ಫ್ಯಾಕ್ಟ್‌ಚೆಕ್: ಪಂಜಾಬ್‌ನ AAP ಸರ್ಕಾರ ಶಿವ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಿದ್ದು ನಿಜವಲ್ಲ

ಸುದ್ದಿ ಮಾಧ್ಯಮಗಳಲ್ಲಿ ದಿನಬೆಳಗಾದರೆ ಮಂದಿರ, ಮಸೀದಿಗಳ ವಿಷಯಗಳು ಮತ್ತೆ ಮತ್ತೆ ಕೇಳಿ ಬರುತ್ತಿರುತ್ತವೆ. ಟಿವಿ, ಪೇಸ್‌ಬುಕ್, ವಾಟ್ಸಾಪ್‌ ಮತ್ತು ಟ್ವಿಟರ್ ಯಾವುದೇ ಮಾಧ್ಯಮಗಳನ್ನು ನೋಡುತ್ತಿದ್ದರು ಒಂದಿಲ್ಲೊಂದು ಸುದ್ದಿಗಳು ಮಂದಿರ, ಮಸೀದಿ ಮತ್ತು ಚರ್ಚುಗಳಿಗೆ ಸಂಬಂಧಿಸಿರುವ ಸುದ್ದಿಗಳು ಇದ್ದೆ ಇರುತ್ತವೆ. ಈಗ ಮತ್ತೆ ಇಂತಹದ್ದೆ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.

AAP ಸರ್ಕಾರವು ಪಂಜಾಬ್‌ನಲ್ಲಿ ಶಿವ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಿದೆ ಎಂದು ವಿಡಿಯೊವೊಂದು ವೈರಲ್ ಆಗಿದೆ. ಪಂಜಾಬಿನ ಮಾಧ್ಯಮ ಸಂಸ್ಥೆ ನ್ಯೂಸ್89 ನ ಕ್ಲಿಪ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಪ್ರಸಾರ ಆಗುತ್ತಿದ್ದು,  ಹಲವರು ಇದನ್ನು ಹಂಚಿಕೊಂಡಿದ್ದಾರೆ.

@Kirandurgavahini ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು, “ಪಂಜಾಬ್‌ನಲ್ಲಿ, ಔರಂಗಜೇಬನ ಮಗ ಕೇಜ್ರುದ್ದೀನ್ ಹೊಸ ತುಘಲಕಿ ಆದೇಶವನ್ನು ಹೊರಡಿಸಿದ್ದಾನೆ. ಆಡಳಿತದ ಸಹಕಾರದೊಂದಿಗೆ ಶಿವ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. @narendramodi, @AmitShah, @DrAnilrss, ಮತ್ತು @myogiadityanath. ದಯವಿಟ್ಟು ಇದರ ಬಗ್ಗೆ ಸ್ವಲ್ಪ ಕ್ರಮ ತೆಗೆದುಕೊಳ್ಳಿ, ಧನ್ಯವಾದಗಳು” ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಬರೆದು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ? ಎಂದು ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೊಣ

ಫ್ಯಾಕ್ಟ್‌ಚೆಕ್ :

ಪಂಜಾಬಿನಲ್ಲಿ ಶಿವ ಮಂದಿರವನ್ನು, ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ವೈರಲ್ ಆಗಿರುವ ಸುದ್ದಿಯು ನಿಜವೇ ಎಂದು ಪರಿಶೀಲಿಸಲು, ಕೀವರ್ಡ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಸರ್ಚ್ ನಡೆಸಿದಾಗ, News89 ಪತ್ರಿಕೆ ಮತ್ತು ವೆಬ್ ಚಾನೆಲ್‌ನ ವಿಡಿಯೋವೊಂದನ್ನು ಬಳಸಿಕೊಂಡು ವಿಡಿಯೋ ದೃಶ್ಯಾವಳಿಯಲ್ಲಿರುವ ಘಟನೆಯನ್ನು ತಿರುಚಿ ತಪ್ಪು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು DFRAC ವರದಿ ಮಾಡಿದೆ.

