ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು; ಮಹಿಳಾ ಸೇನಾ ಅಧಿಕಾರಿಗಳಿಗೆ ಖಾಯಂ ಆಯೋಗ ರಚನೆಗೆ ಆದೇಶ!

39 ಮಹಿಳಾ ಸೇನಾ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ಇದೀಗ ಅವರು ಖಾಯಂ ಆಯೋಗವನ್ನು ಪಡೆದುಕೊಂಡಿದ್ದಾರೆ. ನೂತನ ಆಯೋಗವನ್ನು ಕೆಲಸದ ಏಳುದಿನಗಳ ಒಳಗೆ ನೀಡಬೇಕು ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಪರ್ಮನೆಂಟ್ ಕಮಿಷನ್ (ಖಾಯಂ ಆಯೋಗ) ಎಂದರೆ ನಿವೃತ್ತಿಯವರೆಗೂ ಸೇನಾ ವೃತ್ತಿಯಲ್ಲಿ ಇರುವುದು. ಕಿರು ಸೇವಾ ಆಯೋಗವು 10 ವರ್ಷಗಳ ಅವಧಿಯದ್ದಾಗಿದೆ. ಕಾಯಂ ಆಯೋಗವನ್ನು ಬಿಡುವುದು ಅಥವಾ ಆಯ್ದುಕೊಳ್ಳುವುದು 10 ವರ್ಷದ ಅವಧಿ ಮುಕ್ತಾಯದ ವೇಳೆ ಇರುವ ಆಯ್ಕೆಯ ಅವಕಾಶವಾಗಿದೆ. ಕಾಯಂ ಆಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇದ್ದರೆ ಅಧಿಕಾರಿಯು ನಾಲ್ಕು ವರ್ಷಗಳ ವಿಸ್ತರಣೆಯನ್ನು ಆಯ್ದುಕೊಳ್ಳಬಹುದಾಗಿದೆ.

ಕಾಯಂ ಆಯೋಗವನ್ನು ನಿರಾಕರಿಸಲ್ಪಟ್ಟಿದ್ದರಿಂದ ಕಿರು ಸೇವಾ ಆಯೋಗದ 71 ಮಹಿಳಾ ಅಧಿಕಾರಿಗಳು ಕಾಯಂ ಆಯೋಗಕ್ಕಾಗಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ 71 ಅಧಿಕಾರಿಗಳ ಪೈಕಿ 39 ಮಹಿಳಾ ಅಧಿಕಾರಿಗಳು ಕಾಯಂ ಆಯೋಗಕ್ಕೆ ಅರ್ಹರಾಗಿದ್ದಾರೆ. ಇನ್ನು ಏಳು ಮಂದಿ ವೈದ್ಯಕೀಯವಾಗಿ ಅಸಮರ್ಥರು ಹಾಗೂ 25 ಮಂದಿ ‘ಶಿಸ್ತಿನ ಸಮಸ್ಯೆ’ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿತ್ತು.

ಆ ಮಹಿಳಾ ಅಧಿಕಾರಿಗಳು ಯಾವ ಕಾರಣಕ್ಕಾಗಿ ಶಾಶ್ವತ ಆಯೋಗಕ್ಕೆ ಅರ್ಹತೆ ಪಡೆದುಕೊಂಡಿಲ್ಲ ಎಂಬುದನ್ನು ವಿವರಿಸುವ ವಿಸ್ತೃತ ವರದಿ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು.

ಇದನ್ನೂ ಓದಿ: ದಲಿತ ಯುವಕನ ಲಾಕಪ್ ಡೆತ್‌; ಐವರು ಪೊಲೀಸರು ಅಮಾನತು; ಹಲವರ ವಿರುದ್ದ FIR ದಾಖಲು

ಅಲ್ಲದೆ, ಯಾವುದೇ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂದು ಅಕ್ಟೋಬರ್ 1ರಂದು ಮಧ್ಯಂತರ ಆದೇಶ ನೀಡಿತ್ತು.

ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಬಿವಿ ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠ, ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ರಚಿಸುವಂತೆ ತೀರ್ಪು ನೀಡಿದೆ.

ಮಾನದಂಡವನ್ನು ತಲುಪಿದ ಕಿರಿಯ ಸೇವಾ ಆಯೋಗದ ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗವನ್ನು ನೀಡಬೇಕೆಂದು ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಮಹಿಳಾ ಅಧಿಕಾರಿಗಳ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲರಾದ ವಿ ಮೋಹನ, ಹುಜೇಫಾ ಅಹ್ಮದಿ ಮತ್ತು ಮೀನಾಕ್ಷಿ ಅರೋರಾ ಆರೋಪಿಸಿದ್ದರು.

ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನಿಡಲಾಗಿತ್ತು. ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗವನ್ನು ನೀಡುವ ಸೇನೆಯ ಮೌಲ್ಯಮಾಪನ ಮಾನದಂಡವು ಅವರ ವಿರುದ್ಧ ವ್ಯವಸ್ಥಿತ ತಾರತಮ್ಯ ಎಸಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಗುಜರಾತ್: ಕಾಂಗ್ರೆಸ್‌ನಲ್ಲಿ ಯುವ ಮತ್ತು ಹಳೆಯ ನಾಯಕರ ನಡುವೆ ಶೀಲತ ಸಮರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights