Fact check: ಛತ್ರಪತಿ ಶಿವಾಜಿ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಎಂಬುದು ನಿಜವೇ?
ಸ್ಯಾಂಡಲ್‌ವುಡ್ ನಲ್ಲಿ ರಾಕಿ ಬಾಯ್ ಎಂದೆ ಹೆಸರು ಮಾಡಿರುವ, ರಾಜಾಹುಲಿ, ಕೆಜಿಎಫ್ ಖ್ಯಾತಿಯ ನಟ ಯಶ್ ಸದ್ಯ “ಕೆಜಿಎಫ್ ಚಾಪ್ಟರ್ 2” ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಚಾಪ್ಟರ್ 2 ಬಿಡುಗಡೆಗೆ ಆಗಲಿದೆ. ಹೊಂಬಾಳೆ ಫಿಲಮ್ಸ್ ಬ್ಯಾನರ್‌ಅಡಿಯಲ್ಲಿ 2018 ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 1 ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸೌಂಡ್ ಮಾಡಿ ಹೊಸ ದಾಖಲೆಯನ್ನು ಬರೆದಿತ್ತು. ಈ ಎಲ್ಲಾ ಅಪ್‌ಡೇಟ್‌ಗಳ ಜೊತೆಯಲ್ಲಿ ಹೊಸ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ನಟ ಯಶ್ ಕೆಜಿಎಫ್ ನಂತರ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದು ಮರಾಠ ರಾಜ ಛತ್ರಪತಿ ಶಿವಾಜಿ ಅವರ ಪಾತ್ರದಲ್ಲಿ ನಟ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿಕೆಗಳಿರುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಸಿನಿಮಾಗೆ ಶಿವಾಜಿ ಎಂದು ಟೈಟಲ್ ಇಡಲಾಗಿದೆ. ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ಎಸ್ ಎಸ್ ರಾಜಮೌಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರವನ್ನು ಟಿ ಸೀರೀಸಿ ಸಂಸ್ಥೆ ಅರ್ಪಿಸುತ್ತಿದೆ ಎಂದು ಹೇಳಲಾಗುವ ವಿಡಿಯೋ ಮತ್ತು ಪೋಸ್ಟರ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

Kshatriya Marathas Karnataka Official ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಈ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮತ್ತೊಂದು ಪೋಸ್ಟ್‌ನಲ್ಲಿ Confirm ಯಶ್ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ![]()
![]()
ಜೈ ಶಿವಾಜಿ ![]()
![]()
ಎಂದು ಬರೆದು ಹಂಚಿಕೊಳ್ಳಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿರುವ ಪೋಸ್ಟ್‌ನಲ್ಲಿರುವಂತೆ ಕನ್ನಡ ಚಿತ್ರರಂಗ ನಟ ಯಶ್ ಮರಾಠ ದೊರೆ ಛತ್ರಪತಿ ಶಿವಾಜಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೆ? ಪೋಸ್ಟ್‌ನಲ್ಲಿ ಪಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಕನ್ನಡ ಚಿತ್ರರಂಗದ ಬಹು ಬೇಡಿಕೆ ನಟ ಯಶ್ ಅವರ ಮುಂದಿನ ಸಿನಿಮಾಗಳ ಕುರಿತು ಸಾಕಷ್ಟು ಊಹಾಪೋಹಗಳು ಕಳೆದ ಎರಡು ಮೂರು ವರ್ಷಗಳಿಂದಲೂ ಕೇಳಿಬರುತ್ತಲೇ ಇವೆ. ಆದರೆ ಅದ್ಯಾವುದಕ್ಕೂ ಅಧಿಕೃತತೆ ಇಲ್ಲದೆ ಕೇವಲ ಗಾಳಿ ಸುದ್ದಿಗಳೆಂಬಂತೆ ಹರಿಯಬಿಡಲಾಗುತ್ತದೆ.
ಈ ಹಿನ್ನಲೆಯಲ್ಲಿ ಪೋಸ್ಟ್‌ನಲ್ಲಿ ಇರುವ ಕೀವರ್ಡ್ ಸಹಾಯಗಳ ಮೂಲಕ ಸರ್ಚ್ ಮಾಡಿದಾಗ T series ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಎಲ್ಲಿಯೂ ನಟ ಯಶ್ ಶಿವಾಜಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನವ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಿಲ್ಲ.

ಕೆಜಿಎಫ್ ಚಾಪ್ಟರ್ 2 ಗೆ ಸಂಬಂಧಿಸಿದ ಅಪ್‌ಡೇಟ್‌ಗಳು ಹೊರತುಪಡಿಸಿದರೆ ಉಳಿದಂತೆ ಶಿವಾಜಿ ಸಿನಿಮಾದ ಯಾವ ಅಪ್‌ಡೇಟ್‌ಗಳು ಲಭ್ಯವಿಲ್ಲ. ಜೊತೆಗೆ ವೈರಲ್ ಆಗುತ್ತಿರುವ ವಿಡಿಯೊಗಳನ್ನು ಗಮನಿಸಿದಾಗ ಅಲ್ಲಿ ಬಳಸಲಾಗಿರುವ ವಿಡಿಯೋ ದೃಶ್ಯಗಳು ಬೇರೆ ಬೇರೆ ಚಿತ್ರಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ.
ಶಿವಾಜಿ ಪಾತ್ರದ ಕುರಿತಂತೆ ವೈರಲ್ ಆಗುತ್ತಿರುವ ಸುದ್ದಿಯ ಬಗ್ಗೆ Ensuddi.com ನಟ ಯಶ್ ಅವರಿಂದ ಪ್ರತಿಕ್ರಿಯೆ ಪಡೆಯಲು ಯಶ್ ಅವರ ಪಿಎ ಅವರನ್ನು ಸಂಪರ್ಕಿಸಲಾಗಿತ್ತು ಆದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಯಶ್ ಅವರ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲೂ ಶಿವಾಜಿ ಸಿನಿಮಾದ ಬಗ್ಗೆ ಯಾವ ಮಾಹಿತಿಯನ್ನು ಶೇರ್ ಮಾಡಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳನ್ನು ಶೇರ್ ಮಾಡಿರುವ ಫೇಸ್‌ಬುಕ್ ಪೇಜ್‌ನ ಪ್ರೊಫೈಲ್ ಗಳನ್ನು ಚೆಕ್ ಮಾಡಿದಾಗ ಅದು ಮರಾಠಿಯನ್ನು ಬೆಂಬಲಿಸುವ ಪೇಜ್‌ಗಳು ಎಂದು ತಿಳಿದು ಬಂದಿದೆ.

ಶಿವಾಜಿ ಪಾತ್ರವನ್ನು ನಟ ಯಶ್ ನಿರ್ವಹಿಸುತ್ತಿದ್ದಾರಾ ಎಂದು ಖಚಿತ ಪಡಿಸಿಕೊಳ್ಳಲು ಅವರ ಆಪ್ತರು ಮತ್ತು ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ರಾಜೇಶ್ ಎಂಬುವವರನ್ನು ಸಂಪರ್ಕಿಸಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರು ಸುದ್ದಿ ಸುಳ್ಳು, ಅವರು ಸದ್ಯ ಮಫ್ತಿ ಚಿತ್ರವನ್ನು ನಿರ್ದೇಶಿಸಿದ ನರ್ತನ್ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ, ಅದರ ಕಥೆ ಏನೆಂಬುದನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ ಹಾಗಾಗಿ ಈ ಸುದ್ದಿ ಶುದ್ದ ಸುಳ್ಳು ಎಂದಿದ್ದಾರೆ. ಮರಾಠಿಗರು ಗಡಿ ಭಾಗದಲ್ಲಿ ಎಷ್ಟೆಲ್ಲ ತೊಂದರೆ ನೀಡುತ್ತಿದ್ದಾರೆ ಹಾಗಿದ್ದರೂ ಯಶ್ ಶಿವಾಜಿ ಪಾತ್ರದಲ್ಲಿ ಮಾಡುತ್ತಾರೆ ಎಂದರೆ ನೀವು ನಂಬುತ್ತೀರ? ಎಂದು ಮರು ಪ್ರಶ್ನೆ ಹಾಕಿದ್ದರು.
ಹಿಂದೆಯೂ ಇದೇ ರೀತಿ ಪೋಸ್ಟರ್ ಅನ್ನು ಮಾಡಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ಕೆಜಿಎಫ್ ಚಿತ್ರಕ್ಕಾಗಿ ರಾಕಿ ಬಾಯ್ ಯಶ್ ಗಡ್ಡ ಬಿಟ್ಟಿರುವುದರಿಂದ ಶಿವಾಜಿಯಂತೆ ಅವರ ಫೋಟೊವನ್ನು ಎಡಿಟ್ ಮಾಡಲು ಸುಲಭವಾಗುತ್ತದೆ ಮತ್ತು ಯಶ್ ಗೆ ಇರುವ ಜನಪ್ರಿಯತೆಗೆ ಶಿವಾಜಿಯವರನ್ನು ಪ್ರಚಾರ ಮಾಡಬಹುದು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ನಗುತ್ತಾರೆ ಛಾಯಾಗ್ರಾಹಕ ರಾಜೇಶ್.
ಹಾಗಾಗಿ ನಟ ಯಶ್ ಶಿಮಾಜಿ ಎಂಬ ಸಿನಿಮಾದಲ್ಲಿ ಶಿವಾಜಿ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರು ಸುದ್ದಿ ಸುಳ್ಳು. ಕನ್ನಡ ಸಿನಿಮಾ ಅಭಿಮಾನಿಗಳು ಇಂತಹ ಪೋಸ್ಟರ್ ಗಳನ್ನು ನಂಬಿ ಸ್ಟಾರ್ ವಾರ್‌ಗಳನ್ನು ಶುರು ಮಾಡದೆ ವಾಸ್ತವ ಏನೆಂದು ತಿಳಿದುಕೊಳ್ಳಬೇಕೆಂಬುದು ಈ ಫ್ಯಾಕ್ಟ್‌ಚೆಕ್‌ನ ಆಶಯ.
ಇದನ್ನು ಓದಿರಿ: Fact check: ಪಂಜಾಬ್‌ನ ಸಂಭಾವ್ಯ CM ಭಗವಂತ್ ಮಾನ್ ಪಾನಮತ್ತರಾಗಿ ತೂರಾಡುತ್ತಿರುವ ವಿಡಿಯೊ! ವಾಸ್ತವವೇನು?

