ಫ್ಯಾಕ್ಟ್ಚೆಕ್ : ಅದಾನಿ ಪರವಾಗಿ BJP ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ನೀಡಿರುವುದು ನಿಜವೇ?
2023ರ ಆರಂಭದಲ್ಲಿ ಗೌತಮ್ ಅದಾನಿ ಅವರು, ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿ ಮತ್ತು ಏಷ್ಯನ್ನರಲ್ಲಿ ಅತ್ಯಧಿಕ ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಯಾಗಿದ್ದರು. ಆದರೆ ಅವರು ಈಗ ಏಷ್ಯಾ ಖಂಡದಲ್ಲಿ ನಾಲ್ಕನೇ ಶ್ರೀಮಂತರಾಗಿದ್ದಾರೆ. ಮುಖೇಶ್ ಅಂಬಾನಿ ಮತ್ತು ಚೀನಾದ ಜೋಡಿಯಾದ ಜಾಂಗ್ ಶಾನ್ಶನ್ ಮತ್ತು ಜಾಂಗ್ ಯಿಮಿಂಗ್ ಅವರ ನಂತರ ಸ್ಥಾನದಲ್ಲಿ ಅದಾನಿ ಬಂದು ನಿಂತಿದ್ದಾರೆ. ಈ ಬೆಳವಣಿಗೆಗೆ ಕಾರಣವಾಗಿದ್ದು ಹಿಂಡೆನ್ ಬರ್ಗ್ ವರದಿ.
ಇತ್ತ BJP ಯ ಮಾಜಿ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಅದಾನಿಯವರ ಪರ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಅದಾನಿ ಮುಂಬೈ ವಿಮಾನ ನಿಲ್ದಾಣದ 74% ಷೇರುಗಳನ್ನು ಭಾರತ ಸರ್ಕಾರದಿಂದ ಸ್ವಾಧೀನಪಡಿಸಿಕೊಂಡಿಲ್ಲ, ಬದಲಿಗೆ ಕಾಂಗ್ರೆಸ್ 2006 ರಲ್ಲಿ ಮಾರಾಟ ಮಾಡಿದ ಅನೇಕ ವಿದೇಶಿ ಪಾಲುದಾರರಿಂದ ಖರೀದಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ”. ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಸಂಸದ ಸುಬ್ರಮಣಿಯನ್ ಸ್ವಾಮಿಯವರು ಅದಾನಿ ಕುರಿತು ಈ ರೀತಿ ಹೇಳಿಕೆ ನೀಡಿದ್ದಾರೆಯೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ನಲ್ಲಿ ಮಾಡಲಾದ fರತಿಪಾದನೆಯನ್ನು ಪರಿಶೀಲಿಸಿದಾಗ, ಸಂಸದ ಸುಬ್ರಮಣಿಯನ್ ಸ್ವಾಮಿ ಗೌತಮ್ ಅದಾನಿ ಪರ ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎನ್ನುವ ಯಾವ ಮಾಧ್ಯಮಗಳ ವರದಿಗಳು ಲಭ್ಯವಾಗಿಲ್ಲ.

ಆದರೆ ಡಾ ಸುಬ್ರಮಣಿಯನ್ ಸ್ವಾಮಿಯವರ ಅದಾನಿ ವಿರುದ್ದ ನೀಡಿರುವ ಹೇಳಿಕೆ ವರದಿಯಾಗಿದೆ. ವಾಸ್ತವವಾಗಿ, ಅದಾನಿ ಸಾಲವನ್ನು ಮರುಪಾವತಿ ಮಾಡದೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಲನ್ನು ಪಡೆಯಲು ಪ್ರಭಾವವನ್ನು ಬಳಸಿದ್ದಾರೆ ಎಂದು ಸ್ವಾಮಿ ಆರೋಪಿಸಿದರು. ಅಲ್ಲದೆ, ಅದಾನಿ ಗ್ರೂಪ್ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ 74% ಪಾಲನ್ನು ಹೊಂದಿದೆ, ಷೇರು ಖರೀದಿ ವಹಿವಾಟಿನ ನಂತರ, 50.5% ಅನ್ನು GVK ಗ್ರೂಪ್ ಮತ್ತು 23.5% ಏರ್ಪೋರ್ಟ್ಸ್ ಕಂಪನಿ ಸೌತ್ ಆಫ್ರಿಕಾ (ACSA), ಮತ್ತು Bidvest ಗ್ರೂಪ್ನಿಂದ ಖರೀದಿಸಲಾಗಿದೆ.

2021 ರಲ್ಲಿ ಜಿವಿಕೆ ಗುಂಪಿನಿಂದ ಅದಾನಿ ಮುಂಬೈ ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ, ಅದಾನಿ ಸಾಲವನ್ನು ಮರುಪಾವತಿ ಮಾಡಿಲ್ಲ ಮತ್ತು ಮುಂಬೈ ವಿಮಾನ ನಿಲ್ದಾಣದ ಒಪ್ಪಂದವನ್ನು ಪಡೆಯಲು ಪ್ರಭಾವವನ್ನು ಬಳಸಿದ್ದಾರೆ ಎಂದು ಸ್ವಾಮಿ ಆರೋಪಿಸಿದರು.
ಇತ್ತೀಚೆಗೆ, 07 ಫೆಬ್ರವರಿ 2023 ರಂದು ಸಂಸತ್ತಿನ ಭಾಷಣದಲ್ಲಿ, ರಾಹುಲ್ ಗಾಂಧಿಯವರು ಅದಾನಿ ಗ್ರೂಪ್ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು, ಮುಂಬೈ ವಿಮಾನ ನಿಲ್ದಾಣವನ್ನು ಜಿವಿಕೆ ಗ್ರೂಪ್ನಿಂದ ತೆಗೆದುಕೊಂಡ ನಂತರ ಅದನ್ನು ಅದಾನಿ ಗೆ ವಹಿಸಲಾಯಿತು ಎಂದು ಹೇಳಿದ್ದರು. ಡಾ ಸ್ವಾಮಿ 29 ಜನವರಿ 2023 ರಂದು ಸಂದರ್ಶನವೊಂದರಲ್ಲಿ, ಅದಾನಿ ಗ್ರೂಪ್ನ ಹಿಂಡೆನ್ಬರ್ಗ್ ವರದಿಯನ್ನು ಚರ್ಚಿಸುವಾಗ, ಮುಂಬೈ ವಿಮಾನ ನಿಲ್ದಾಣದ ನಿಯಂತ್ರಣವನ್ನು ಬಿಟ್ಟುಕೊಡುವಂತೆ GVK ಗ್ರೂಪ್ಗೆ ಒತ್ತಡ ಹೇರಲು ತನಿಖಾ ಸಂಸ್ಥೆಗಳನ್ನು ಬಳಸಿದ್ದರು ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದರು. ಆದರೆ ಜಿವಿಕೆ ಸಮೂಹವು ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ಗೆ ಮಾರಾಟ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂಬ ಹೇಳಿಕೆಯನ್ನು GVK ಗ್ರೂಪ್ ನಿರಾಕರಿಸಿತು.

ಅದಾನಿಯ ಮುಂಬೈ ವಿಮಾನ ನಿಲ್ದಾಣ ಸ್ವಾಧೀನಕ್ಕೆ ಬರುವುದಾದರೆ, ಮಾಧ್ಯಮ ವರದಿಗಳ ಪ್ರಕಾರ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಗ್ರೂಪ್ 74% ಪಾಲನ್ನು ಹೊಂದಿದೆ, ಷೇರು ಖರೀದಿ ವಹಿವಾಟಿನ ನಂತರ, 50.5% GVK ಗ್ರೂಪ್ನಿಂದ ಮತ್ತು 23.5% ರಷ್ಟು ಸಣ್ಣ ಪ್ರಮಾಣದ ಪಾಲುದಾರರಿಂದ ದಕ್ಷಿಣ ಆಫ್ರಿಕಾ ವಿಮಾನ ಕಂಪನಿ ನಿಲ್ದಾಣಗಳು ಸೇರಿದಂತೆ (ACSA) ಮತ್ತು Bidvest ಗ್ರೂಪ್ ಖರೀದಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ವಿಮಾನ ನಿಲ್ದಾಣದ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಬ್ರಮಣಿಯನ್ ಸ್ವಾಮಿ ಅವರು ಅದಾನಿ ಗ್ರೂಪ್ ಪರವಾಗಿ, (ಅಂದಿನ 2006ರಲ್ಲಿ) ಕಾಂಗ್ರೆಸ್ ಪಕ್ಷ ಅವ್ಯಹಾರ ನಡೆಸಿದೆ ಎಂಬ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಪ್ರತಿಪಾದನೆಯನ್ನು ಬೆಂಬಲಿಸಲು ಯಾವುದೇ ಕ ಪುರಾವೆಗಳಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : BBC ಕಚೇರಿ ಮೇಲೆ ನಡದೆ ಐಟಿ ದಾಳಿಯನ್ನು ಖಂಡಿಸಿ ‘Resign Modi’ ಎಂಬ ಹೋರಾಟ ನಡೆದಿದ್ದು ನಿಜವೇ?

