ಫ್ಯಾಕ್ಟ್‌ಚೆಕ್ : BJP ಗೆ ಮತ ಹಾಕಬೇಡಿ ಎಂದು NRIಗಳು ಪ್ರಚಾರ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?
ಕರ್ನಾಟಕದಲ್ಲಿ ಮತ ಭೇಟೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿಗಳು ನಾಮಪತ್ರಸಲ್ಲಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಿ ಮತಯಾಚನೆ ಮಾಡುತ್ತಿದ್ದಾರೆ. ಮೇ 10ರಂದು ನಡೆಯಲಿರುವ ಮತದಾನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಮತ್ತು ಬೆಂಬಲಿಗರು ಬೀದಿ ಬೀದಿ, ಗಲ್ಲಿಗಲ್ಲಿಗಳನ್ನು ಸುತ್ತಿ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ.
No Vote to BJP ❌#KarnatakaElection2023 pic.twitter.com/X8wrcfcqql
— Deepak Khatri (@Deepakkhatri812) April 23, 2023
ಆದರೆ ಇನ್ನೊಂದು ಕಡೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಕರ್ನಾಟಕದ 2023ರ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು BJP ಅಭ್ಯರ್ಥಿಗಳಿಗೆ ಮತ ಹಾಕಬೇಡಿ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಕ್ಯಾಂಪೇನ್ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
Across the globe everyone says “NO VOTE to BJP” ✌🏼#KarnatakaElections2023 pic.twitter.com/XUcdaGt8Vn
— Vijay Thottathil (@vijaythottathil) April 23, 2023
ಅನಿವಾಸಿ ಭಾರತೀಯರು ಬಿಜೆಪಿ ವಿರುದ್ಧ ಜಾಗತಿಕ ಪ್ರಚಾರವನ್ನು ಆರಂಭಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ NRIಗಳು ವಿವಿಧ ಸ್ಥಳಗಳಲ್ಲಿ ವಿಡಿಯೋಗೆ ಫೋಸ್ ನೀಡುತ್ತ ‘ಬಿಜೆಪಿಗೆ ಮತ ಹಾಕಬೇಡಿ’ (NO Vote To BJP) ಎಂಬ ಫಲಕಗಳನ್ನು ಹಿಡಿದಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಅನಿವಾಸಿ ಭಾರತೀಯರು ( NRI ) BJP ಗೆ ಮತ ಹಾಕಬೇಡಿ ಎನ್ನವ ವೈರಲ್ ವಿಡಿಯೋದ ಹಿನ್ನಲೆಯನ್ನು ಪರೀಕ್ಷಿಸಲು ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 24, 2021 ರಂದು ‘ನೋ ವೋಟ್ ಟು ಬಿಜೆಪಿ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ.

2021 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಪ್ರಾರಂಭವಾಗಿ, ಮೇ 2 ರವರೆಗೆ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು . ಹಾಗಾಗಿ ಈ ವೈರಲ್ ವಿಡಿಯೋ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿವೆ ಎಂಬುದು ಸ್ಪಷ್ಟವಾಗಿದೆ. ‘ಬಿಜೆಪಿಗೆ ಮತ ಹಾಕಬೇಡಿ’ ಎಂಬ ಅಭಿಯಾನ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡಿತು. ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಭಾರಿ ಹಿನ್ನಡೆಯನ್ನುಂಟು ಮಾಡಿತ್ತು.

ಈ ಪ್ರಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಬಂಗಾಳದ ಬೀದಿಗಳಲ್ಲಿ ಜಾಹೀರಾತು ಫಲಕ, ಪೋಸ್ಟರ್ ಮತ್ತು ಕರಪತ್ರಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ನಡೆಸಲಾಯಿತು, ಅದು ಕೇವಲ (No vote to BJP) ನಾಲ್ಕು ಪದಗಳನ್ನು ಒಳಗೊಂಡಿತ್ತು. ಆದರೆ ಈ ನಾಲ್ಕು ಪದಗಳು BJPಗೆ ಸರಿಯಾದ ಪೆಟ್ಟು ನೀಡಿತ್ತು.
Bengalis across the world saying "No Vote To BJP".#NoVoteToBJP pic.twitter.com/7vXwu6NOxL
— No Vote To BJP (@No_Vote_To_BJP) April 24, 2021
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಅನಿವಾಸಿ ಭಾರತೀಯರು (NRI) ಕರ್ನಾಟಕದ 2023ರ ಚುನಾವಣೆಯಲ್ಲಿ BJPಗೆ ಮತ ಹಾಕಬೇಡಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂಬ ವಿಡಿಯೋ ಇತ್ತೀಚಿನದಲ್ಲ. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ BJP ವಿರುದ್ದ ಮಾಡಿದ ಪ್ರಚಾರ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: BJP ವಿರುದ್ದದ ಜನಾಕ್ರೋಶದ ವಿಡಿಯೋ ಕರ್ನಾಟಕದ್ದೆ?

