ಫ್ಯಾಕ್ಟ್‌ಚೆಕ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಿಚ್ ಒಣಗಿಸಲು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಬಳಸಿದ್ದು ನಿಜವೇ?

ಚೆನ್ನೈ ಸೂಪರ್ ಕಿಂಗ್ಸ್  ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ IPL ಕ್ರಿಕೆಟ್‌ನ ಫೈನಲ್ ಪಂದ್ಯ ದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿ ಕಪ್ ತನ್ನದಾಗಿಸಿಕೊಂಡಿತ್ತು. ಪಂದ್ಯಕ್ಕೂ ಮೊದಲು ಬಾರಿ ಮಳೆಯಿಂದ ನರೇಂದ್ರ ಮೋದಿ ಸ್ಟೇಡಿಯಂ ಜಲಾವೃತ್ತವಾಗಿತ್ತು.

https://twitter.com/Chandish07/status/1663388670613925893

ಅಹಮದಾಬಾದ್‌ನಲ್ಲಿ  ಮುಕ್ತಾಯವಾದ ಐಪಿಎಲ್‌ 16ನೇ ಆವೃತ್ತಿಯ ಫೈನಲ್‌ ಪಂದ್ಯದ ವೇಳೆ ಮಳೆಯಿಂದಾಗಿ ನರೇಂದ್ರ ಮೋದಿ ಕ್ರೀಡಾಂಗಣದ ತುಂಬ ನೀರು ತುಂಬಿಕೊಂಡಿತ್ತು. ಪಿಚ್ ಒಣಗಿಸಲು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಯನ್ನು ಬಳಸಲಾಗಿದೆ ಎಂದು ಹೇಳುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

“ಗುಜರಾತ್ ಮಾಡೆಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಪಿಚ್ ಅನ್ನು ಅತ್ಯಾಧುನಿಕ ಸಲಕರಣೆಯಾದ ಹೇರ್ ಡ್ರೈಯರ್ ನಲ್ಲಿ ಒಣಗಿಸಲಾಗುತ್ತಿದೆ..!! ಇಡೀ ಫೀಲ್ಡ್ ಒಣಗಿಸಲು ಎಷ್ಟು ವರ್ಷ ಬೇಕಾಗಬಹುದು ಫ್ರೆಂಡ್ಸ್ ಎಂದು ವ್ಯಂಗ್ಯವಾಗಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ನಿಜವಾಗಿಯೂ  ಐಪಿಎಲ್ ಫೈನಲ್ ಪಂದ್ಯದ ವೇಳೆ ಪಿಚ್ ಒಣಗಿಸಲು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ಬಳಸಲಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 5, 2020 ರಂದು ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಪಂದ್ಯದ ವೇಳೆ ಪಿಚ್ ಒಣಗಿಸುತ್ತಿರುವ ಫೋಟೊ ಎಂದು ತಿಳಿದುಬಂದಿದೆ.

ವೈರಲ್ ಫೋಟೊಗಳನ್ನುಜನವರಿ 2020 ರಲ್ಲಿ ಗುವಾಹಟಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಪಂದ್ಯಕ್ಕೆ ಸಂಬಂಧಿಸಿವೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಪಂದ್ಯದ ವೇಳೆ ಮಳೆ ಸುರಿದಿದ್ದರಿಂದ ಕ್ರೀಡಾಂಗಣದ ಸಿಬ್ಬಂದಿ ಐರನ್ ಬಾಕ್ಸ್ ಹಾಗೂ ಡ್ರೈಯರ್ ಮೂಲಕ ಪಿಚ್ ಒಣಗಿಸಲು ಯತ್ನಿಸಿದರು. ಆ ಸಮಯದಲ್ಲಿ ಬಿಸಿಸಿಐ ಈ ರೀತಿ ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸಬೇಕಾಯಿತು.

ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಫೋಟೋಗಳು CSK vs GT ಪಂದ್ಯ ವೇಳೆ ಪಿಚ್ ಒಣಗಿಸುತ್ತಿರುವುದಲ್ಲ. ಈ ಫೋಟೊಗಳು 2020 ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಗುವಾಹಟಿಯಲ್ಲಿ ನಡೆದ ಪಂದ್ಯದ ವೇಳೆಯದ್ದು  ಎಂದು BOOM ಫ್ಯಾಕ್ಟ್‌ಚೆಕ್ ತಂಡ ವರದಿ ಮಾಡಿದೆ.

ಹೇರ್ ಡ್ರೈಯರ್‌ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜನವರಿ 2020 ರಲ್ಲಿ ಪ್ರಕಟವಾದ ಹಲವಾರು ವರದಿಗಳು ಸಿಕ್ಕಿದೆ.  ಜನವರಿ 5 ರಿಂದ ಇಂಡಿಯನ್ ಎಕ್ಸ್‌ಪ್ರೆಸ್‌ನ ಒಂದು ವರದಿಯು ಶ್ರೀಲಂಕಾ ವಿರುದ್ಧ T20 ಮೊದಲು ಗುವಾಹಟಿ ಪಿಚ್ ಅನ್ನು ಒಣಗಿಸಲು ಹೇರ್ ಡ್ರೈಯರ್, ಸ್ಟೀಮ್ ಐರನ್ ಬಳಸಲಾಗಿದೆ ಎಂದಿದೆ.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಿಚ್ ಅನ್ನು ಒಣಗಿಸಲು ಹೇರ್ ಡ್ರೈಯರ್ ಮತ್ತು ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಗಳನ್ನು ಹೇಗೆ ಬಳಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ, ಭಾರತ ಮತ್ತು ಶ್ರೀಲಂಕಾ ನಡುವಿನ T20 ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು.

ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಮಳೆಯಲ್ಲಿ ಒದ್ದೆಯಾಗಿದ್ದ ಪಿಚ್ ಅನ್ನು ಸ್ಪಂಜುಗಳನ್ನು ಬಳಸಿ ಒಣಗಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಿವೆ. ಇವುಗಳಿಗೆ ಸಂಬಂಧಿಸಿದ ಕೆಲವು ಫೋಟೋಗಳನ್ನೂ ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, CSK ಮತ್ತು ಗುಜರಾತ್ ನಡುವಿನ ಪಂದ್ಯದ ವೇಳೇ ಸುರಿದ ಮಳೆಯಿಂದ ಒದ್ದೆಯಾಗಿದ್ದ ಪಿಚ್‌ ಅನ್ನು ಒಣಗಿಸಲು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಬಳಸಲಾಗಿದೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬಂಧನದ ವೇಳೆ ಕುಸ್ತಿಪಟುಗಳು ನಗುತ್ತಾ ಸೆಲ್ಫಿ ತೆಗೆದುಕೊಂಡರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights