ಫ್ಯಾಕ್ಟ್ಚೆಕ್: ರಾಜಸ್ಥಾನದ ಕರೌಲಿಯಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂ ಸಮುದಾಯವರಿಗೆ ಬೆದರಿಕೆ ಹಾಕಿದ್ದು ನಿಜವೆ?
ಇತ್ತಿಚೆಗೆ ಯುಗಾದಿ ಹಬ್ಬದ ಸಂವತ್ಸರದ ಸಂದರ್ಭದಲ್ಲಿ ರಾಜಸ್ಥಾನದ ಕರೌಲಿ ಪಟ್ಟಣದಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಕೋಮು ದ್ವೇಷದ ಮಾತುಗಳು ಎಚ್ಚೆಚ್ಚು ಕೇಳಿಬರುತ್ತಿವೆ. ಹಾಗೆಯೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು ಅದರಲ್ಲಿ” ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಸಮುದಾಯದ ಸದಸ್ಯರಿಗೆ ಬೆದರಿಕೆ ಹಾಕಿದ್ದಾನೆ ಎಂದು ಸೂಚಿಸುವ ಹಿಂದಿ ಶೀರ್ಷಿಕೆಯೊಂದಿಗೆ 11 ಸೆಕೆಂಡುಗಳ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
https://twitter.com/Metpco/status/1511540573672722440?ref_src=twsrc%5Etfw%7Ctwcamp%5Etweetembed%7Ctwterm%5E1511540573672722440%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fvideo-from-telangana-viral-as-man-threatening-hindus-in-violence-hit-karauli%2F
ವೈರಲ್ ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿಯು ಹಿಂದೂಗಳನ್ನುದ್ದೇಶಿಸಿ ಮಾತನಾಡುತ್ತ, ‘ನಮ್ಮ ಏರಿಯಾದಲ್ಲಿ 4 ವಾಹನಗಳಿಗೆ ಬೆಂಕಿ ಹಚ್ಚಿದ್ದೇವೆ, ನಮ್ಮ ಜನರು ನಮ್ಮ ಪ್ರದೇಶದಲ್ಲಿ ತುಂಬಾ ಭಯಭೀತರಾಗಿದ್ದಾರೆ. ಹಿಂದೂಗಳೇ ನಿಮ್ಮ ಜನಕ್ಕೆ ಇಷ್ಟು ಭಯ ಸಾಕು ಎಂದು ಹೇಳಿದ್ದಾನೆ. ಹಾಗಿದ್ದರೆ ವಿಡಿಯೊದಲ್ಲಿ ಮುಸ್ಲಿಂ ವ್ಯಕ್ತಿಯು ಹಿಂದೂ ಜನರಿಗೆ ಬೆದರಿಕೆ ಹಾಕಿರುವ ಘಟನೆ ನಿಜವೆ ಎಂದು ಪರಿಶೀಲಿಸೋಣ.
ಘಟನೆಯು ಕರೌಲಿಯದು ಎಂಬ ಹೇಳಿಕೆಯೊಂದಿಗೆ ಫೇಸ್ಬುಕ್ನಲ್ಲಿಯೂ ವೈರಲ್ ಆಗಿದೆ.

ಫ್ಯಾಕ್ಟ್ಚೆಕ್:
ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯು ತನ್ನ ಏರಿಯಾದ “ಸ್ಟಾರ್ ಹೋಟೆಲ್” ಮುಂದೆ ಇದ್ದೇನೆ ಎಂದು ಹೇಳುತ್ತಾನೆ. ಹೋಟೆಲ್ನ ಸೈನ್ಬೋರ್ಡ್ ಅನ್ನು ತೋರಿಸಲು ಅವನು ತನ್ನ ಕ್ಯಾಮೆರಾವನ್ನು ಸಹ ಪ್ಯಾನ್ ಮಾಡುತ್ತಾನೆ. ವೀಡಿಯೊದಿಂದ ಸ್ಟಿಲ್ಗಳನ್ನು ಒಟ್ಟುಗೂಡಿಸಿದಾಗ, ಅವನ ಹಿಂದೆ ಬೋರ್ಡ್ “ಸ್ಟಾರ್ ಹೋಟೆಲ್”, “ಎಸ್ಪಿಎಲ್ ಮತ್ತು “ಗ್ರೀನ್ ಟೀ” ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.

ಹೋಟೆಲ್ನ ಸುಳಿವಿನ ಆಧಾರದಲ್ಲಿ Google ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ತೆಲಂಗಾಣದ ನಿಜಾಮಾಬಾದ್ನಲ್ಲಿರುವ ಒಂದೇ ಸೈನ್ಬೋರ್ಡ್ಗಳೊಂದಿಗೆ ಜಸ್ಟ್ ಡಯಲ್ನಲ್ಲಿ ಒಂದೇ ಹೆಸರಿನ ಎರಡು ಹೋಟೆಲ್ಗಳನ್ನು ನೋಡಿದ್ದೇವೆ. ಆದಾಗ್ಯೂ, ವೀಡಿಯೊದ ಸ್ಟಿಲ್ಗಳೊಂದಿಗೆ ಫೋಟೋಗಳನ್ನು ಹೋಲಿಸಿದಾಗ, ಹೋಟೆಲ್ಗಳಲ್ಲಿ ಒಂದರಲ್ಲಿ ಅಂಗಡಿಯ ಹೊರಗೆ ಪಾನ್ ಶಾಪ್ ಇರುವುದನ್ನು ನಾವು ಗಮನಿಸಿದ್ದೇವೆ ಮತ್ತು ಅದು ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ. ಹೋಟೆಲ್ನ ಹೆಸರು ‘ಸ್ಕೈ ಸ್ಟಾರ್ ‘ ಎಂದಿದೆ ಆದರಿಂದ ಇದು ತೆಲಂಗಾಣಾ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು.

ಗೂಗಲ್ನಲ್ಲಿ ಸರ್ಚ್ ಮಾಡಿದ ವೇಳೆ ಹೋಟೆಲ್ ಅನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದರೆ ಹಿಂದೆ ಹೋಟೆಲ್ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿಡಿಯೋವನ್ನು ಮಾಡಲಾಗಿದೆ.
ಗೂಗಲ್ ಅರ್ಥ್ ಪ್ರೊ ಅನ್ನು ಬಳಸಿಕೊಂಡು, ನಾವು ವೀಡಿಯೊವನ್ನು ಚಿತ್ರೀಕರಿಸಿದ ರಸ್ತೆಯನ್ನು ಜಿಯೋಲೊಕೇಟೆಡ್ ಮಾಡಿದ್ದೇವೆ. ಈ ಸ್ಥಳವು ತೆಲಂಗಾಣದ ನಿಜಾಮಾಬಾದ್ ಎಂದು ಖಚಿತಪಡಿಸುತ್ತದೆ. ಗೂಗಲ್ ನಲ್ಲಿ ಈ ರಸ್ತೆಯ ವೀವ್ ನೋಡಲು ಮೂಹಕವಾಗಿದ್ದು ಅದನ್ನು ಇಲ್ಲಿ ನೋಡಬಹುದು.

ಫೇಸ್ಬುಕ್ನಲ್ಲಿ ಕೀವರ್ಡ್ ಸರ್ಚ್ ಅನ್ನು ಮಾಡಲಾಗಿದ್ದು ಮತ್ತು 2021 ಮತ್ತು 2020 ರಲ್ಲಿ ಪೋಸ್ಟ್ ಮಾಡಿದ ಅದೇ ವೀಡಿಯೊವನ್ನು ನೋಡಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾರೆ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯ ಗುರುತನ್ನು ಅಥವಾ ಅದನ್ನು ಚಿತ್ರೀಕರಿಸಿದ ಸಂದರ್ಭವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಇತ್ತೀಚೆಗೆ ರಾಜಸ್ಥಾನದ ಕರೌಲಿಯಲ್ಲಿ ನಡೆದ ಕೋಮು ಸಂಘರ್ಷಕ್ಕೂ ವೈರಲ್ ವಿಡಿಯೊಗೂ ಸಂಬಂಧ ಇಲ್ಲ. ಅದು ತೆಲಂಗಾಣದ ವಿಡಯೋ ಆಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಯಪಿಯಲ್ಲಿ ಕಾನೂನು ಉಲ್ಲಂಘಿಸಿದ ಮುಸ್ಲಿಮರಿಗೆ ಪೊಲೀಸರು ಕಿವಿ ಹಿಡಿಸಿದ್ದು ನಿಜವಲ್ಲ

