ಫ್ಯಾಕ್ಟ್‌ಚೆಕ್: ‘ಪಠಾಣ್’ ಚಿತ್ರದ ಮೊದಲ ದಿನದ ಗಳಿಕೆಯನ್ನು ಪಾಕ್‌ನ NGOಗೆ ನೀಡ್ತಾರಾ ಶಾರುಕ್?

ಶಾರುಕ್ ಖಾನ್ ಮತ್ತು ದೀಪಿಕ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಪ್ರಾರಂಭ ಆದಾಗಿನಿಂದ ಒಂದಿಲ್ಲೊಂದು ವಿವಾದಗಳ ಮೂಲಕ ಸದ್ದು ಮಾಡುತ್ತಲೇ ಇದೆ. ಬೇಷರಂ ಹಾಡಿನ ವಿವಾದದ ತಣ್ಣಗಾಗುತ್ತಿರುವ ಸಂದರ್ಭದಲ್ಲಿ ಶಾರುಖ್ ಖಾನ್ ಹೇಳಿಕೆ ಮತ್ತೊಂದು ವಿವಾದ ಸೃಷ್ಠಿಯಾಗಿದೆ.

ನಟ ಶಾರುಕ್ ಖಾನ್ ಅವರು ತಮ್ಮ ಹೊಸ ಚಿತ್ರ ‘ಪಠಾಣ್‌’ ಪ್ರದರ್ಶನದ ಮೊದಲ ದಿನದ ಗಳಿಕೆಯನ್ನು ಪಾಕಿಸ್ತಾನದ ಸ್ವಯಂಸೇವಾ ಸಂಸ್ಥೆಯೊಂದಕ್ಕೆ (NGO) ನೀಡಲಿದ್ದಾರೆ. ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಶಾರುಕ್ ಅವರ ಈ ನಿಲುವನ್ನು ಸಹನಟ ಜಾನ್ ಅಬ್ರಹಾಂ ಬೆಂಬಲಿಸಿದ್ದಾರೆ. ಈ ಕಾರಣಕ್ಕೆ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದರೆ ತಾವು ಹೆದರುವುದಿಲ್ಲ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ’ ಎನ್ನಲಾದ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

BBC ನ್ಯೂಸ್ ಹಿಂದಿ ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ ಬಂದ ಟ್ವಿಟ್ಅನ್ನು ಪರಿಶೀಲಿಸಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ಲಾಗಿ ಸಾಕಷ್ಟು ಚರ್ಚೆಗೆ ಒಳಗಾಗಿರುವ ಟ್ವೀಟ್, ಬಿಬಿಸಿ ಹಿಂದಿ ವಾಹಿನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಪಠಾಣ್ ಚಿತ್ರದ ಮೊದಲ ದಿನದ ಕಲೆಕ್ಷನ್‌ಗಳನ್ನು ಪಾಕಿಸ್ತಾನದ ಎನ್‌ಜಿಒಗೆ ದೇಣಿಗೆ ನೀಡುವ ಕುರಿತು ಯಾವುದೇ ಘೋಷಣೆ ಮಾಡಿದ್ದಾರೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಈ ಮಾಹಿತಿಯನ್ನು ದೃಢೀಕರಿಸುವ ಯಾವುದೇ ಸುದ್ದಿ ವರದಿಯು ಕಂಡುಬಂದಿಲ್ಲ.

ಶಾರುಖ್ ಖಾನ್ ಅನೇಕ ಸಂದರ್ಶನಗಳಲ್ಲಿ ಪಾಕಿಸ್ತಾನದಲ್ಲಿ ತಮ್ಮ ಪೂರ್ವಜರ ಮೂಲದ ಬಗ್ಗೆ ಮಾತನಾಡುತ್ತ ಅವರ ತಂದೆ ಪಾಕಿಸ್ತಾನದ ಪೇಶಾವರದವರು ಎಂದು ಹೇಳಿದರು. ಹಲವಾರು ಸುದ್ದಿ ವೆಬ್‌ಸೈಟ್‌ಗಳು ಅವರ ಕುಟುಂಬದ ಹಿನ್ನಲೆಯನ್ನು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಆದರೆ ಇತ್ತೀಚೆಗೆ, ಅವರು ತಮ್ಮ ಪಠಾನ್ ಚಿತ್ರದ ಮೊದಲ ದಿನದ ಕಲೆಕ್ಷನ್‌ಗಳನ್ನು ಪಾಕಿಸ್ತಾನದ ಚಾರಿಟಿಗೆ ದೇಣಿಗೆ ನೀಡುವ ಬಗ್ಗೆ ಯಾವುದೇ ಘೋಷಣೆ ಮಾಡಲಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟ್ವೀಟ್ ‘ಒಕೆ ಸಟೈರ್’ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟವಾಗಿದೆ. ಅದನ್ನು BBC ಹಿಂದಿ ಟ್ವಿಟರ್ ಖಾತೆಯಲ್ಲಿ ಇರುವಂತೆ ತಿರುಚಲಾಗಿದೆ. ಚಿತ್ರದ ಗಳಿಕೆಯ ಹಣವನ್ನು ಪಾಕಿಸ್ತಾನ್ NGO ಗೆ ನೀಡುವುದಾಗಿ ಶಾರುಕ್ ಅವರು ಹೇಳಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಈ ಹಿಂದೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹದೆ ಸುದ್ದಿಯನ್ನು ಶಾರುಕ್ ಖಾನ್ ನೀಡಿದ್ದರು ಎಂದು ಸುಳ್ಳು ಪ್ರತಿಪಾನೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಈಗ ಪಠಾಣ್ ಸಿನಿಮಾದ ಹಿನ್ನಲೆಯನ್ನು ಸುಳ್ಳು ಮಾಹಿತಿಯನ್ನು ಸಾಮಾಜಿಕ  ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಪಠಾಣ್ ಚಿತ್ರದ ಮೊದಲ ದಿನದ ಕಲೆಕ್ಷನ್‌ಗಳನ್ನು ಪಾಕಿಸ್ತಾನದ ಚಾರಿಟಿಗೆ ದೇಣಿಗೆ ನೀಡುವ ಬಗ್ಗೆ ಯಾವುದೇ ಘೋಷಣೆಯನ್ನು ಶಾರುಕ್ ಮಾಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರ: ಫ್ಯಾಕ್ಟ್‌ಚೆಕ್: ‘ಪಠಾಣ್’ ಚಿತ್ರವನ್ನು ಬಾಯ್ಕಾಟ್ ಮಾಡಿದಕ್ಕೆ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights