ಫ್ಯಾಕ್ಟ್ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ಇದ್ದದ್ದು ಪಾಕಿಸ್ತಾನದ ಬಾವುಟವಲ್ಲ! ಮತ್ಯಾವುದು ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕೇರಳದ ಮೂಲಕ ಕರ್ನಾಟಕ ತಲುಪಿದೆ. ಈ ನಡುವೆ ರ್ಯಾಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ಭಾರತ್ ಜೋಡೋ ಯಾತ್ರೆಯಲ್ಲಿ ಅರ್ಧ ಚಂದ್ರ ಮತ್ತು ನಕ್ಷತ್ರವಿರುವ ಹಸಿರು ಬಣ್ಣದ ಪಾಕಿಸ್ತಾನ ಧ್ವಜವನ್ನು ಪ್ರದರ್ಶಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಲವರು ಹಂಚಿಕೊಂಡಿದ್ದಾರೆ.
https://twitter.com/cdsmumbai2022/status/1576464197256613889?ref_src=twsrc%5Etfw%7Ctwcamp%5Etweetembed%7Ctwterm%5E1576464197256613889%7Ctwgr%5E63aec19c58d87e650faa626bd999c088e5b7277b%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fpakistan-flag-bharat-jodo-yatra-37850
ಸುದರ್ಶನ್ ನ್ಯೂಸ್ ಎಡಿಟರ್ ಇನ್ ಚೀಫ್ ಸುರೇಶ್ ಚವ್ಹಾಂಕೆ ಅವರು ಈ ವಿಡಿಯೋವನ್ನು ಹಂಚಿಕೊಂಡು ಇದು ಇಸ್ಲಾಮಿಕ್ ದೇಶ ಎಂದು ಉಲ್ಲೇಖಿಸಿದ್ದಾರೆ.
यह #भारत_जोड़ो_यात्रा कौनसे इस्लामी देश में पहुँची हैं? @RahulGandhi @digvijaya_28 pic.twitter.com/0SlBDvZZDK
— Suresh Chavhanke “Sudarshan News” (@SureshChavhanke) October 2, 2022
ಇದೇ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಓದಲು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ.
ग़ैर हिन्दुओं के वोट बैंक के लिए #Congress बिना एक भी तिरंगा लिए "भारत जोड़ो यात्रा" पर है, या ढोंग कर रही है ?
क्या @RahulGandhi पाकिस्तान और बांग्लादेश को जोड़ रहा है ?
कितने सबूत देने होंगें सेकुलर हिंदुओं को ? ताकि इनकी आंखें तो खुलें।
भारत के लिए घातक #कांग्रेस !! pic.twitter.com/eKGKfPGSMn— अखण्ड भारत संकल्प (@Akhand_Bharat_S) October 4, 2022
ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪೋಸ್ಟರ್ನಲ್ಲಿ ‘IUML’ ಎಂದು ಬರೆಯಲಾಗಿದೆ. “ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)”, ಕೇರಳದ ಒಂದು ರಾಜಕೀಯ ಪಕ್ಷವಾಗಿದೆ. IUML ಪಕ್ಷದ ಧ್ವಜವನ್ನು ವೈರಲ್ ವೀಡಿಯೊದಲ್ಲಿ ಕಂಡುಬರುವ ಧ್ವಜದೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಎರಡೂ ಒಂದೇ ಎಂದು ಕಂಡುಬಂದಿದೆ.

ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಮತ್ತಷ್ಟು ಸರ್ಚ್ ಮಾಡಿದಾಗ, ಲಾಜಿಕಲ್ ಇಂಡಿಯನ್ ಫ್ಯಾಕ್ಟ್-ಚೆಕ್ ತಂಡವು ವೈರಲ್ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿ ಅದು ಸುಳ್ಳು ಎಂದು ವರದಿ ಮಾಡಿದೆ. ಚಿತ್ರದಲ್ಲಿ ಕಾಣುವ ಧ್ವಜವು ಪಾಕಿಸ್ತಾನದದ್ದಲ್ಲ ಬದಲಾಗಿ “ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್” ಎಂಬ ರಾಜಕೀಯ ಪಕ್ಷದ ಬಾವುಟ ಎಂದು ಹೇಳಿದೆ.

ವೈರಲ್ ವೀಡಿಯೊದಲ್ಲಿ ಕಂಡುಬರುವ ಧ್ವಜವನ್ನು IUML ಪಕ್ಷದ ಧ್ವಜದೊಂದಿಗೆ ಹೋಲಿಸಿದ್ದೇವೆ. ಪಾಕಿಸ್ತಾನದ ಧ್ವಜವು ಅರ್ಧ ಚಂದ್ರ ಮತ್ತು ನಕ್ಷತ್ರದೊಂದಿಗೆ ಬಿಳಿ ಪಟ್ಟಿಯನ್ನು ಹೊಂದಿದೆ, ಆದರೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಧ್ವಜವು ಅರ್ಧ ಚಂದ್ರ ಮತ್ತು ನಕ್ಷತ್ರದೊಂದಿಗೆ ಸಂಪೂರ್ಣವಾಗಿ ಹಸಿರು ಬಣ್ಣವನ್ನು ಮಾತ್ರ ಹೊಂದಿದೆ. ಹಾಗಾಗಿ ಇದು ಪಾಕಿಸ್ತಾನದ ದೇಶದ ಧ್ವಜವಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
IUML ನ ಅಧಿಕೃತ ಫೇಸ್ಬುಕ್ ಪೇಜ್ಅನ್ನು ಸರ್ಚ್ ಮಾಡಿದಾಗ, ಕೇರಳದ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿಯವರು IUML ರಾಜ್ಯ ಮುಖ್ಯಸ್ಥ ಸೈಯ್ಯದ್ ಸಾದಿಕ್ ಅಲಿ ಶಿಹಾಬ್ ತಂಗಲ್ ಅವರೊಂದಿಗೆ ಇರುವ ಹಲವಾರು ಚಿತ್ರಗಳನ್ನು IUML ಹಂಚಿಕೊಂಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ವೀಡಿಯೊದಲ್ಲಿ ಕಂಡುಬರುವ ಧ್ವಜಗಳು ಕೇರಳ ಮೂಲದ ರಾಜಕೀಯ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ಗೆ (IUML ) ಸೇರಿದ್ದು ಮತ್ತು ಪಾಕಿಸ್ತಾನದಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ಭಾರತಕ್ಕೆ ರಾಹುಲ್ ಗಾಂಧಿ ನಾಯಕತ್ವದ ಅವಶ್ಯಕತೆ ಇದೆ ಎಂದು RSSನ ಭಾಗವತ್ ಹೇಳಿದರೆ?