2.52 ನಿಮಿಷಗಳ ವೀಡಿಯೊದಲ್ಲಿ ಇರುವ ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದು, ” ಯಾರೋ ಕಿಡಿಗೇಡಿಗಳು News89ನಲ್ಲಿ ಪ್ರಸಾರವಾದ ವೀಡಿಯೊವನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ತಪ್ಪಾದ ಪಠ್ಯದೊಂದಿಗೆ ಹಂಚಿಕೊಂಡಿದ್ದಾರೆ” ಎಂದು News89 ಪತ್ರಿಕೆ ಮತ್ತು ವೆಬ್ ಚಾನೆಲ್‌ನ ಸಂಪಾದಕರಾದ ಶ್ರೀ ಸಂದೀಪ್ ಚೌಧರಿ ತಿಳಿಸಿದ್ದಾರೆ, ಎಂದು DFRAC ವರದಿ ಮಾಡಿದೆ.

ಇದಲ್ಲದೆ, ಪಂಜಾಬ್‌ನ ರಾಜಪುರದಲ್ಲಿ ಹಳೆಯ ಮಸೀದಿ ಇದ್ದು, ಮಸೀದಿಯ ಸುತ್ತ ಮುಖ್ಯವಾಗಿ ಹಿಂದೂ ಕುಟುಂಬಗಳು  ವಾಸಿಸುತ್ತಿವೆ.  ಯುಪಿಯಂತಹ ಹೊರಗಿನ ಸ್ಥಳಗಳಿಂದಲೂ ಕೆಲವು ಮುಸ್ಲಿಮರು ಅಲ್ಲಿಗೆ ಬಂದಿದ್ದಾರೆ. ಕೆಲವು ಜನರು ವಾಸಿಸಲು ಅಲ್ಲಿಗೆ ಬಂದ ಕಾರಣ ಸಮಸ್ಯೆ ಪ್ರಾರಂಭವಾಯಿತು.

ಮಸೀದಿಯ ಮುಂಭಾಗದಲ್ಲಿ ಸರಕಾರಿ ಕಟ್ಟಡವಿದ್ದು, ಒಂದು ರಾತ್ರಿ, ಅಲ್ಲಿ ತಂಗಿದ್ದ 10-15 ಕುಟುಂಬಗಳು ಯಾವುದೇ ಅನುಮತಿಯಿಲ್ಲದೆ ಸರ್ಕಾರಿ ಜಾಗದಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ ಆಡಳಿತ ಮಂಡಳಿಯವರು ಸ್ಥಳಕ್ಕೆ ಆಗಮಿಸಿ, ಗೌರವಪೂರ್ವಕವಾಗಿ ಆ ಶಿವಲಿಂಗವನ್ನು ತೆರೆವುಗೊಳಿಸಿ,  ಈ ಆಸ್ತಿ ಸರ್ಕಾರಕ್ಕೆ ಸೇರಿದ್ದು, ದಯವಿಟ್ಟು ಅದನ್ನು ಬಳಸಬೇಡಿ ಎಂದು  ಬೋರ್ಡ್ ಹಾಕಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಘಟನಾ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಆಡಳಿತ ಮಂಡಳಿಯವರು ವೈರಲ್ ವಿಡಿಯೊವನ್ನು ಅಲ್ಲೆಗಳೆದಿದ್ದು, ಇದು ಸುಳ್ಳು ಸುದ್ದಿ ವಿಡಿಯೋ ಪೋಸ್ಟ್‌ನಲ್ಲಿರುವಂತೆ ಯಾವುದೇ ಘಟನೆಗಳು ಇಲ್ಲಿ ನಡೆದಿಲ್ಲ ಇಂತಹ ಸುಳ್ಳುಗಳನ್ನು ನಂಬಬೇಡಿ ಮತ್ತು ವಿಡಿಯೋವನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ನ್ಯೂಸ್89 ರ ವೀಡಿಯೊವನ್ನು ಡೌನ್‌ಲೋಡ್ ಮಾಡಿ ಸುಳ್ಳು ಒಕ್ಕಣೆಯನ್ನು ಸೇರಿಸಿ, ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್‌ನ ಎಎಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ತಪ್ಪಾದ ಸಂದರ್ಭದೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಮುದ್ರ ಮಧ್ಯದಲ್ಲಿ ದೈತ್ಯಾಕಾರದ ಹಾವು ಹೆಡೆ ಎತ್ತಿರುವುದು ನಿಜವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights