ಫ್ಯಾಕ್ಟ್‌ಚೆಕ್ : ಡಾ.ರಾಜ್‌ಕುಮಾರ್ ಮತ್ತು ಇಂದಿರಾ ಗಾಂಧಿ ಜೊತೆ ನರೇಂದ್ರ ಮೋದಿ ಚಿತ್ರ! ವಾಸ್ತವವೇನು?

ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು ಪ್ರಧಾನಿ ಮೋದಿ ಮೂಲ ಕಾಂಗ್ರೆಸ್ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್‌ ಗುಂಪಿನಲ್ಲಿ ನರೇಂದ್ರ ಮೋದಿ ಎಂಬ ಹೇಳಿಕೆಯೊಂದಿಗೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಕನ್ನಡದ ವರನಟ ಡಾ. ರಾಜಕುಮಾರ್ ಮತ್ತಿತರರು ಇರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮೇಲಿನ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

https://twitter.com/SikhJxttt/status/1744554751025615176?s=20

ಫೋಟೋಗಳ ಸೆಟ್‌ಗಳ 6 ಸೆಕೆಂಡುಗಳ ವಿಡಿಯೋ ಕ್ಲಿಪ್ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊ ಕ್ಲಿಪ್‌ನಲ್ಲಿರುವ ಒಂದು ಚಿತ್ರದಲ್ಲಿ ನರೇಂದ್ರ ಮೋದಿ ಅವರು ಇಂದಿರಾ ಗಾಂಧಿ ಮತ್ತು ಇತರರೊಂದಿಗೆ ಫೋಟೋದಲ್ಲಿದ್ದಾರೆ. ನರೇಂದ್ರ ಮೋದಿ ಅವರು ಕಾಂಗ್ರೆಸ್‌ನಿಂದ ಬಂದಿರುವ ಹಿನ್ನೆಲೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇಂದಿರಾಗಾಂಧಿ ಅವರು ಕಪ್ಪು ಬಿಳುಪಿನಲ್ಲಿ ಫ್ರೇಮ್‌ನಲ್ಲಿ ಕನ್ನಡ ಖ್ಯಾತ ನಟ ಡಾ. ರಾಜ್ ಕುಮಾರ್ ಅವರೊಂದಿಗೆ ಇರುವ ಹಳೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗ್ರೂಪ್ ಫೋಟೋದಲ್ಲಿ ಯುವಕ ನರೇಂದ್ರ ಮೋದಿ ಹಿಂದೆ ನಿಂತಿದ್ದಾರೆ.

ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಫೋಟೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು , “ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಬೆಂಬಲಿಗರಾಗಿದ್ದರು. ಈಗ ಏನು ಹೇಳುತ್ತೀರಿ? ಎಂದು ಪ್ರತಿಪಾದಿಸಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಮೋದಿ ಪ್ರಾರಂಭದಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರೆ ಎಂದು ಪರಿಶೀಲಿಸಿದಾಗ, ವೈರಲ್ ಫೋಟೊ ಫೇಕ್‌ ಎಂಬುದು ಸ್ಪಷ್ಟವಾಗಿದೆ.

ವಾಸ್ತವವಾಗಿ ವೈರಲ್ ಫೋಟೋದಲ್ಲಿ ಇರುವ ವ್ಯಕ್ತಿ ಪ್ರಧಾನಿ ಮೋದಿ ಅಲ್ಲ. ಬದಲಿಗೆ ಬೇರೆಯ ವ್ಯಕ್ತಿಯ ಚಿತ್ರವನ್ನು ಎಡಿಟ್ ಮಾಡಿ ಮೋದಿಯವರ ತಲೆಯನ್ನು ಇರಿಸಲಾಗಿದೆ.

fake 1

ಸಂಗೀತ ಕಾರ್ಯಕ್ರಮವೊಂದರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಡಾ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ವಾಸ್ತವವಾಗಿ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಅವರ ಕುಟುಂಬ ಸದಸ್ಯರು ಮತ್ತು ಕಲಾವಿದರು ಕಾಣಿಸಿಕೊಂಡಿದ್ದು, ಎಲ್ಲರೂ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡಿದ್ದಾರೆ. ನರೇಂದ್ರ ಮೋದಿಯವರ ಚಿತ್ರ ಬರುವಂತೆ ಅವರ ಹಿಂದೆ ಇರುವ ವ್ಯಕ್ತಿಯ ಚಿತ್ರವನ್ನು ಫೋಟೋಶಾಪ್ ಮಾಡಲಾಗಿದೆ.

ದಿ ಕ್ವಿಂಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಮೂಲ ಫೋಟೋ ಪ್ರಸಾರವಾಗಿದ್ದು, ಸಂಗೀತ ಸಮಾರಂಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಡಾ ರಾಜ್‌ಕುಮಾರ್” ಎಂದು ಶೀರ್ಷಿಕೆ ನೀಡಲಾಗಿದೆ. ಈ ಫೋಟೊದಲ್ಲಿ ನರೇಂದ್ರ ಮೋದಿ ಇಲ್ಲ ಎಂಬುದು ಸಷ್ಟ.

Remembering Rajkumar on his 90th birthday: The superstar who represented Kannada pride but refused to join politics.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬದುಕಿದದ್ದು 1984ರ ವರೆಗೆ, ಆಗ ನರೇಂದ್ರ ಮೋದಿ ವಯಸ್ಸು ಸುಮಾರು 34 ವರ್ಷ ಇರುವ ಸಾಧ್ಯತೆ ಇದೆ. ಆದರೆ ಫೋಟೊಶಾಪ್ ಮಾಡಿರುವ ಚಿತ್ರದಲ್ಲಿ ಇರುವ ಮೋದಿ ವಯಸ್ಸು 45 ರಿಂದ 50 ವರ್ಷ ಎಂದು ಹೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮೂಲ ಫೋಟೋದಲ್ಲಿ ಇಂದಿರಾ ಗಾಂಧಿ ಹಿಂದೆ ನಿಂತಿರುವ ವ್ಯಕ್ತಿ ಪ್ರಧಾನಿ ಮೋದಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ವೈರಲ್  ಪೋಸ್ಟ್‌ನಲ್ಲಿ, ಯಾವುದೋ ವ್ಯಕ್ತಿಯ ಮುಖಕ್ಕೆ, ಪ್ರಧಾನಿ ಮೋದಿ ಅವರ ಮುಖವನ್ನು  ಎಡಿಟ್ ಮಾಡಿ ಜೋಡಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತೀಯರಲ್ಲಿ ಕ್ಷಮೆಯಾಚಿಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights