ಫ್ಯಾಕ್ಟ್‌ಚೆಕ್ : ಪೋರ್ಚುಗಲ್ ಧ್ವಜವನ್ನು SDPI ಧ್ವಜ ಎಂದು ತಪ್ಪಾಗಿ ಭಾವಿಸಿ ಹರಿದು ಹಾಕಿದ ವ್ಯಕ್ತಿ ಇವನಲ್ಲ

FIFA ವಿಶ್ವಕಪ್ ಫುಟ್ಬಾಲ್ 2022 ರ ಸಂಕೇತವಾಗಿ ಹಾಕಿದ್ದಕ್ಕಾಗಿ ಪೋರ್ಚುಗಲ್ ಧ್ವಜವನ್ನು ಹರಿದು ಹಾಕಿದ್ದಕ್ಕಾಗಿ ಕೇರಳದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅಭಿಮಾನಿಗಳು ಹಿಂದೂ ವ್ಯಕ್ತಿಗೆ ಥಳಿಸಿದ್ದಾರೆ ಎಂದು ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಶೋಕ್ ಸ್ವೈನ್ ಮಾಡಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ತಮಿಳು ಸುದ್ದಿ ವೆಬ್‌ಸೈಟ್‌ಗಳು ಅದೇ ವ್ಯಕ್ತಿಯ ಫೋಟೋವನ್ನು ಟ್ವೀಟ್ ಮಾಡಿ ಮತ್ತು ಪೋರ್ಚುಗಲ್‌ನ ಧ್ವಜವನ್ನು ಹರಿದು ಹಾಕಿದ್ದಕ್ಕಾಗಿ ಕ್ರಿಸ್ಟಿಯಾನೋ ರೊನಾಲ್ಡೊ ಅಭಿಮಾನಿಗಳಿಂದ ಏಟು ತಿಂದ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದು, ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಧ್ವಜ ಎಂದು ತಪ್ಪಾಗಿ ಭಾವಿಸಿ ಕಿತ್ತು ಹಾಕಿದ್ದಾನೆ ಎಂದು ಹೇಳಿಕೊಳ್ಳಲಾಗಿದೆ. ಹಾಗಿದ್ದರೆ ಈ  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

FIFA ಫುಟ್ಬಾಲ್ ವಿಶ್ವಕಪ್ ಹಿನ್ನೆಲೆಯಲ್ಲಿ ಕೇರಳದಲ್ಲಿ ಅಂತಹ ಹಿಂಸಾತ್ಮಕ ದಾಳಿ ನಡೆದಿದೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 16 ನವೆಂಬರ್ 2022 ರಂದು ಕೇರಳದಲ್ಲಿ ಇದೇ ರೀತಿಯ ಘಟನೆಯನ್ನು ವರದಿ ಮಾಡಿದ ‘ಮನೋರಮಾ’ ಸುದ್ದಿ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. FIFA ವಿಶ್ವಕಪ್ ಫುಟ್ಬಾಲ್ 2022 ಪ್ರಾರಂಭಕ್ಕೂ ಮೊದಲೇ ನಿರ್ಮಿಸಲಾದ ಪೋರ್ಚುಗಲ್ ಧ್ವಜವನ್ನು ಯುವಕನೊಬ್ಬ ಹರಿದು ಹಾಕಿದ್ದ. ನಂತರ ಯುವಕನೊಂದಿಗೆ ಪೋರ್ಚುಗಲ್ ಫುಟ್ಬಾಲ್ ತಂಡದ ಅಭಿಮಾನಿಗಳು ಜಗಳವಾಡಿದ್ದಾರೆ ಎಂದು ‘ಮನೋರಮಾ’ ವರದಿ ಮಾಡಿದೆ. ಯುವಕ ಪೋರ್ಚುಗಲ್ ಧ್ವಜವನ್ನು SDPI ಧ್ವಜ ಎಂದು ತಪ್ಪಾಗಿ ಭಾವಿಸಿ ಹರಿದಿದ್ದಾನೆ ಎಂದು ವರದಿ ಮಾಡಿದೆ. , SDPI ಎಂಬುದು, ಸದ್ಯ ನಿಷೇಧವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ರಾಜಕೀಯ ಪಕ್ಷವಾಗಿದೆ. ಈ ಘಟನೆಯು 15 ನವೆಂಬರ್ 2022 ರಂದು ಕೇರಳದ ಕಣ್ಣೂರು ಜಿಲ್ಲೆಯ ಪಾನೂರು ಪುರಸಭೆಯ ಬಳಿಯ ವೈದ್ಯರೂಪೀಡಿಕಾದಲ್ಲಿ ನಡೆದಿದೆ.

ಈ ಘಟನೆಯನ್ನು ಹಲವು ಸುದ್ದಿ ವೆಬ್‌ಸೈಟ್‌ಗಳು ಲೇಖನ ಮತ್ತು ವೀಡಿಯೊಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ದೀಪಕ್ ಎಳಂಗೋಡ್ ಎಂಬ ಯುವಕ ಪೋರ್ಚುಗಲ್ ಧ್ವಜವನ್ನು ಎಸ್‌ಡಿಪಿಐ ಧ್ವಜ ಎಂದು ತಪ್ಪಾಗಿ ಹರಿದು ಹಾಕಿರುವ ಘಟನೆ ವೈದ್ಯರೂಪೀಡಿಕಾದಲ್ಲಿ ನಡೆದಿದೆ. ದೀಪಕ್ ಎಳಂಗೋಡ್ ಪೋರ್ಚುಗಲ್ ಧ್ವಜವನ್ನು ಹರಿದು ಹಾಕುತ್ತಿರುವ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಪೋರ್ಚುಗಲ್ ಅಭಿಮಾನಿಗಳು ಮತ್ತು ಯುವಕರ ನಡುವೆ ಜಗಳ ಆಗುವ ಮೊದಲು ಪೊಲೀಸರು ಮಧ್ಯಪ್ರವೇಶಿಸಿದರು. ವರದಿಗಳ ಪ್ರಕಾರ, ತಕ್ಷಣ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಮತ್ತು ಅವನ ವಿರುದ್ಧ ಪಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಫೋಟೋಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಮೂಲಗಳು ನಮಗೆ ಕಂಡುಬಂದಿಲ್ಲ. ಈ ಘಟನೆಗೆ ಸಂಬಂಧಿಸಿದ ಈ ಗಾಯಾಳುವಿನ ಫೋಟೋಗೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟನೆಗಾಗಿ, ‘ನ್ಯೂಸ್‌ಚೆಕರ್’ ಫ್ಯಾಕ್ಟ್‌ಚೆಕ್ ತಂಡವು ಪಾನೂರು ವೃತ್ತ ನಿರೀಕ್ಷಕ ಆಜಾದ್ ಎಂಪಿ ಅವರನ್ನು ಸಂಪರ್ಕಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, “SDPI ಎಂದು ತಪ್ಪಾಗಿ ಭಾವಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ದೀಪಕ್ ಪೋರ್ಚುಗಲ್ ಧ್ವಜವನ್ನು ಹರಿದು ಹಾಕಿರುವ ಘಟನೆ ನಡೆದಿದೆ. ನಾವು ಕೂಡ ಬ್ಯಾಂಡೇಜ್‌ನಲ್ಲಿರುವ ವ್ಯಕ್ತಿಯ ಈ ವೈರಲ್ ಚಿತ್ರವನ್ನು ಸ್ವೀಕರಿಸಿದ್ದೇವೆ, ಆದರೆ ಅದು ನಕಲಿಯಾಗಿದೆ. ಆ ವ್ಯಕ್ತಿ ದೀಪಕ್ ಅಲ್ಲ ಮತ್ತು ಧ್ವಜ ಹರಿದ ಘಟನೆಗೂ ಈ ಫೋಟೋದಲ್ಲಿರುವ ವ್ಯಕ್ತಿಗೂ ಸಂಬಂಧವಿಲ್ಲ. ನಾವು ಕೂಡಲೇ ದೀಪಕ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದೆವು. ಅಭಿಮಾನಿಗಳ ಗುಂಪಿನಿಂದ ಯಾವುದೇ ಹಲ್ಲೆ ನಡೆದಿಲ್ಲ. ಈ ವೈರಲ್ ಫೋಟೋದಲ್ಲಿರುವ ಗಾಯಗೊಂಡ ವ್ಯಕ್ತಿ ದೀಪಕ್ ಅಲ್ಲ ಎಂದು ತಿಳಿಸಿದ್ದಾರೆ. ಕೆಲವು ಮಲಯಾಳಂ ಸುದ್ದಿ ವೆಬ್‌ಸೈಟ್‌ಗಳು ತಮ್ಮ ಫ್ಯಾಕ್ಟ್‌ಚೆಕ್ ಲೇಖನಗಳಲ್ಲಿ ಅದೇ ಮಾಹಿತಿಯನ್ನು ವರದಿ ಮಾಡಿವೆ.

ಒಟ್ಟಾರೆ ಹೇಳುವುದಾದರೆ, ಈ ಫೋಟೋದಲ್ಲಿರುವ ಗಾಯಾಳು ಕೇರಳದ ಯುವಕನಲ್ಲ, ಪೋರ್ಚುಗಲ್ ಧ್ವಜವನ್ನು SDPI ಧ್ವಜ ಎಂದು ತಪ್ಪಾಗಿ ಹರಿದು ಹಾಕಿದ ಘಟನೆಗೂ ಈತನಿಗೂ ಯಾವುದೇ ಸಂಬಂಧವಿಲ್ಲ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಿರ್ಮಲಾ ಸೀತಾರಾಮನ್ ಮಗಳು ಮಿಲಿಟರಿ ಅಧಿಕಾರಿಯೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights