸ್ಥಿತಿ ಅವಲೋಖನ ಮಾಡುತ್ತಿದ್ದಾರೆ.
ಇಂತಹ ಪ್ರವಾಹ ಭೀತಿಯ ಸಂದರ್ಭದಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಿದರೆ, ರಾಜ್ಯಕ್ಕೆ ಸಿಎಂ ನಂತರದ 2ನೇ ನಾಯಕ ಇಲ್ಲದೇ ಇರುವ ಈ ಪರಿಸ್ಥಿತಿಯಲ್ಲಿ ಪ್ರವಾಹ, ಕೊರೊನಾ 3ನೇ ಅಲೆಯನ್ನು ನಿಭಾಯಿಸುವುದು ಬಿಕ್ಕಟ್ಟಿಗೆ ಸಿಲುಕಲಿದೆ.
ಸದ್ಯ, ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಅಥವಾ ನಾಯಕ ಯಾರು ಎಂಬುದು ಇನ್ನೂ ನಿರ್ಧಾರವಾಗದ ಹಿನ್ನೆಲೆಯಲ್ಲಿ, ಪ್ರವಾಹ, ಕೊರೊನಾ 3ನೇ ಅಲೆ ಎದುರಾಗುತ್ತಿರುವ ಸಂದರ್ಭದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತವಲ್ಲ. ಇದು ಜನಾಕ್ರೋಶಕ್ಕೂ ಕಾರಣವಾಗಬಹುದು ಎಂದು ಹೈಕಮಾಂಡ್ ಭಾಗಿಸಿದೆ ಎಂದು ಹೇಳಲಾಗಿದೆ.
ಹೀಗಾಗಿ, ಸದ್ಯಕ್ಕೆ ಸಿಎಂ ಬದಲಾವಣೆ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ ಎಂದು ಹೇಳಲಾಗಿದೆ.
Read Also: ವೋಟಿಗೆ ನೋಟು: ಸಂಸದೆ ಮಾಲೋತ್ ಕವಿತಾ ಅವರಿಗೆ 06 ತಿಂಗಳು ಜೈಲು, 10 ಸಾವಿರ ದಂಡ!

