ಫ್ಯಾಕ್ಟ್‌ಚೆಕ್ : ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳನ್ನು ನಿರ್ಮಿಸಲಾಗಿದೆಯೇ?

ಅಯೋಧ್ಯೆಯಲ್ಲಿ ಇದೆ ತಿಂಗಳ ಜನವರಿ 22 ರಂದು ರಾಮಮಂದಿರ ಉದ್ಗಾಟನೆಗೊಳ್ಳಲಿದೆ. ಈ ರಾಮಲಲಾ ಮೂರ್ತಿ ಪ್ರತಿಷ್ಠಾಪಿಸುವ ಸಲುವಾಗಿ 25 ಸಾವಿರ ಹೋಮ ಕುಂಡಗಳನ್ನು ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಈ ದಿನದಂದು ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

Fact Check: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆಯೇ?

ಹಲವು ಸಾಮಾಜಿಕ ಮಾಧ್ಮಗಳ ಬಳಕೆದಾರರು ಇದೇ ವಿಡಿಯೋವನ್ನು ಹಂಚಿಕೊಂಡು ಜನವರಿ 22ರಂದು ರಾಮಮಂದಿರ ಉದ್ಘಾಟನೆಗೆ 25 ಸಾವಿರ ಯಜ್ಞ ಕುಂಡಗಳನ್ನು ನಿರ್ಮಾಣ ಮಾಡಲಾಗಿದೆ. ಈ ಐತಿಹಾಸಿಕ ಕ್ಷಣವನ್ನು ನೋಡಲು, ಎಲ್ಲಾ ರಾಜ್ಯ ಸರ್ಕಾರಗಳು ಜನವರಿ 22 ಅನ್ನು ಸರ್ಕಾರಿ ರಜೆ ಎಂದು ಘೋಷಿಸಬೇಕು. ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ರಾಮ ಮಂದಿರ ಉದ್ಘಾಟನೆಯ ಸಂದರ್ಭಕ್ಕಾಗಿ ಅಯೋಧ್ಯೆಯಲ್ಲಿ 25 ಸಾವಿರ ಹೋಮ ಕುಂಡವನ್ನು ತಯಾರು ಮಾಡಲಾಗಿದೆ ಎಂದು ವೀಡಿಯೋ ಒಂದು ವೈರಲ್ ಆಗಿದೆ. “ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಅಯೋಧ್ಯೆಯಲ್ಲಿ 25 ಸಾವಿರ ಹೋಮ ಕುಂಡ ತಯಾರು ಮಾಡಲಾಗಿದೆ” ಎಂದು ಪ್ರತಿಪಾದಿಸಿ ಫೇಸ್‌ಬುಕ್, ಇನ್‌ಸ್ಟಾ ಮತ್ತು ಎಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಅಯೋರ್ಧಯಯಲ್ಲಿ 25ಸಾವಿರ ಹೋಮ ಕುಂಡಗಳನ್ನು ನಿರ್ಮಿಸಲಾಗಿದೆಯೇ ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಯೂಟ್ಯೂಬ್ ವಿಡಿಯೋವೊಂದು ಲಭ್ಯವಾಗಿವೆ. ಡಿಸೆಂಬರ್ 18, 2023ರ ರಿಂಕೂ ರೈ ವ್ಲಾಗ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹೋಮ ಕುಂಡಗಳು ವಾರಣಾಸಿಯ ಸ್ವರವೇದ ಮಹಾಮಂದಿರ ಧಾಮದ ಮಹಾಯಜ್ಞ ಕುಂಡಗಳು ಎಂದಿದೆ.

ಲಭ್ಯವಾದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಯೂಟ್ಯೂಬ್‌ನಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ,  ಡಿಸೆಂಬರ್ 12, 2023ರಂದು ಡಿಸ್ಕವರ್ ಬ್ರಾಜ್‌ ಚಾನೆಲ್‌ ನಲ್ಲಿ ಲಭ್ಯವಾದ ವೀಡಿಯೋ ವೈರಲ್‌ ವೀಡಿಯೋವನ್ನು ಹೋಲುತ್ತಿರುವುದನ್ನು ಕಂಡುಬಂದಿದೆ.

ವೈರಲ್ ವಿಡಿಯೋ ವಾಸ್ತವವಾಗಿ ವಾರಣಾಸಿಗೆ ಸಂಬಂದಿಸಿದೆ  ವಾರಾಣಸಿಯ ಸ್ವರವೇದ್‌ ಮಹಾ ಮಂದಿರದಲ್ಲಿ 25 ಸಾವಿರ ಹೋಮ ಕುಂಡಗಳಲ್ಲಿ ಮಹಾಯಜ್ಞ ನಡೆಲಾಗಿದೆ ಎಂದು ತಿಳಿದುಬಂದಿದೆ. ಮೇಲಿನ ವೀಡಿಯೋದ ದೃಶ್ಯಗಳು ಮತ್ತು ವೈರಲ್‌ ವೀಡಿಯೋದ ದೃಶ್ಯಗಳಿಗೆ ಸಾಮ್ಯತೆಗಳಿರುವುದನ್ನು ಕಾಣಬಹುದು.

ಡಿಸೆಂಬರ್ 17, 2023ರ ಜಾಗರಣ್‌ ವರದಿ ಪ್ರಕಾರ, “ಇಂದಿನಿಂದ ವಾರಾಣಸಿ ಸ್ವರವೇದ ಮಹಾ ಮಂದಿರ ವಿಹಂಗಮ ಯೋಗ ಸಂತ ಸಮಾಜದ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಈ ಸಂದರ್ಭ ದೇಶ-ವಿದೇಶದ ಭಕ್ತರು 25 ಸಾವಿರ ಕುಂಡೀಯ ಮಹಾಯಾಗವನ್ನು ಮಾಡಲಿದ್ದಾರೆ” ಎಂದಿದೆ.

Fact Check: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆಯೇ?

ಡಿಸೆಂಬರ್ 19, 2023ರ ಅಮರ್ ಉಜಾಲಾ ವರದಿಯ ಪ್ರಕಾರ, “25000 ಕುಂಡೀಯ ಸ್ವರವೇದ ಜ್ಞಾನ ಮಹಾ ಯಜ್ಞ ಮುಕ್ತಾಯಗೊಂಡಿತು, ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು” ಎಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಆಗಿರುವ ವಿಡಿಯೋ ವಾರಾಣಸಿಯಲ್ಲಿ ನಡೆದ ಸ್ವರವೇದ ಜ್ಞಾನ ಮಹಾಯಜ್ಞದ ಹೋಮ ಕುಂಡಗಳಾಗಿವೆ. ಇದು ಅಯೋಧ್ಯೆಯಲ್ಲಿ ರಾಮ ಮಂದಿರ ಸಮರ್ಪಣಾ ಕಾರ್ಯಕ್ರಮಕ್ಕೆ ನಿರ್ಮಾಣವಾದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಮನ ದರ್ಶನಕ್ಕೆ ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights