ಫ್ಯಾಕ್ಟ್‌ಚೆಕ್ : ಕಾರುಗಳು ನಿಗೂಢವಾಗಿ ಅಪಘಾತವಾಗುವ ವಿಡಿಯೋದ ಅಸಲಿ ಕಥೆಯೇನು ಗೊತ್ತೆ?

ಚಲಿಸುತ್ತಿದ್ದ ಕಾರುಗಳು ಇದ್ದಕ್ಕಿದ್ದಂತೆ ಅಪ್ಪಳಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.  “ವಿಜ್ಞಾನಕ್ಕೊಂದು ಸವಾಲು, ವಿಜ್ಞಾನ ಕೂಡ ಇದನ್ನು ವಿವರಿಸಲು ಸಾಧ್ಯವಿಲ್ಲ, ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೀಡಿಯೊದ ಸ್ಕ್ರೀನ್‌ಶಾಟ್‌ಗಳೊಂದಿಗೆ Yandex ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ UK-ಆಧಾರಿತ Inews ವೆಬ್‌ಸೈಟ್‌ನಿಂದ ಪ್ರಕಟಿಸಲಾದ ಸುದ್ದಿ ಲೇಖನಕ್ಕೆ ಲಭ್ಯವಾಗಿದ್ದು. ‘ಭೂತದ ಕಾಟ ಎಂದು ಹೇಳಲಾಗಿರುವ ? ನಿಗೂಢವಾಗಿ ಕಾರುಗಳು ಅಪಘಾತಕ್ಕೀಡಾಗುವ ಈ ವೈರಲ್ ವೀಡಿಯೊದ  ಸತ್ಯಾಸತ್ಯತೆಯನ್ನು snopes.com ಈ ವೀಡಿಯೊದ ಅಸಲೀ ಕಥೆಯನ್ನು ಬಿಚ್ಚಿಟ್ಟಿದೆ.

ಸ್ನೋಪ್ಸ್ ಪ್ರಕಟಿಸಿದ ಫ್ಯಾಕ್ಟ್‌ಚೆಕ್ ಲೇಖನವ ಲಭ್ಯವಾಗಿದ್ದು, ಈ ಲೇಖನದ ಪ್ರಕಾರ, ಈ ವೀಡಿಯೊವನ್ನು ಎಡಿಟ್ ಮೂಲಕ ರಚಿಸಲಾಗಿದೆ. ಈಗಾಗಲೆ ಮುಖಾಮುಖಿಯಾಗಿ ನಡೆದಿರು ಕಾರು ಅಪಘಾತದ ವಿಡಿಯೊಗಳನ್ನು ಮೂಲ ಕ್ಲಿಪ್‌ಗಳಿಂದ ಡಿಜಿಟಲ್  ಮೂಲಕ ಎಡಿಟ್ ಮಾಡಲಾಗಿದೆ .ಈ ವಿಡಿಯೋನ್ನು ಡೊನಾಟೊ ಸ್ಯಾನ್ಸೋನ್ ಎಂಬ ಇಟಾಲಿಯನ್ ಕಲಾವಿದ ರಚಿಸಿದ್ದಾರೆ. ವೈರಲ್ ವೀಡಿಯೊದ ಎಲ್ಲಾ ತುಣುಕುಗಳನ್ನು ಘೋಸ್ಟ್ ಕ್ರ್ಯಾಶ್ ಎಂಬ ಅವರ ಕಿರುಚಿತ್ರದಲ್ಲಿ ಕಾಣಬಹುದು; ಅದನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಕಾರು ಅಪಘಾತಕ್ಕೀಡಾದ ವೀಡಿಯೊಗಳು ಅಲೌಕಿಕ ಅಥವಾ ಭೂತದ ಕಾಟಗಳಿಂದ ಸಂಭವಿಸಿಲ್ಲ, ಇದನ್ನು ಇಟಾಲಿಯನ್ ಅನಿಮೇಷನ್ ಕಲಾವಿದ ಡೊನಾಟೊ ಸ್ಯಾನ್ಸೋನ್ ಅವರ ಅದ್ಭುತ ಎಡಿಟಿಂಗ್ ಕೌಶಲ್ಯದ ಮೂಲಕ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕಾರು ಅಪಘಾತಕ್ಕೀಡಾದ ವೀಡಿಯೊಗಳು ಭೂತದ ಕಾಟಗಳಿಂದ ಸಂಭವಿಸಿಲ್ಲ,  ವೈರಲ್  ಕ್ಲಿಪ್‌ಗಳನ್ನು ಇಟಾಲಿಯನ್ ವಿಷುಯಲ್ ಎಫೆಕ್ಟ್ಸ್ ಕಲಾವಿದ ಡೊನಾಟೊ ಸ್ಯಾನ್‌ಸೋನ್ ನಿರ್ಮಿಸಿದ ‘ಘೋಸ್ಟ್ ಕ್ರ್ಯಾಶ್’ ಎಂಬ ಶಾಟ್ ಫಿಲ್ಮ್‌ನಿಂದ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಯೋಗಿ ಆದಿತ್ಯನಾಥ್ ‘ಇಸ್ಲಾಂ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು ನಿಜವೇ?

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights