ಫ್ಯಾಕ್ಟ್ಚೆಕ್: ಮಹಿಳೆಯ ಪ್ರಜ್ಞೆ ತಪ್ಪಿಸಿ ಒಡವೆ ದೋಚುವ CCTV ದೃಶ್ಯಗಳು ನೈಜ ಘಟನೆಯಲ್ಲ!
ದೇವರ ನೈವೇದ್ಯ ಎಂದು ಹೇಳಿ ಮಾದಕವಸ್ತವನ್ನು ಬೆರಸಿದ ಪ್ರಸಾದವನ್ನು ನೀಡಿದ ವೇಳೆ ಮಹಿಳೆಯೊಬ್ಬರು ಅದನ್ನು ತಿನ್ನುತ್ತಾರೆ, ಸ್ವಲ್ಪ ಸಮಯದ ನಂತರ ಪ್ರಸಾದ ಸೇವಿಸಿದ ಮಹಿಳೆ ಪ್ರಜ್ಞೆ ತಪ್ಪುವ ದೃಶ್ಯವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
https://twitter.com/poonamrinki/status/1513159666640982027
ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬಸ್ಸಿಗಾಗಿ ಕಾಯುತ್ತಿರುತ್ತಾರೆ, ಅಲ್ಲಿಗೆ ಬರುವ ಮತ್ತಿಬ್ಬರು ಮಹಿಳೆಯರು “ಪ್ರಸಾದ” ಎಂದು ಹೇಳಿ ತಿನ್ನಲು ಆಹಾರವನ್ನು ನೀಡುತ್ತಾರೆ, ಅದನ್ನು ತಿಂದ ನಂತರ ಮಹಿಳೆ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಪ್ರಸಾದ ನೀಡಿದ ಇಬ್ಬರು ಮಹಿಳೆಯರು ಹಾಗೂ ಮತ್ತೊಬ್ಬ ವ್ಯಕ್ತಿಯೊಂದಿಗೆ ಆಕೆಯ ಬಳಿ ಇದ್ದ ಒಡವೆ ಮತ್ತು ಮೊಬೈಲ್ಅನ್ನು ದರೋಡೆ ಮಾಡುತ್ತಾರೆ ಇದೆಲ್ಲವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅಪರಿಚಿತರು ಪ್ರಸಾದದ ಹೆಸರಿನಲ್ಲಿ ಏನನ್ನಾದರೂ ಸೇವಿಸಲು ನೀಡಿದರೆ ಅದನ್ನು ಸ್ವೀಕರಿಸಬೇಡಿ ಎಂಬ ಶೀರ್ಷಿಕೆಯೊಂದಿಗೆ ಹಲವರು ತಮ್ಮ Twitter and Facebook ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ ಎಂದು ಬರೆದಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಗೂಗಲ್ ಕೀವರ್ಡ್ಗಳ ಸರ್ಚ್ ಮಾಡಿದಾಗ ವಿಡಿಯೊ ಏಪ್ರಿಲ್ 9, 2022 ರಂದು “3rd Eye” ಎಂಬ ಹೆಸರಿನ YouTube ಚಾನಲ್ಗೆ ವೀಡಿಯೊವನ್ನು ಅಪ್ಲೋಡ್ ಮಾಡಿರುವುದು ಕಂಡುಬಂದಿದೆ. ““BE CAREFUL WITH STRANGERS
| UNBELIEVABLE THINGS CAUGHT AT CCTV | Social Awareness Video By 3rd Eye”” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.
https://www.youtube.com/watch?v=YnqBETOb2GA
ವೈರಲ್ ವಿಡಿಯೋದಲ್ಲಿ ಪ್ರತಿಪಾದಿಸಲಾದ ಘಟನೆಯು ನೈಜ ಘಟನೆಯಲ್ಲ, ಅದೊಂದು ಸ್ಕ್ರಿಪ್ಟೆಡ್ ವಿಡಿಯೊ ಎಂದು ತಿಳಿದು ಬಂದಿದೆ. ಜನಸಾಮಾನ್ಯರು ಬೇರೆ ಬೇರೆ ಸಂದರ್ಭಗಳಲ್ಲಿಮೋಸ ಹೋಗುವವರಿದ್ದು ಅಂತಹವರಿಗೆ ಅನುಕೂಲವಾಗಲಿ ಎಂದು ಮತ್ತು ಜನಜಾಗೃತಿ ಮೂಡಿಸಲು ಮಾಡಿರುವ ವಿಡಿಯೋ ಎಂದು ಹೇಳಲಾಗಿದೆ. ಮನರಂಜನೆ ಮತ್ತು ಸಾಮಾಜಿಕ ಜಾಗೃತಿಯೇ ನಮ್ಮ ಚಾನೆಲ್ನ ಉದ್ದೇಶ ಎಂದು ಹೇಳಲಾಗಿದೆ.

3rd eye ಯೂಟ್ಯೂಬ್ ಚಾನೆಲ್ ಇದೇ ರೀತಿ ಅನೇಕ ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದು ಕೆಲವರು ಇದನ್ನು ತಪ್ಪು ಪ್ರತಿಪಾದನೆಯೊಂದಿಗೆ ವೈರಲ್ ಮಾಡಲಾಗಿತ್ತು ಅದನ್ನು ಸುಳ್ಳು ಎಂದು ಹಲವು ಬಾರಿ ಫ್ಯಾಕ್ಟ್ಚೆಕ್ ಮೂಲಕ ನಿರೂಪಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಮಹಿಳೆಯೊಬ್ಬರು ಅಪರಿಚಿತರಿಂದ ಸ್ವೀಕರಿದ ಪ್ರಸಾದ ಸೇವಿಸಿ ಪ್ರಜ್ಞೆ ತಪ್ಪಿದಾಗ ಅವರ ಒಡವೆಗಳನ್ನು ದರೋಡೆ ಮಾಡಲಾಗಿರುವ ವಿಡಿಯೋ ನಿಜವಾದ ಘಟನೆಯದಲ್ಲ. ಜನಜಾಗೃತಿಗಾಗಿ 3rd eye ಎನ್ನುವ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿರುವ ಸ್ಕ್ರಿಪ್ಟೆಡ್ ವಿಡಿಯೊವನ್ನು ಕೆಲವರು ಸುಳ್ಳು ಪ್ರತಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: Congress ನಾಯಕರಾದ ರಾಮಲಿಂಗಾ ರೆಡ್ಡಿ ಬೈಬಲ್ ಗೆ ಪೂಜೆ ಮಾಡಿದ್ದಾರೆ ಎಂಬುದು ನಿಜವಲ್ಲ!

