ಫ್ಯಾಕ್ಟ್‌ಚೆಕ್ : ದೆಹಲಿ CM ಕೇಜ್ರಿವಾಲ್ ಅವರ ಈ ಚಿತ್ರವು ಭಗವಂತ್ ಮಾನ್ ಅವರ ಮದುವೆಯದ್ದಲ್ಲ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜುಲೈ 7, 2022 ರಂದು ತಮ್ಮ ಆಪ್ತರ ಸಮ್ಮುಖದಲ್ಲಿ ಡಾ ಗುರುಪ್ರೀತ್ ಕೌರ್ ಅವರನ್ನು ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಆಹಾರ ಸೇವಿಸುತ್ತಿರುವುದನ್ನು ಕಾಣಬಹುದು.

ಪಂಜಾಬ್ ಮುಖ್ಯ ಮಂತ್ರಿ ಭಗವಂತ್ ಮಾನ್ ಅವರ ಮದುವೆಯ ಸಮಾರಂಭದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸರಳತೆಯನ್ನು ನೋಡಿ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅರವಿಂದ್ ಕೇಜ್ರಿವಾಲ್ ಅವರು ಆಹಾರ ಸೇವಿಸುತ್ತಿರುವ ಫೋಟೋ ಮಾನ್ ಅವರ ಮದುವೆ ಸಂದರ್ಭದ್ದು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ : 

Google ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು,  ಏಪ್ರಿಲ್ 3, 2018 ರಂದು ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ಫೋಟೋ ಲಭ್ಯವಾಗಿದ್ದು, ” ಇಂತಹ ಸರಳತೆಯನ್ನು ನೀವು ಎಂದಾದರೂ ನೋಡಿದ್ದೀರಾ? ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಸರ್ಕಾರದ ಸಚಿವ ಕೈಲಾಶ್ ಗೆಹ್ಲೋಟ್ ಹನುಮ ಜಯಂತಿ ಭಂಡಾರದಲ್ಲಿ ಆಹಾರ ಸೇವಿಸುತ್ತಿದ್ದಾರೆ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

AAP ಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಅದೇ ಫೋಟೋವನ್ನು ಏಪ್ರಿಲ್ 3, 2018 ರಂದು ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ದೆಹಲಿ ಸೆಕ್ರೆಟರಿಯಟ್‌ನ ನೌಕರರು ಆಯೋಜಿಸಿದ ಹನುಮ ಜಯಂತಿ ಭಂಡಾರಾದಲ್ಲಿ ಭಾಗವಹಿಸುತ್ತಾರೆ. ಯಾಕೆ ಇವರು ಯಾವುದೇ ವಿಐಪಿ ಮಟ್ಟದ ಆಡಂಭರಕ್ಕೆ ಆದ್ಯತೆ ನೀಡುವುದಿಲ್ಲ, ಎಂದು ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ.

ಟ್ರಿಬ್ಯೂನ್ ನ್ಯೂಸ್‌ಲೈನ್ ಕೂಡ ಏಪ್ರಿಲ್ 3, 2018 ರಂದು ಅದರ ಬಗ್ಗೆ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2018ರಲ್ಲಿ ಹನುಮ ಜಯಂತಿಯಲ್ಲಿ ಭಾಗವಹಿಸಿ ಪ್ರಸಾದ ಸೇವಿಸಿದ ಫೋಟೋವನ್ನು, ಭಗವಂತ್ ಮಾನ್‌ ಅವರ ಮದುವೆಯ ಸಮಾರಂಭದಲ್ಲಿ ಊಟ ಸೇವಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹೀಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಗುವಿಗೆ ಕಚ್ಚಿದ 30 ಸೆಕೆಂಡುಗಳಲ್ಲಿ ಸಾವನಪ್ಪಿದ ಹಾವು! ನಡೆದಿದ್ದೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights