ಫ್ಯಾಕ್ಟ್ಚೆಕ್ : ರಾಮನ ದರ್ಶನಕ್ಕೆ ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂಬುದು ನಿಜವೇ?
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತ ಮುಕ್ತಾಯವಾಗಿ ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಪೋಸ್ಟ್ವೊಂದು ವೈರಲ್ ಆಗಿದ್ದು ‘ಅಳಿದು ಹೋಗಿದೆ ಎನ್ನಲಾದ ಜಟಾಯು ಪಕ್ಷಿಗಳು ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ಆಗಮಿಸಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ರಾವಣನು ಸೀತೆಯನ್ನು ಅಪಹರಣ ಮಾಡುವಾಗ ಪಕ್ಷಿಗಳ ರಾಜನಾದ ಜಟಾಯು ರಕ್ಷಿಸಲು ಪ್ರಯತ್ನಿಸಿದ. ಅದರಿಂದ ಜಟಾಯುವಿನ ಪ್ರಾಣವು ಹೋಯಿತು ಎಂದು ಹೇಳಲಾಗುವುದು. ಆದರೆ ರಾಮಾಯಣದ ಪ್ರಕಾರ ಸೀತಾ ದೇವಿಯು ರಕ್ಷಿಸಲು ಹೋಗಿದ್ದು ಜಟಾಯು ಅಲ್ಲ ಅವರ ತಂದೆ ಅರುಣ ಎಂದು ಹೇಳಲಾಗುವುದು.

ಈ ಕತೆ ಏನೆ ಇರಲಿ ಈಗ ಅಯೋಧ್ಯಗೆ ಜಟಾಯು ಆಗಮಿಸಿವೆ. ರಾಮಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಜಟಾಯು ಪಕ್ಷಿಗಳು ಆಗಮಿಸಿವೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ರಾಮಾಯಣ ಕಾಲದ ಜಟಾಯು ಪಕ್ಷಿಗಳಂತೆ, ಅಯೋಧ್ಯ ರಾಮಮಂದಿರದ ಉದ್ಗಾಟನೆಗೆ ಸಾಕ್ಷಿಯಾಗಲು ಪಕ್ಷಿಗಳು ಆಗಮಿಸಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿರುವ ವಿಡಿಯೋ ಮತ್ತು ಫೋಟೊಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಕಂಡುಬರುವ ಪಕ್ಷಿಗಳು ಆಕ್ಸಿಪಿಟ್ರಿಡೆ ಪ್ರಭೇದಕ್ಕೆ ಸೇರಿದ ರಣಹದ್ದುಗಳು ಎಂದು ಕಂಡುಬಂದಿದೆ.

ವಾಸ್ತವವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾ ವಿಡಿಯೋ ಮತ್ತು ಫೋಟೊಗಳು ಪ್ರಸ್ತುತ ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದಲ್ಲ, ಈ ಫೊಟೋಗಳು 2021ರಿಂದ ಟ್ವಿಟರ್ನಲ್ಲಿ ಪ್ರಸಾರವಾಗುತ್ತಿವೆ. ಈ ಫೋಟೊಗೂ ರಾಮಮಂದಿರಕ್ಕೂ ಸಂಬಂಧವಿಲ್ಲ.
ಹಳೆಯ ಅಂದರೆ 2021ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಕದ್ದು ರಾಮಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಜಟಾಯು ಅಯೊಧ್ಯೆಗೆ ಬಂದಿವೆ ಎಂದು ಪ್ರತಿಪಾದಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪ್ರಧಾನಿ ಮೋದಿ ಆಡಳಿತಾವದಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಒಬ್ಬ ನಾಗರಿಕನೂ ಸವನಪ್ಪಿಲ್ಲವೇ?

