ಫ್ಯಾಕ್ಟ್‌ಚೆಕ್: ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಹನುಮಂತ ದೇವಸ್ಥಾನವನ್ನ ನೆಲಸಮ ಮಾಡಿದ್ದು ಏಕೆ?

ರಾಜಸ್ಥಾನದ ಅಬು ಎಂಬ ಪ್ರದೇಶದಲ್ಲಿ ಹನುಮಂತನ ದೇವಸ್ಥಾನವನ್ನು ಕಾಂಗ್ರೆಸ್ ಸರ್ಕಾರ ನೆಲಸಮ ಮಾಡಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

@epanchjanya ಟ್ವಿಟರ್ ಹ್ಯಾಂಡಲ್ ಮೂಲಕ ಅಂಬುಜ್ ಭಾರದ್ವಾಜ್ ವೀಡಿಯೊವನ್ನು ಹಂಚಿಕೊಂಡಿದ್ದು, “ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಅಬುವಿನ ಹನುಮಾನ್ ಮಂದಿರವನ್ನು ಕೆಡವಿದ್ದು, ಇದನ್ನು ಪ್ರತಿಭಟಿಸಲು ಬಂದ ಎಲ್ಲಾ ಹಿಂದೂ ಪ್ರತಿಭಟನಾಕಾರರನ್ನು ಲಾಠಿ ಚಾರ್ಜ್ ಮಾಡಿ ಬಂಧಿಸಲಾಯಿತು. ಹಿಂದೂಗಳ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಇರುವ ದೋರಣೆ ಇದು. ಆದರೆ  ರಾಹುಲ್ ಗಾಂಧಿ ಅವರು ಹಿಂದೂ ಎಂದು ಹೇಳಿಕೊಳ್ಳುತ್ತಾರೆ”  ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅಂತೆಯೇ, ಅನೇಕ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹನುಮಂತನ ದೇವಸ್ಥಾನ ಕೆಡವಿದ ಘಟನೆಗೆ ಸಂಬಂಧಿಸಿದಂತೆ ಸರ್ಚ್ ಮಾಡಿದಾಗ, ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿ ಲಭ್ಯವಾಗಿದೆ. ದೇವಸ್ಥಾನ ಅಕ್ರಮ ಒತ್ತುವರಿಯಾಗಿದ್ದು, ಕೆರೆಯ ಸ್ವರೂಪ ಹಾಳಾಗಿದೆ ಎಂದು, ಕಾಂತಿಲಾಲ್ ಉಪದ್ ಅವರು ನವೆಂಬರ್ 2018 ರಲ್ಲಿ ಸತ್ಪುರದ ಕೊಳದ ಅತಿಕ್ರಮಣದ ವಿಷಯವನ್ನು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅಕ್ರಮ ದೇವಾಲಯ ತೆರವು ಮಾಡಬೇಕೆಂದು ಆದೇಶಿಸಿದ ನಂತರ ಅದನ್ನು ದೇವಸ್ಥಾನವನ್ನು ನೆಲಸಮ ಮಾಡಲಾಗಿತು.

“ಅಬು ರೋಡ್ ಎಸ್‌ಡಿಎಂ ನೀಲಂ ಲಖರಾ ಅವರ ಪ್ರಕಾರ, ಕಾಂತಿಲಾಲ್ ಉಪದ್ ಅವರು ನವೆಂಬರ್ 2018 ರಲ್ಲಿ ಸತ್ಪುರದ ಕೊಳದ ಅತಿಕ್ರಮಣದ ವಿಷಯವನ್ನು ಎತ್ತಿಕೊಂಡು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ದೇವಸ್ಥಾನವು ಕೊಳದ ಸ್ವರೂಪವನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ. ದೇವಾಲಯವನ್ನು ಕೆರೆಗೆ ಸಂಬಂಧಿಸಿದ ಜಾಗದಲ್ಲಿ ನಿರ್ಮಿಸಲಾಗಿದೆ. ಹೈಕೋರ್ಟ್ ಆದೇಶದ ನಂತರ ಅದನ್ನು ಕೆಡವಲಾಯಿತು. ಹಾಗಾಗಿ ಇದರಲ್ಲಿ ಯಾವುದೇ ಕೋಮು ಆಯಾಮವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ರಾಜಸ್ಥಾನದ ಅಬು ಎಂಬಲ್ಲಿ ಕೆರೆ ಇರುವ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಹನುಮಂತನ ದೇವಸ್ಥಾನವನ್ನು ಹೈಕೋರ್ಟ್ ಆದೇಶದ ಪ್ರಕಾರ ತೆರವುಗೊಳಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಹಿಂದೂಗಳ ದೇವಾಲಯವನ್ನು ನೆಲಸಮ ಮಾಡಿದೆ, ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಮೋದಿ’ಯವರನ್ನು ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು UNESCO ಘೋಷಿಸಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights