ಫ್ಯಾಕ್ಟ್‌ಚೆಕ್ : 1981ರಲ್ಲಿ ಉಪಗ್ರಹವನ್ನು ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲದೆ ಎತ್ತಿನ ಗಾಡಿಯಲ್ಲಿ ಸಾಗಿಸುವ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣವೇ?

ನೆಹರು ಕುಟುಂಬವು ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಆಚರಣೆಯನ್ನು ಐಶಾರಾಮಿಯಾಗಿ ವಿಮಾನದಲ್ಲಿ ಆಚರಸುತ್ತಿದೆ, ಆದರೆ ಇದೇ ಕಾಂಗ್ರೆಸ್‌ಗೆ ಉಪಗ್ರಹದ ಬಿಡಿ ಭಾಗಗಳನ್ನು ಸಾಗಿಸಲು ಮಾತ್ರ ಹಣವಿರಲಿಲ್ಲ, ಹಾಗಾಗಿ ಸೈಕಲ್ ಮತ್ತು ಎತ್ತಿನ ಗಾಡಿಗಳ ಮೂಲಕ ಸಾಗಿಸಲಾಗುತಿತ್ತು ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

Image

ವಿಮಾನದಲ್ಲಿ ರಾಹುಲ್ ಗಾಂಧಿಯ ಹುಟ್ಟುಹಬ್ಬದ ಆಚರಣೆಯ ಚಿತ್ರದೊಂದಿಗೆ ಎತ್ತಿನ ಗಾಡಿ ಮತ್ತು ಸೈಕಲ್‌ನಲ್ಲಿ ಉಪಗ್ರಹವನ್ನು ಸಾಗಿಸುತ್ತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ರಾಕೇಟ್ ಉಪಗ್ರಹವನ್ನು ಸಾಗಿಸಲು ಸರಿಯಾದ ವಾಹನವನ್ನು ಒದಗಿಸದ ಕಾಂಗ್ರೆಸ್ ದೇಶದ ಬೆಳವಣಿಗೆಯನ್ನು ಕುಂಟಿತಗೊಳಿಸಿತ್ತು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇವೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಣದ ಕೊರೆತಯಿಂದಾಗಿ ಉಪಗ್ರಹವನ್ನು ಎತ್ತಿನ ಗಾಡಿ ಮೂಲಕ ಸಾಗಿಸಲಾಗಿದೆ ಎಂಬ ಪ್ರತಿಪಾದನೆ ಸುಳ್ಳು. ಈ 1981ರಲ್ಲಿ ಈ ಉಪಗ್ರಹವನ್ನು ಎತ್ತಿನ ಗಾಡಿಯಲ್ಲಿ ಸಾಗಿಸಲು ಬೇರೆ ಕಾರಣಗಳಿವೆ ಎಂದು  ‘The News Minute’ ವರದಿ ಮಾಡಿದೆ.

ಎತ್ತಿನ ಗಾಡಿಯಲ್ಲಿ ಸಾಗಿಸಲಾದ ಉಪಗ್ರಹದ ಚಿತ್ರವನ್ನು ಸೆಪ್ಟೆಂಬರ್ 2014 ರಲ್ಲಿ ‘ದಿ ನ್ಯೂಸ್ ಮಿನಿಟ್’ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದೆ.  “ಆಪಲ್ ಉಪಗ್ರಹವನ್ನು ಬುಲಕ್ ಕಾರ್ಟ್‌ನಲ್ಲಿ ಸಾಗಿಸಲಾಗುತ್ತಿರುವ ಇಸ್ರೋ ಅವರ ಕ್ಲಾಸಿಕ್ ಚಿತ್ರ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.

ಫೆಬ್ರವರಿ 2017 ರ ಹಿಂದೂಸ್ತಾನ್ ಟೈಮ್ಸ್ ಲೇಖನವನ್ನು ಪ್ರಕಟಿಸಿದ್ದು “1981 ರಲ್ಲಿ, ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಅದರ ಹೊಸ ಉಪಗ್ರಹವನ್ನು ಸಾಗಿಸಲು ಲೋಹ ರಹಿತವಾದ ವಾಹನವನ್ನು ಅವಲಂಬಿಸಬೇಕಾಗಿ ಬಂದಿತ್ತು.  ಈ ಸಂದರ್ಭದಲ್ಲಿ ವಿಶ್ವವೇ ಭಾರತದ ಬಾಹ್ಯಾಕಾಶ ವಿಜ್ಞಾನದ ಕಡೆಗೆ ತಿರುಗಿ ನೋಡುವಂತೆ ಭಾರತದ ವಿಜ್ಞಾನಿಗಳು ಮಾಡಿದ್ದರು. ತಮ್ಮ ಹೊಸ ಕನಸಿನ ಉಪಗ್ರಹವನ್ನು ಒಂದು ಹಳೆಯ ಎತ್ತಿನ ಬಂಡಿಯ ಮೇಲೆ ಸಾಗಿಸುವ ಸಾಹಸಕ್ಕೆ ಕೈ ಹಾಕಿದ್ದರು” ಎಂದು ವರದಿ ಮಾಡಿದೆ.

2019 ರಲ್ಲಿ ಪ್ರಕಟವಾದ ‘ ‘The rocket science behind the bullock cart in India’s space story’ ‘ ಎಂಬ ಶೀರ್ಷಿಕೆಯ ಲೇಖನವೊಂದರಲ್ಲಿ ಲೈವ್ ಮಿಂಟ್ 1981 ರಲ್ಲಿ ಭಾರತೀಯ ವಿಜ್ಞಾನಿಗಳು ಭಾರತದ ಮೊದಲ ಸಂವಹನ ಉಪಗ್ರಹ ಆಪಲ್ ಅನ್ನು ೆತ್ತಿನ ಗಾಡಿಯಲ್ಲಿ ಸಾಗಿಸಿದ್ದಾರೆ ಎಂದು ಉಲ್ಲೇಖಿಸಿ ವರದಿ ಮಾಡಿದೆ.

ಆಪಲ್‌ನ ಯೋಜನಾ ನಿರ್ದೇಶಕ ಮಾಜಿ ಇಸ್ರೋ ವಿಜ್ಞಾನಿ ವಾಸಗಂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಉಲ್ಲೇಖಿಸುತ್ತ,  ಕೌರೌದಿಂದ ಉಡಾವಣೆ ಮಾಡುವ ಅಂತಿಮ ಪರೀಕ್ಷೆಗಳಿಗಾಗಿ ಫ್ರಾನ್ಸ್‌ನ ಟೌಲೋಸ್‌ಗೆ ಉಪಗ್ರಹವನ್ನು ಸಾಗಿಸುವ ಹಂತಕ್ಕೆ ನಾವು ಬಂದಿದ್ದೇವೆ” ಆದರೆ ಇದು ಸಾಕಷ್ಟು ಖರ್ಚು ಮತ್ತು ಸಮಯವನ್ನು ಬೇಡುತಿತ್ತು ಎಂದಿದ್ದರು.

ಆದರೆ ಐದು ಗಂಟೆಗಳಲ್ಲಿ ಪರಿಹಾರವನ್ನು ಕಂಡುಹಿಡಿಯಲಾಯಿತು ಎತ್ತಿನ ಗಾಡಿಯ ಬಾಡಿಗೆಗೆಂದು ₹ 150 ವೆಚ್ಚ ಮಾಡಲಾಯಿತು” ಎಂದು ಮಾಜಿ ISRO ವಿಜ್ಞಾನಿ ನೆನಪಿಸಿಕೊಂಡರು, “ಕಾಂತೀಯವಲ್ಲದ ವಾತಾವರಣವನ್ನು ಒದಗಿಸಲು ಮತ್ತು ಆಂಟೆನಾವನ್ನು ನಡೆಸಲು APPLE ಅನ್ನು ಎತ್ತಿನ ಬಂಡಿಯಲ್ಲಿ ಇರಿಸಲಾಯಿತು. ಪ್ರತಿರೋಧ ಹೊಂದಾಣಿಕೆಯ ಸಮಸ್ಯೆಯಿಂದ ಉಂಟಾದ TT&C ಲಿಂಕ್ ಸಮಸ್ಯೆಯನ್ನು ನಿವಾರಿಸಲು ತೆರೆದ ಮೈದಾನದಲ್ಲಿ ಪರೀಕ್ಷಿಸಲಾಯಿತು ಎಂದು ಹೇಳಿದ್ದಾರೆ”.

ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಆಚರಣೆಯ ಚಿತ್ರಣವನ್ನು ಕಾಂಗ್ರೆಸ್ ಹಿಸ್ಟರಿ ಟ್ವಿಟರ್ ಪುಟವು ಜನವರಿ 2016 ರಲ್ಲಿ ಟ್ವೀಟ್ ಮಾಡಲ್ಪಟ್ಟಿದೆ, “ಇಂದಿರಾ ಗಾಂಧಿ ವಿಮಾನದಲ್ಲಿ ರಾಹುಲ್ ಗಾಂಧಿಯವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ.

ಒಟ್ಟಾರೆಯಾಗಿ ಹೇಳವುದಾದರೆ, 1980 ರ ದಶಕದಲ್ಲಿ ಆಂಟೆನಾ-ಶ್ರೇಣಿಯ ಪರೀಕ್ಷಾ ಉಪಗ್ರಹಗಳು ಹೆಚ್ಚು ಕಾಂತೀಯ ಸೂಕ್ಷ್ಮ ಉಪಕರಣವಾದ್ದರಿಂದ ಯಾವುದೇ ಕಬ್ಬಿಣದ ರಚನೆ ಅಥವಾ ಲೋಹದ ವಾಹನದಲ್ಲಿ ಅದನ್ನು ಸಾಗಿಸಲು ಸಾಧ್ಯವಾಗದ ಕಾರಣಕ್ಕೆ ಸುರಕ್ಷತಾ ದೃಷ್ಟಿಯಿಂದ ಎತ್ತಿನ ಗಾಡಿಯಲ್ಲಿ ಸಾಗಿಸಲಾಗಿದೆ. ಹಣದ ಕೊರತೆಯಿಂದ ಉಪಗ್ರಹಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸಲಾಗಿದೆ ಎಂಬುದು ಸುಳ್ಳು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರಗಳು ವಾಸ್ತವವಾಗಿದ್ದರೂ, ತಪ್ಪಾದ ನಿರೂಪಣೆಯೊಂದಿಗೆ ನೆಹರು ಕುಟುಂಬವನ್ನು ಗುರಿಯಾಗಿಸಿಕೊಂಡು 1981ರಲ್ಲಿ ಆಪಲ್ ಉಪಗ್ರಹಗಳನ್ನು ಹಣದ ಕೊರತೆಯಿಂದಾಗಿ ಎತ್ತಿನ ಗಾಡಿಯಲ್ಲಿ ಸಾಗಿಸಲಾಗಿತ್ತು. ನೆಹರು ಕುಟುಂಬಕ್ಕೆ ದೇಶಕ್ಕಿಂತ ತನ್ನ ಕುಟುಂಬವನ್ನು ಉದ್ದಾರ ಮಾಡುವುದೇ ಮುಖ್ಯವಾಗಿತ್ತು ಎಂಬುದನ್ನು ಬಿಂಬಿಸಲು ಈ ಹೋಲಿಕೆಗಳನ್ನು ಬಳಸಿಕೊಳ್ಳಲಾಗಿದೆ. ಈ ಎರಡೂ ಚಿತ್ರಗಳನ್ನು ಬೇರೆ ಬೇರೆ ಹಿನ್ನಲೆಯಲ್ಲಿ ಸೆರೆಹಿಡಿಯಲಾಗಿದ್ದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಕೃಪೆ: ಯೂ ಟರ್ನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನೇಪಳದ ಕರೆನ್ಸಿ ನೋಟುಗಳಲ್ಲಿ ಗೌತಮ ಬುದ್ದನ ಫೋಟೊ ಇದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights