ಫ್ಯಾಕ್ಟ್‌ಚೆಕ್ : ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಯನ್ನು ಕೊಡುವುದಿಲ್ಲವೇ?

ಮುಸ್ಲಿಂ ಸಮುದಾಯನ್ನ್ನು ಗುರಿಯಾಗಿಸಿಕೊಂಡ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ. “ಮುಸ್ಲಿಮರಿಗೆ ಪೌರತ್ವ ನೀಡದ ವಿಶ್ವದ ಏಕೈಕ ದೇಶ ಜಪಾನ್. ಹಾಗೂ ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಗಳನ್ನು ನೀಡಲಾಗುವುದಿಲ್ಲ. ಇಸ್ಲಾಂ ಪ್ರಚಾರವನ್ನು ಮಾಡುವಂತಿಲ್ಲ, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅರಬಿಕ್ ಕಲಿಸುವಂತಿಲ್ಲ ಎಂಬ ಬರದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಮುಸಲ್ಮಾನರಿಗೆ ಪೌರತ್ವ ಬಿಡಿ ಬಾಡಿಗೆಗೆ ಮನೆಯೂ ಕೊಡದ ಜನತ್ತಿನ ಏಕಕೈಕ ದೇಶವಿದು ಎಂಬ ಟೈಟತ್‌ನೊಂದಿಗೆ ಲೇಕನವನ್ನು ಪ್ರಕಟಿಸಿದೆ. ಹಾಗಿದ್ದರೆ ಈ ಲೇಖನದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮುಸ್ಲಿಮರಿಗೆ ಪೌರತ್ವ ನೀಡದ ವಿಶ್ವದ ಏಕೈಕ ದೇಶ ಜಪಾನ್. ಹಾಗೂ ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಗಳನ್ನು ನೀಡಲಾಗುವುದಿಲ್ಲ. ಇಸ್ಲಾಂ ಪ್ರಚಾರವನ್ನು ಮಾಡುವಂತಿಲ್ಲ, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅರಬಿಕ್ ಕಲಿಸುವಂತಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ ಮತ್ತು ಲೇಖನದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ಇದು ಸುಳ್ಳು ಎಂದು ತಿಳಿದು ಬಂದಿದೆ.

ಜಪಾನಿನ ರಾಷ್ಟ್ರೀಯ ಕಾನೂನು ಮತ್ತು ವಲಸೆ ನೀತಿ ದಾಖಲೆಯಲ್ಲಿ ಇಂತಹ ಧರ್ಮದವರಿಗೆ ಪೌರತ್ವ ನೀಡುವುದಿಲ್ಲ ಎಂದು ಬರೆದಿಲ್ಲ. ಅಲ್ಲದೆ, ಜಪಾನ್ ಸಂವಿಧಾನದ 14 ನೇ ವಿಧಿಯು:’ಕಾನೂನಿನ ಅಡಿಯಲ್ಲಿ ಎಲ್ಲಾ ಜನರು ಸಮಾನರು ಮತ್ತು ಜನಾಂಗ, ಮತ, ಲಿಂಗ, ಸಾಮಾಜಿಕ ಸ್ಥಾನಮಾನ ಅಥವಾ ಕುಟುಂಬ ಮೂಲದ ಕಾರಣದಿಂದಾಗಿ ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಸಂಬಂಧಗಳಲ್ಲಿ ಯಾವುದೇ ತಾರತಮ್ಯ ಇರಬಾರದು’ ಎಂದು ತಿಳಿಸುತ್ತದೆ.

20 ನೇ ವಿಧಿಯ ಪ್ರಕಾರ ‘ಧಾರ್ಮಿಕ ಸ್ವಾತಂತ್ರ್ಯವನ್ನು ಎಲ್ಲರಿಗೂ ಖಾತರಿಪಡಿಸಲಾಗಿದೆ’ ಎಂದು ತಿಳಿಸುತ್ತದೆ. ಜಪಾನ್‌ ನಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಂ ಸಮುದಾಯದವರಿದ್ದಾರೆ. ಅವರ ಪ್ರಾರ್ಥನಾ ಸ್ಥಳಗಳಾದ ಪ್ರಸಿದ್ಧ ಮಸೀದಿಗಳು ಇವೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಅರೆಬಿಕ್ ಸಹ ಕಲಿಸಿಕೊಡಲಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಪಾನ್ ದೇಶವು ಮುಸ್ಲಿಂ ಸಮುದಾಯದ ಜನರಿಗೆ ಪೌರತ್ವವನ್ನು ನಿರಾಕರಿಸಿದೆ, ಅಲ್ಲದೆ ಮನೆಯನ್ನು ಬಾಡಿಗೆಗೆ ನೀಡುವುದಿಲ್ಲ ಎಂಬ ಪ್ರತಿಪಾದನೆ ಸುಳ್ಳು ಹಾಗೂ ಮುಸ್ಲಿಂ ದ್ವೇಷದಿಂದ ಕೂಡಿದೆ.

ಭಾರತದಲ್ಲಿ ಇರುವ ಜಾತಿ ವ್ಯವಸ್ಥೆ, ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಅಸಮಾನತೆ ಬಗ್ಗೆ ಎಂದೂ ಮಾತನಾಡದ ಈ ಬಲಪಂಥೀಯ ಬೆಂಬಲಿಗರು ಜಪಾನ್ ದೇಶದಲ್ಲಿ ಇಲ್ಲದಿರುವ ಕಾನೂನನ್ನು ಮುಸ್ಲಿಂ ದ್ವೇಷದ ಹಿನ್ನಲೆಯಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ “ಓನ್ಲಿ ಫಾರ್ ವೆಜ್” ಮತ್ತು ಜಾತಿ ಕೇಳಿ ಮನೆ ನೀಡುವುದು ಸಂವಿಧಾನ ಮತ್ತು ಮನುಷತ್ವ ವಿರೋಧಿಯಲ್ಲವೇ? ಇವುಗಳ ಬಗ್ಗೆ ಜಾಗೃತಿ ಮೂಡಿಸಬೇಕಲ್ಲವೇ? ಅದನ್ನು ಬಿಟ್ಟು ಜಪಾನ್ ದೇಶದಲ್ಲಿ ಮುಸ್ಲಿಮರಿಗೆ ಮನೆ ನೀಡುವುದಿಲ್ಲ ಎಂದು ಸುಳ್ಳು ಮಾಹಿತಿ ನೀಡುವುದು ಸರಿಯೇ ಎಂದು ಪ್ರಶ್ನಿಸಬೇಕಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಭಾರತ ಮಾತೆಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights