ಫ್ಯಾಕ್ಟ್‌ಚೆಕ್: ಹಣ ಸಂಪಾದನೆಗಾಗಿ ಮದುವೆಯೊಂದರಲ್ಲಿ ಶಾರುಕ್ ಖಾನ್ ನೃತ್ಯ ಮಾಡಿದರೆ?

ದೀಪಿಕ ಪಡುಕೋಣೆ , ಜಾನ್‌ ಅಬ್ರಹಾಂ ಮತ್ತು ಶಾರುಕ್ ಖಾನ್ ಅಭಿನಯದ ಪಠಾಣ್ ಚಿತ್ರ ಮಕಾಡೆ ಮಲಗಿದ ಕಾರಣದಿಂದ ಶಾರೂಕ್ ಖಾನ್ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಈ ನಷ್ಟವನ್ನು ಭರಿಸಲು ಶಾರುಕ್ ಖಾನ್ ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡುವ ಮೂಲಕ ಹಣವನ್ನು ಗಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮತ್ತೊಬ್ಬ ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ಬಾಲಿವುಡ್ ನಟ ಶಾರುಕ್ ಖಾನ್  ಮದುವೆ ಸಮಾರಂಭವೊಂದರಲ್ಲಿ ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಶಾರುಕ್ ಯಾರು. ತನ್ನ 60ನೇ ವಯಸ್ಸಿನಲ್ಲಿ ಯಾರದ್ದೋ ಮದುವೆ ಮಂಟಪದಲ್ಲಿ ಒಂದಿಷ್ಟು ಹಣ ಸಂಪಾದನೆಗಾಗಿ ಕುಣಿಯುವ ಕಾರ್ಮಿಕ. ಇದು ಶಾರುಕ್ ಯೋಗ್ಯತೆ. ಇದುವೇ ಆತನ ನಿಜವಾದ ವೃತ್ತಿ. ದುಡ್ಡಿನಿಂದ ಗೌರವವನ್ನು ಖರೀದಿಸಲಾಗದು’ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.  ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಸಾಮಜಿಕ ಮಧ್ಯಮಗಳಲ್ಲಿ ವೈರಲ್ ಆಗಿರುವ ಶಾರುಕ್ ಖಾನ್ ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ‘IBRAHIM QADRI‘ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋವೊಮದು ಲಭ್ಯವಾಯಿತು. ಲಭ್ಯವಾದ ವಿಡಿಯೋದಲ್ಲಿ ನೃತ್ಯದ ಮೂಲ ಆವೃತ್ತಿ ಕಂಡುಬಂದಿದ್ದು, ಈ ವಿಡಿಯೋದಲ್ಲಿರುವುದು ಶಾರುಕ್‌ ಖಾನ್ ಅಲ್ಲ ಶಾರುಕ್‌ನನ್ನೆ ಹೋಲುವ ಇಬ್ರಾಹಿಂ ಖಾದ್ರಿ ಎಂದು ತಿಳಿದು ಬಂದಿದೆ.

ಶಾರುಕ್ ಅವರ ಚಹರೆಯನ್ನು ಹೋಲುವ ಇಬ್ರಾಹಿಂ ಖಾದ್ರಿ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 52 ಸೆಕೆಂಡ್‌ನ ಈ ವಿಡಿಯೊವನ್ನು 2022ರ ಜುಲೈ 12ರಂದು ಅಪ್‌ಲೋಡ್ ಮಾಡಿದ್ದಾರೆ. ಇವರನ್ನೇ, ಬಾಲಿವುಡ್ ನಟ ಶಾರುಕ್ ಎಂದು ತಪ್ಪಾಗಿ ಅರ್ಥೈಸಿಕೊಂಡು ಪೋಸ್ಟ್ ಹಾಕಲಾಗಿದೆ ಎಂದು ‘ಇಂಡಿಯಾಟುಡೇ’ ವೆಬ್‌ಸೈಟ್ ವರದಿ ಮಾಡಿದೆ.

ಇಬ್ರಾಹಿಂ ಖಾದ್ರಿ ಕುರಿತಾದ  ಲೇಖನವನ್ನು ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಶಾರುಕ್‌ ಖಾನ್‌ ಅವರ ಹೋಲಿಕೆ ಇರುವ ಇಬ್ರಾಹಿಂ ಅವರ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವೊಮ್ಮೆ ತಪ್ಪಾಗಿ ಹಂಚಿಕೊಳ್ಳುವ ಪ್ರಸಂಗಗಳು ನಡೆದಿವೆ ಎಂದು ವರದಿಯಾಗಿದೆ.ಈ ಹಿಂದೆ, ಶಾರುಕ್ ಅವರು ಜೈಲಿನಲ್ಲಿದ್ದ ತಮ್ಮ ಪುತ್ರ ಆರ್ಯನ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾದ ವಿಡಿಯೊ ಸಹ ಹರಿದಾಡಿತ್ತು. ಶಾರುಕ್‌ ಹಾಗೂ ಅವರ ಪುತ್ರನನ್ನು ಹೋಲುವ ರೀತಿ, ಖಾದ್ರಿ ಹಾಗೂ ಅವರ ಸ್ನೇಹಿತ ಕಾಣಿಸಿಕೊಂಡಿದ್ದ ವಿಡಿಯೊವನ್ನೇ ನೈಜ ಎಂದು ಬಿಂಬಿಸಿ ಹಂಚಿಕೊಳ್ಳಲಾಗಿತ್ತು ಆಗ ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ಸ್ಟೋರಿಯನ್ನು ಪ್ರಕಟಿಸಿ ನಿಜ ಸಂಗತಿ ಏನೆಂದು ತಿಳಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೋದಲ್ಲಿ ಶಾರುಕ್‌ ಖಾನ್‌ ಲುಕ್ ಹೋಲುವ ಇಬ್ರಾಹಿಂ ಖಾದ್ರಿ ಎಂಬ ವ್ಯಕ್ತಿ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊವನ್ನು, ಶಾರುಕ್‌ ಖಾನ್‌ ಹಣಕ್ಕಾಗಿ ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡುತ್ತಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಠಾಣ್ ಚಿತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ನಿಜವೇ?


 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights